JNU ವಿದ್ಯಾರ್ಥಿನಿ, Ph.D ಆಗಿದ್ದರೂ ಸೇಲ್ಸ್‌ಗರ್ಲ್‌ ಆಗಿ ದುಡಿದಾಕೆ, ಇಂದು ಕೇಂದ್ರ ಸಚಿವೆ!

First Published 18, Aug 2020, 4:02 PM

ನಿರ್ಮಲಾ ಸೀತಾರಾಮನ್‌ರವರಿಗೆ ಇಂದು 61ನೇ ಹುಟ್ಟುಹಬ್ಬದ ಸಂಭ್ರಮ. ಭಾರತದ ಹಣಕಾಸು ಸಚಿವೆ ಹಾಗೂ ಮಾಜಿ ರಕ್ಷಣಾ ಸಚಿವೆಯಾಗಿರುವ ನಿರ್ಮಲಾ ಕಾಂಗ್ರೆಸ್‌ ಪಕ್ಷ ಬೆಂಬಲಿಸುವ ಕುಟುಂಬದಲ್ಲಿದ್ದರೂ, ಬಿಜೆಪಿಯ ಪ್ರಮುಖ ನಾಯಕಿಯರಲ್ಲಿ ಗುರುತಿಸಿಕೊಳ್ಳುತ್ತಾರೆ. ಓದುವುದೆಂದರೆ ಇವರಿಗೆ ಅಚ್ಚುಮೆಚ್ಚು. ಆರ್ಥಿಕ ವಿಷಯದಲ್ಲಿ ಡಾಕ್ಟರೇಟ್ ಪಡೆದಿರುವ ನಿರ್ಮಲಾ ಸೇಲ್ಸ್‌ಗರ್ಲ್ ಆಗಿಯೂ ಕೆಲಸ ಮಾಡಿದ್ದಾರೆ. ಇಲ್ಲಿದೆ ನೋಡಿ ನಿರ್ಮಲಾ ಸೀತಾರಾಮನ್ ಕುರಿತಾದ ಕೆಲ ಇಂಟರೆಸ್ಟಿಂಗ್ ವಿಚಾರಗಳು

ನಿರ್ಮಲಾ ಸೀತಾರಾಮನ್ ಭಾರತದ ರಕ್ಷಣಾ ಮಂತ್ರಿ ಸ್ಥಾನ ಅಲಂಕರಿಸಿದ ಎರಡನೇ ಮಹಿಳಾ ನಾಯಕಿ ಹಾಗೂ ಪೂರ್ಣಾವಧಿ ಮುಗಿಸಿದ ಮೊದಲ ಮಹಿಳೆಯಾಗಿದ್ದಾರೆ. ಅಲ್ಲದೇ ಹಣಕಾಸು ಸಚಿವೆಯಾದ ಎರಡನೇ ನಾಯಕಿ. ಇದಕ್ಕೂ ಮುನ್ನ ಮಾಜಿ ಪ್ರಧಾನಿ ಇಂದಿರಾ ಗಾಂಧಿ 1970 ಹಾಗೂ 71ರಲ್ಲಿ ಅಲ್ಪಾವಧಿಗೆ ಹಣಕಾಸು ಸಚಿವೆಯಾಗಿ ಸೇವೆ ಸಲ್ಲಿಸಿದ್ದರು.

1959 ಆಗಸ್ಟ್ 18ರಂದು ತಮಿಳುನಾಡಿನ ಮಧುರೈನ ಮಧ್ಯಮ ವರ್ಗ ಕುಟುಂಬದಲ್ಲಿ ನಾರಾಯಣ ಸೀತಾರಾಮನ್ ಹಾಗೂ ಸಾವಿತ್ರಿ ಸೀತಾರಾಮನ್ ದಂಪತಿಯ ಪುತ್ರಿಯಾಗಿ  ನಿರ್ಮಲಾ ಸೀತಾರಾಮನ್ ಜನಿಸಿದರು. ತಾಯಿ ಗೃಹಿಣಿಯಾಗಿದ್ದರೆ ತಂದೆ ರೈಲ್ವೇ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

ಮದ್ರಾಸ್ ಹಾಗೂ ತಿರುಚಿನಪಲ್ಲಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿದ ನಿರ್ಮಲಾ, ಸೀತಾಲಕ್ಷ್ಮಿ ರಾಮಸ್ವಾಮಿ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಬಿಎ ಪದವಿ ಗಳಿಸಿದರು. ಬಳಿಕ 1984ರಲ್ಲಿ ಜೆಎನ್‌ಯುನಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು ಇಂಡೋ ಯೂರೋಪಿಯನ್ ಟೆಕ್ಸ್‌ಟೈಲ್ ಟ್ರೇಡ್ ವಿಷಯದಲ್ಲಿ PhD ಕೂಡಾ ಗಳಿಸಿದ್ದಾರೆ. ಇನ್ನು ಜೆಎನ್‌ಯುನಲ್ಲಿ ಅವರಿಗೆ ಪರಕಲ ಪ್ರಭಾಕರ್‌ರವರ ಪರಿಚಯವಾಗಿದ್ದು, 1986ರಲ್ಲಿ ಮದುವೆಯಾಗುತ್ತದೆ. ಬಳಿಕ ಇಬ್ಬರೂ ಲಂಡನ್‌ಗೆ ತೆರಳುತ್ತಾರೆ.

