MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ರೈಲಿನ ಟಾಯ್ಲೆಟ್‌ಗೆ ಬಿತ್ತು ಲಕ್ಷಾಂತರ ಮೌಲ್ಯದ ಪ್ರಯಾಣಿಕನ 'ಚಿನ್ನದ ಉಂಗುರ': ಮುಂದೇನಾಯ್ತು ನೀವೇ ನೋಡಿ!

ರೈಲಿನ ಟಾಯ್ಲೆಟ್‌ಗೆ ಬಿತ್ತು ಲಕ್ಷಾಂತರ ಮೌಲ್ಯದ ಪ್ರಯಾಣಿಕನ 'ಚಿನ್ನದ ಉಂಗುರ': ಮುಂದೇನಾಯ್ತು ನೀವೇ ನೋಡಿ!

ಚಲಿಸುವ ರೈಲಿನ ಶೌಚಾಲಯದ ಡ್ರೈನೇಜ್ ಪೈಪ್‌ಗೆ ಬಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಉಂಗುರವನ್ನು ರೈಲ್ವೆ ಸಿಬ್ಬಂದಿ ಹರಸಾಹಸಪಟ್ಟು ಹೊರತೆಗೆದಿದ್ದಾರೆ. ಗಲೀಜು ತುಂಬಿದ ಟ್ಯಾಂಕ್‌ನಿಂದ ಉಂಗುರವನ್ನು ಪತ್ತೆಹಚ್ಚಿದ್ದಾರೆ. ಮುಂದೇನಾಯ್ತು ಈ ಸುದ್ದಿ ಓದಿ.

2 Min read
Author : Sathish Kumar KH
Published : May 14 2026, 04:21 PM IST
Share this Photo Gallery
  • FB
  • TW
  • Linkdin
  • Whatsapp
15
ಟಾಯ್ಲೆಟ್‌ಗೆ ಬಿದ್ದ ಚಿನ್ನದ ಉಂಗುರ
Image Credit : Asianet News

ಟಾಯ್ಲೆಟ್‌ಗೆ ಬಿದ್ದ ಚಿನ್ನದ ಉಂಗುರ

ರೈಲಿನಲ್ಲಿ ಪ್ರಯಾಣಿಸುವಾಗ ನಮ್ಮ ಬೆಲೆಬಾಳುವ ವಸ್ತುಗಳು ಶೌಚಾಲಯದ ಪೈಪ್ ಅಥವಾ ಟ್ಯಾಂಕ್‌ಗೆ ಬಿದ್ದರೆ, ಅವು ಮತ್ತೆ ಸಿಗುತ್ತವೆ ಎಂಬ ಆಸೆಯನ್ನೇ ನಾವು ಬಿಟ್ಟುಬಿಡುತ್ತೇವೆ. ಆದರೆ, ಅಹಮದಾಬಾದ್ ರೈಲ್ವೆ ಸಿಬ್ಬಂದಿ ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಮೂಲಕ ಇಡೀ ದೇಶದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಚಲಿಸುವ ರೈಲಿನ ಶೌಚಾಲಯದ ಡ್ರೈನೇಜ್ ಪೈಪ್‌ಗೆ ಬಿದ್ದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಉಂಗುರವನ್ನು ರೈಲ್ವೆ ಸಿಬ್ಬಂದಿ ಹರಸಾಹಸ ಪಟ್ಟು ಹೊರತೆಗೆದು ಪ್ರಯಾಣಿಕನ ಮುಖದಲ್ಲಿ ನಗು ಮೂಡಿಸಿದ್ದಾರೆ.

Add Asianetnews Kannada as a Preferred SourcegooglePreferred
25
ಘಟನೆಯ ವಿವರ:
Image Credit : Asianet News

ಘಟನೆಯ ವಿವರ:

ಬಾಂಧ್ರಾ ಟರ್ಮಿನಸ್-ಭುಜ್ ಸ್ಪೆಷಲ್ ರೈಲಿನಲ್ಲಿ (ಗಾಡಿ ಸಂಖ್ಯೆ: 09037) ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರಿಗೆ ಈ ಅನಿರೀಕ್ಷಿತ ಘಟನೆ ಸಂಭವಿಸಿದೆ. ರೈಲಿನ ಬಿ-8 ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ಶೌಚಾಲಯ ಬಳಸುವಾಗ ಅವರ ಕೈಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಉಂಗುರ ಆಕಸ್ಮಿಕವಾಗಿ ಜಾರಿ ಡ್ರೈನೇಜ್ ಪೈಪ್ ಮೂಲಕ ನೇರವಾಗಿ ವೇಸ್ಟ್ ಟ್ಯಾಂಕ್‌ಗೆ ಬಿದ್ದಿದೆ. ಉಂಗುರ ಕೈತಪ್ಪಿ ಹೋಗುತ್ತಿದ್ದಂತೆಯೇ ಆತಂಕಕ್ಕೊಳಗಾದ ಪ್ರಯಾಣಿಕ, ಉಂಗುರ ಮತ್ತೆ ಸಿಗುವುದು ಅಸಾಧ್ಯ ಎಂದು ಭಾವಿಸಿದ್ದರು. ಆದರೂ ಧೈರ್ಯಗುಂದದೆ ರೈಲ್ವೆ ಅಧಿಕಾರಿಗಳಿಗೆ ದೂರು ನೀಡಿದರು.

