ಭಾರತದ ರಕ್ಷಣಾ ಬಲದ ಮುಂದೆ ಹತ್ತಿರಕ್ಕೂ ನಿಲ್ಲಲ್ಲ ಕೆನಾಡ,ಇಲ್ಲಿದೆ ಉಭಯ ದೇಶದ ಮಿಲಿಟರಿ ಶಕ್ತಿ!
ಖಲಿಸ್ತಾನ ಉಗ್ರರಿಗೆ ಬೆಂಬಲ ನೀಡುತ್ತಾ, ಭಾರತವನ್ನು ದ್ವೇಷಿಸುತ್ತಿರುವ ಕೆನಾಡ ಕೋಲಾಹಲ ಸೃಷ್ಟಿಸಿದೆ. ಉಗ್ರನ ಹತ್ಯೆ ಹಿಂದೆ ಭಾರತವನ್ನು ದೂಷಿಸುವ ಮೂಲಕ ಉಭಯ ದೇಶದ ಸಂಬಂಧಕ್ಕೆ ಕತ್ತರಿ ಹಾಕಿದ್ದಾರೆ. ಕೆನಾಡಗೆ ತಕ್ಕ ತಿರುಗೇಟು ನೀಡಲಾಗಿದೆ. ಇಷ್ಟೇ ಅಲ್ಲ ಭಾರತದಲ್ಲಿ ಕಾರ್ಯಾಚರಣೆ ಆರಂಭಗೊಂಡಿದೆ. ಇದರ ನಡುವೆ ವಿಶ್ವಮಟ್ಟದಲ್ಲಿ ಭಾರತ ಹಾಗೂ ಕೆನಾಡ ದೇಶದ ಪ್ರಾಬಲ್ಯ, ತಂತ್ರಜ್ಞಾನ, ಮಿಲಿಟಿ ಶಕ್ತಿ ಸೇರಿದಂತೆ ಹಲವು ವಿಚಾರಗಳು ಚರ್ಚೆಯಾಗುತ್ತಿದೆ. ಭಾರತ ಹಾಗೂ ಕೆನಾಡದ ಮಿಲಿಟರಿ ಶಕ್ತಿ ಹೇಗಿದೆ?
ಭಾರತ ಹಾಗೂ ಕೆನಡಾ ಸಂಬಂದ ಹದಗೆಟ್ಟಿದೆ. ಭಾರತದ ವಿರುದ್ಧ ಖಲಿಸ್ತಾನಿ ಉಗ್ರರು ಬಾಲಬಿಚ್ಚಲು ಆರಂಭಿಸಿದ್ದಾರೆ. ಇದಕ್ಕೆ ಕೆನಡಾ ಸರ್ಕಾರವೇ ಬೆಂಬಲ ನೀಡುತ್ತಿದೆ. ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ ಹತ್ಯೆ ಹಿಂದೆ ಭಾರತದ ಕೈವಾಡವಿದೆ ಅನ್ನೋ ಕೆನಡಾ ಆರೋಪದಿಂದ ಪರಿಸ್ಥಿತಿ ಹದಗೆಟ್ಟಿದೆ.
Agniveer
ಭಾರತ ಹಾಗೂ ಕೆನಾಡದ ಮಿಲಿಟರಿ ಶಕ್ತಿ ಮಾಹಿತಿ ನೋಡಿದರೆ ಭಾರತದ ಹತ್ತಿರಕ್ಕೂ ನಿಲ್ಲಲ್ಲ ಕೆನಾಡ. ವಿಶ್ವದ ಅತೀ ದೊಡ್ಡ ಸೈನಿಕರನ್ನು ಹೊಂದಿರುವ ಪೈಕಿ ಭಾರತಕ್ಕೆ 2ನೇ ಸ್ಥಾನ. ಕೆನಾಡಾಗೆ 38ನೇ ಸ್ಥಾನ
ಪ್ಯಾರಾಮಿಲಿಟರಿ ಶಕ್ತಿಯಲ್ಲಿ ಭಾರತದ ಸ್ಥಾನ 2. ಇನ್ನು ಕೆನಾಡ 50ನೇ ಸ್ಥಾನದಲ್ಲಿದೆ. ಮಿಲಿಟರಿ ಶಸ್ತ್ರಾಸ್ತ್ರ, ಅತ್ಯಾಧುನಿಕ ಸಲಕರಣೆ ಖರೀದಿ ಶಕ್ತಿಯಲ್ಲಿ ಭಾರತ 3ನೇ ಸ್ಥಾನದಲ್ಲಿದ್ದರೆ, ಕೆನಾಡ 15ನೇ ಸ್ಥಾನದಲ್ಲಿದೆ.
justin trudeau modi
ರಕ್ಷಣಾ ಬಜೆಟ್ ಗಾತ್ರಕ್ಕೆ ಹೋಲಿಸಿದರೆ ಭಾರತಕ್ಕೆ ವಿಶ್ವದಲ್ಲಿ 4ನೇ ಸ್ಥಾನದಲ್ಲಿದ್ದರೆ, ಕೆನಾಡಾ 13ನೇ ಸ್ಥಾನದಲ್ಲಿದೆ. ಒಟ್ಟು ಏರ್‌ಕ್ರಾಫ್ಟ್ ಸಂಖ್ಯೆಯಲ್ಲಿ ಭಾರತಕ್ಕೆ 4ನೇ ಸ್ಥಾನ ಕೆನಾಡಾಗೆ 28ನೇ ಸ್ಥಾನ.
ನೌಕಾಪಡೆಯಲ್ಲೂ ಭಾರತದ ಪ್ರಬಲ ದೇಶವಾಗಿ ಮುಂಚೂಣಿಯಲ್ಲಿದೆ. ಸಬ್ ಮರೀನ್, ಮೇಡ್ ಇನ್ ಇಂಡಿಯಾ ಯುದ್ಧ ನೌಕೆ ಸೇರಿದಂತೆ ಅತ್ಯಾಧುನಿಕಗೊಂಡಿರುವ ಭಾರತ ನೌಕಾಪಡೆಗೆ ವಿಶ್ವದಲ್ಲಿ 7ನೇ ಸ್ಥಾನ. ಕೆನಾಡಗೆ 42ನೇ ಸ್ಥಾನ
ಒಟ್ಟಾರೆ ಮಿಲಿಟರಿ ಶಕ್ತಿಯಲ್ಲಿ 145 ದೇಶಗಳ ಪೈಕಿ ಭಾರತ 4ನೇ ಸ್ಥಾನದಲಿದ್ದರೆ, ಕೆನಾಡ 27ನೇ ಸ್ಥಾನದಲ್ಲಿದೆ. ಆದರೂ ಕೆನಾಡಾ ಕಾಲು ಕೆರೆದುಕೊಂಡು ಭಾರತಕ್ಕೆ ಠಕ್ಕರ್ ನೀಡುತ್ತಿದೆ.
Canada Indian Issue
ಖಲಿಸ್ತಾನಿ ಉಗ್ರರ ಪರ ನಿಂತಿರುವ ಕೆನಾಡ ಸರ್ಕಾರ, ಉಗ್ರರಿಗೆ ಪೋಷಣೆ ಮಾಡುತ್ತಿದೆ. ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿಕೆಯಿಂದ ಭಾರತದಲ್ಲಿ ಆಕ್ರೋಶ ಹೆಚ್ಚಾಗಿದೆ. ಇತ್ತ ಭಾರತ ಖಲಿಸ್ತಾನಿ ಉಗ್ರರ ವಿರುದ್ದ ಕಾರ್ಯಾಚರಣೆ ಆರಂಭಿಸಿದೆ.