ಲಂಡನ್‌ಗೆ ತೆರಳಿದ ನಿರ್ಮಲಾ ಸೀತಾರಾಮನ್ ಪ್ರಿನ್ಸ್‌ ವಾಟರ್‌ಹೌಸ್‌ನಲ್ಲಿ ಸೀನಿಯರ್ ಮ್ಯಾನೇಜರ್ ಆಫ್ ರಿಸರ್ಚ್ ಆಂಡ್ ಎನಾಲಿಸಿಸ್ ಆಗಿ ಕಾರ್ಯ ನಿರ್ವಹಿಸುತ್ತಾರೆ. ಇನ್ನು ಪ್ರಿನ್ಸ್‌ ವಾಟರ್‌ಹೌಸ್‌ಗೆ ಸೇರುವುದಕ್ಕೂ ಮುನ್ನ ಅವರು ಲಂಡನ್‌ ರಿಜೆಂಟ್ ಸ್ಟ್ರೀಟ್‌ನಲ್ಲಿರುವ ಮನೆ ಅಲಂಕೃತ ವಸ್ತುಗಳನ್ನು ಮಾರಾಟ ಮಾಡುವ ಶಾಪ್ ಒಂದರಲ್ಲಿ ಸೇಲ್ಸ್‌ ಗರ್ಲ್‌ ಆಗಿಯೂ ಕೆಲಸ ನಿರ್ವಹಿಸಿದ್ದಾರೆ.

ಇಷ್ಟೇ ಅಲ್ಲದೇ ಯುಕೆಯ ಬಿಬಿಸಿ ವರ್ಲ್ಡ್‌ ಸರ್ವಿಸ್ ಆಂಡ್ ಅಗ್ರಿಕಲ್ಚರಲ್ ಇಂಜಿನಿಯರ್ಸ್‌ನಲ್ಲೂ ಕೆಲಸ ಮಾಡಿದ್ದಾರೆ.

1991ರಲ್ಲಿ ಕುಟುಂಬ ಸಮೇತರಾಗಿ ಮತ್ತೆ ಭಾರತಕ್ಕೆ ಮರಳುತ್ತಾರೆ. ಇನ್ನು ಗಂಡನ ಕುಟುಂಬ ಸಂಪೂರ್ಣವಾಗಿ ಕಾಂಗ್ರೆಸ್‌ ಪಕ್ಷ ಬೆಂಬಲಿಸುತ್ತಿದ್ದರೂ 2004ರಲ್ಲಿ ನಿರ್ಮಲಾ ಬಿಜೆಪಿಗೆ ಸೇರ್ಪಡೆಯಾಗುತ್ತಾರೆ. ಇನ್ನು ಬಿಜೆಪಿಗೆ ಸೇರ್ಪಡೆಯಾಗುವುದಕ್ಕೂ ಮೊದಲು 2003 ರಿಂದ 2005ರವರೆಎ ಅವರು ರಾಷ್ಟ್ರೀಯ ಮಹಿಳಾ ಸಮಿತಿಯ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಬಳಿಕ ಬಿಜೆಪಿಯ ವಕ್ತಾರೆಯಾಗಿ ಗುರುತಿಸಿಕೊಂಡ ನಿರ್ಮಲಾ ಸೀತಾರಾಮನ್ ಪಕ್ಷದ ಮುಖ ಹಾಗೂ ಧ್ವನಿಯಾಗುತ್ತಾರೆ. ಇದಾದ ಬಳಿಕ ಅವರು ಅನೇಕ ಟಿವಿ ಸಂದರ್ಶನ ಹಾಗೂ ಚರ್ಚಾ ಕಾರ್ಯಕ್ರಮದಲ್ಲೂ ಭಾಗಿಯಾಗುತ್ತಾರೆ.

ಶಾಸ್ತ್ರೀಯ ಸಂಗೀತವನ್ನು ಬಹಳಷ್ಟು ಇಷ್ಟಪಡುವ ನಿರ್ಮಲಾರಿಗೆ ಅದನ್ನು ಕೇಳುವುದೆಂದರೆ ಬಹಳ ಇಷ್ಟ, ಅಲ್ಲದೇ ಶ್ರೀ ಕೃಷ್ಣನ ಭಕ್ತೆಯೂ ಹೌದು. ಇನ್ನು ಪ್ರತಿನಿತ್ಯವೂ ಮೂರು ತಾಸು ಅವರು ಒಂಭತ್ತು ದಿನ ಪತ್ರಿಕೆಗಳನ್ನು ಓದಲು ಮೀಸಲಿಡುತ್ತಾರೆ. ರಾಜಕೀಯ ಪ್ರವೇಶಕ್ಕೂ ಮುನ್ನ ಅಡುಗೆ, ಟ್ರೆಕ್ಕಿಂಗ್ ಹಾಗೂ ಟ್ರಾವೆಲಿಂಗ್ ಇವು ಅವರ ಹವ್ಯಾಸಗಳಾಗಿತ್ತು.

ಇನ್ನು ಎಲ್ಲರಿಗೂ ಒಂದಿಲ್ಲೊಂದು ವೀಕ್ನೆಸ್‌ ಇದ್ದೇ ಇರುತ್ತೆ ಅದೇ ರೀತಿ ನಿರ್ಮಲಾರಿಗೂ ಒಂದು ತೊಡಕಿದೆ. ಹೌದು ನಿರರ್ಳವಾಗಿ ಇಂಗ್ಲೀಷ್ ಮಾತನಾಡಬಲ್ಲ ನಿರ್ಮಲಾರಿಗೆ ಹಿಂದಿ ಮೇಲೆ ಅಷ್ಟೊಂದು ಹಿಡಿತವಿಲ್ಲ ಎಂಬುವುದು ನಿಜ.

loader