Related Articles

Related image1
ಶಿವಮೊಗ್ಗ ಜನತೆಯ ಬೇಡಿಕೆ ಈಡೇರಿಕೆ: ಯಶವಂತಪುರ-ತಾಳಗುಪ್ಪ ರೈಲು ಪ್ರಯಾಣಿಕರಿಗೆ ಹ್ಯಾಪಿ ನ್ಯೂಸ್
Related image2
ಉತ್ತರ ಕರ್ನಾಟಕ ರೈಲ್ವೆ ಪ್ರಯಾಣಿಕರಿಗೆ ಸಿಹಿಸುದ್ದಿ: ಹುಬ್ಬಳ್ಳಿ, ವಿಜಯಪುರ ಜನರಿಗೆ ಈ ರೈಲಿನ ಟಿಕೆಟ್ ದರ ಇಳಿಕೆ!
35
ಅಪರೇಷನ್ ಅಹಮದಾಬಾದ್!
Image Credit : Asianet News

ಅಪರೇಷನ್ ಅಹಮದಾಬಾದ್!

ಪ್ರಯಾಣಿಕ ನೀಡಿದ ದೂರಿನ ಮೇರೆಗೆ ರೈಲ್ವೆ ಇಲಾಖೆ ತಕ್ಷಣವೇ ಸ್ಪಂದಿಸಿತು. ರೈಲು ಅಹಮದಾಬಾದ್ ನಿಲ್ದಾಣ ತಲುಪುತ್ತಿದ್ದಂತೆಯೇ ಪಶ್ಚಿಮ ರೈಲ್ವೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದನ್ನು ಒಂದು 'ಮಿಷನ್' ಆಗಿ ತೆಗೆದುಕೊಂಡರು. ಸೀನಿಯರ್ ಸೆಕ್ಷನ್ ಎಂಜಿನಿಯರ್ (C&W) ಸಂಜಯ್ ಯಾದವ್, ಸಿಟಿಎಸ್ ಸ್ಟಾಫ್ ವೀರೇಂದ್ರ ಕುಮಾರ್ ಸಿಂಗ್ ಮತ್ತು ಅವರ ತಂಡವು ಕಾರ್ಯಾಚರಣೆಗೆ ಇಳಿಯಿತು. 

ಶೌಚಾಲಯದ ಗಲೀಜು ತುಂಬಿದ ಟ್ಯಾಂಕ್, ಪೈಪ್‌ಲೈನ್ ಮತ್ತು ಅಲ್ಲಿನ ಭೀಕರ ದುರ್ವಾಸನೆಯನ್ನೂ ಲೆಕ್ಕಿಸದೆ ಸಿಬ್ಬಂದಿ ಗಂಟೆಗಳ ಕಾಲ ಶ್ರಮಿಸಿದರು. ಕೊನೆಗೆ ಎಲ್ಲರ ನಿರೀಕ್ಷೆಯನ್ನು ನಿಜವಾಗಿಸಿ, ಕೊಳಚೆ ತುಂಬಿದ ಟ್ಯಾಂಕ್‌ನೊಳಗೆ ಉಂಗುರವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು.

45
ಪ್ರಯಾಣಿಕನ ಕಣ್ಣಲ್ಲಿ ಆನಂದಬಾಷ್ಪ
Image Credit : Asianet News

ಪ್ರಯಾಣಿಕನ ಕಣ್ಣಲ್ಲಿ ಆನಂದಬಾಷ್ಪ

ತನ್ನ ಉಂಗುರ ಮತ್ತೆ ಸಿಗುವುದಿಲ್ಲ ಎಂದು ನೊಂದುಕೊಂಡಿದ್ದ ಪ್ರಯಾಣಿಕನಿಗೆ ಸಿಬ್ಬಂದಿ ಉಂಗುರವನ್ನು ಹಸ್ತಾಂತರಿಸಿದಾಗ ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಈ ಕುರಿತು ಅಹಮದಾಬಾದ್ ಡಿಆರ್‌ಎಂ (DRM) ತಮ್ಮ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಫೋಟೋ ಸಹಿತ ಪೋಸ್ಟ್ ಮಾಡಿದ್ದಾರೆ. 'ಭಾರತೀಯ ರೈಲ್ವೆ ಪ್ರಯಾಣಿಕರನ್ನು ಕೇವಲ ಅವರ ನಿಲ್ದಾಣಕ್ಕೆ ತಲುಪಿಸುವುದಿಲ್ಲ, ಬದಲಾಗಿ ಅವರ ನಂಬಿಕೆ ಮತ್ತು ಭಾವನೆಗಳನ್ನೂ ಸುರಕ್ಷಿತವಾಗಿಡುತ್ತದೆ' ಎಂದು ಬರೆದುಕೊಂಡಿದ್ದಾರೆ. ರೈಲ್ವೆ ಅಧಿಕಾರಿ ವೇದ ಪ್ರಕಾಶ್ ಅವರು ಇಡೀ ತಂಡದ ಪ್ರಾಮಾಣಿಕತೆ ಮತ್ತು ಕರ್ತವ್ಯ ನಿಷ್ಠೆಯನ್ನು ಶ್ಲಾಘಿಸಿದ್ದಾರೆ.

55
ರೈಲ್ವೆ ಸಿಬ್ಬಂದಿ ಕಾರ್ಯಕ್ಕೆ ಸಲಾಂ
Image Credit : Asianet News

ರೈಲ್ವೆ ಸಿಬ್ಬಂದಿ ಕಾರ್ಯಕ್ಕೆ ಸಲಾಂ

ಸದ್ಯ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾವಿರಾರು ಜನರು ರೈಲ್ವೆ ಸಿಬ್ಬಂದಿಯ ಕಾರ್ಯಕ್ಕೆ ಸಲಾಂ ಎನ್ನುತ್ತಿದ್ದಾರೆ. ರೈಲ್ವೆ ಕೇವಲ ಒಂದು ಸಾರಿಗೆ ವ್ಯವಸ್ಥೆಯಲ್ಲ, ಅದು ಜನರ ಭಾವನೆಗಳೊಂದಿಗೆ ಬೆರೆತಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಆದರೂ, ಪ್ರಯಾಣದ ಸಮಯದಲ್ಲಿ ಪ್ರಯಾಣಿಕರು ತಮ್ಮ ಬೆಲೆಬಾಳುವ ವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸುವುದು ಅತ್ಯಗತ್ಯ ಎಂದು ರೈಲ್ವೆ ಅಧಿಕಾರಿಗಳು ಈ ಮೂಲಕ ಮನವಿ ಮಾಡಿದ್ದಾರೆ.

🚆 चलती ट्रेन के टॉयलेट में गिर गई लाखों की सोने की अंगूठी…

यात्री ने सोचा अब अंगूठी कभी वापस नहीं मिलेगी। 💍😢

गाड़ी संख्या 09037 बांद्रा टर्मिनस–भुज स्पेशल के कोच B-8 में सफर के दौरान अंगूठी सीधे वॉशरूम के ड्रेनेज पाइप और टैंक में गिर गई।

लेकिन अहमदाबाद स्टेशन पहुंचते ही… pic.twitter.com/Crj8TLIq0b

— DRM Ahmedabad (@drmadiwr) May 12, 2026

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಭಾರತೀಯ ರೈಲ್ವೆ
ರೈಲು
ಶೌಚಾಲಯ
ಚಿನ್ನ
ಚಿನ್ನದ ಬೆಲೆ

Latest Videos
Recommended Stories
Recommended image1
ಸನಾತನ ಧರ್ಮ ನಿರ್ಮೂಲನೆ ಮಾಡಲೆಂದೇ ನಾವು ಹುಟ್ಟಿದ್ದು; ನಾಲಿಗೆ ಹರಿ ಬಿಟ್ಟ ಸಿಎಂ ವಿಜಯ್ ಜೋಸೆಫ್ ಪಕ್ಷದ ಶಾಸಕ ಮುಸ್ತಫಾ
Recommended image2
Brahmagantu ರೋಚಕ ಟ್ವಿಸ್ಟ್​: ವರ್ಷಗಳಿಂದ ಕಾಯ್ತಿದ್ದ ಅನಾಮಿಕ ನಾಯಕನ ಎಂಟ್ರಿ! ಯಾರೀ ಗುರು
Recommended image3
ಯುಪಿಯಲ್ಲಿ ಚಂಡಮಾರುತ ಆರ್ಭಟ, ತಗಡಿನ ಶೆಡ್ ಸಮೇತ ಹಾರಿಹೋದ ವ್ಯಕ್ತಿ, 50ಅಡಿ ಎತ್ತರ 300 ಮೀಟರ್ ದೂರ ಬಿದ್ದು ಬದುಕಿತು ಗಟ್ಟಿ ಜೀವ
Related Stories
Recommended image1
ಶಿವಮೊಗ್ಗ ಜನತೆಯ ಬೇಡಿಕೆ ಈಡೇರಿಕೆ: ಯಶವಂತಪುರ-ತಾಳಗುಪ್ಪ ರೈಲು ಪ್ರಯಾಣಿಕರಿಗೆ ಹ್ಯಾಪಿ ನ್ಯೂಸ್
Recommended image2
ಉತ್ತರ ಕರ್ನಾಟಕ ರೈಲ್ವೆ ಪ್ರಯಾಣಿಕರಿಗೆ ಸಿಹಿಸುದ್ದಿ: ಹುಬ್ಬಳ್ಳಿ, ವಿಜಯಪುರ ಜನರಿಗೆ ಈ ರೈಲಿನ ಟಿಕೆಟ್ ದರ ಇಳಿಕೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved