ಬೆಂಗಳೂರು ಬಳಿಕ ಗುಜರಾತ್‌ನಲ್ಲಿ HMPV ಪತ್ತೆ, ಭಾರತದಲ್ಲಿ 3ನೇ ವೈರಸ್ ಪ್ರಕರಣ!
ಚೀನಾದಲ್ಲಿ HMPV ಪ್ರಕರಣಗಳು ಹೆಚ್ಚಾಗುತ್ತಿದೆ. ವೈರಸ್ ತೀವ್ರವಾಗಿ ಹರಡುತ್ತಿರುವ ಬೆನ್ನಲ್ಲೇ ಇದೀಗ ಭಾರತದಲ್ಲಿ ಮೂರನೇ ಪ್ರಕರಣ ದಾಖಲಾಗಿದೆ. ಬೆಂಗಳೂರು ಬಳಿಕ ಗುಜರಾತ್‌ನಲ್ಲಿ 3ನೇ ಪ್ರಕರಣ ಪತ್ತೆಯಾಗಿದೆ.
ಚೀನಾದಲ್ಲಿ ಹ್ಯೂಮನ್ ಮೆಟಾನ್ಯೂಮೋವೈರಸ್(HMPV ) ಹೆಚ್ಚಾಗುತ್ತಿದೆ. ಮೆಲೇಷಿಯಾದಲ್ಲೂ ವೇಗವಾಗಿ ಹರಡುತ್ತಿದೆ. ಇದರ ಬೆನ್ನಲ್ಲೇ ಭಾರತದಲ್ಲೂ HMPV ವೈರಸ್ ಪತ್ತೆಯಾಗಿದೆ. ಇಂದು(ಜ.06) ಬೆಂಗಳೂರಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಇದೀಗ ಗುಜರಾತ್‌ನಲ್ಲಿ ಮೂರನೇ ಪ್ರಕರಣ ಪತ್ತೆಯಾಗಿದೆ.
ಜ್ವರ, ಕೆಮ್ಮು ಸಮಸ್ಯೆಯಿಂದ ಆಸ್ಪತ್ರೆ ದಾಖಲಾದ 2 ವರ್ಷದ ಮಗುವಿನಲ್ಲಿ ವೈರಸ್ ಪತ್ತೆಯಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ಮುಂದುವರಿದಿದೆ.ಅಹಮ್ಮದಾಬಾದ್‌ನ ಚಂದಖೆಡಾದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಗುವಿಗೆ ಜ್ವರ, ಕೆಮ್ಮು ಸಮಸ್ಯೆಗಳಿವೆ. ಆದರೆ ಆತಂಕ ಪಡುವು ಅವಶ್ಯಕತೆ ಇಲ್ಲ ಎಂದಿದ್ದಾರೆ.
ಇಂದು ಬೆಂಗಳೂರಲ್ಲಿ ಪತ್ತೆಯಾದ ಎರಡು ವೈರಸ್ ಪ್ರಕರಣಗಳನ್ನು ಭಾರತೀಯ ಕೌನ್ಸಿಲ್ ಆಫ್ ಮೆಡಿಕಲ್ ರೀಸರ್ಚ್(ICMR) ದೃಢಪಡಿಸಿದೆ. ದೇಶಾದ್ಯಂತ ಉಸಿರಾಟ ಸಂಬಂಧಿತ ಆರೋಗ್ಯ ಸಮಸ್ಯೆಗಳ ಮೇಲ್ವಿಚಾರಣೆಯನ್ನು ICMR ನಿರಂತರವಾಗಿ ಮಾಡುತ್ತಿದೆ. ಇದರ ಪರಿಣಾಮವಾಗಿ ಆರಂಭಿಕ ಹಂತದಲ್ಲಿ ವೈರಸ್ ಪತ್ತೆ ಮಾಲಾಗಿದೆ ಎಂದು ICMR ಹೇಳಿದೆ.
ಬೆಂಗಳೂರಿನಲ್ಲಿ ಪತ್ತೆಯಾಗಿರುವ 3 ತಿಂಗಳ ಹೆಣ್ಣುಮಗುವಿನ ಪ್ರಕರಣದ ಕುರಿತು ಐಸಿಎಂಆರ್ ಮಾಹಿತಿ ನೀಡಿದೆ. ಬ್ರ್ಯಾಂಕ್ಟೊ ಮೊನಿಯಾ ಸಮಸ್ಯೆಯಿಂದ 3 ತಿಂಗಳ ಮಗು ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾಗಿತ್ತು. ಈ ಮಗುವಿನಲ್ಲಿ ವೈರಸ್ ಪತ್ತೆಯಾಗಿತ್ತು. ಆದರೆ ಮಗು ಸಂಪೂರ್ಣವಾಗಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದೆ ಎಂದಿದೆ.
ಜನವರಿ 3 ರಿಂದು ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾಗಿರುವ ಇನ್ನು 8 ತಿಂಗಳ ಮಗುವಿನಲ್ಲೂ ವೈರಸ್ ಪತ್ತೆಯಾಗಿದೆ. ಸದ್ಯ ಮಗುವಿಗೆ ಚಿಕಿತ್ಸೆ ಮುಂದುವರಿದಿದೆ. ಇಷ್ಟೇ ಅಲ್ಲ ಮಗು ಚೇತರಿಕೆ ಕಾಣುತ್ತಿದೆ ಎಂದು ಐಸಿಎಂಆರ್ ಹೇಳಿದೆ. ಎರಡೂ ಪ್ರಕರಣದಲ್ಲಿ ಯಾವುದೇ ಅಂತಾರಾಷ್ಟ್ರೀಯ ಪ್ರಯಾಣ ಮಾಡಿದ ಇತಿಹಾಸ ಹೊಂದಿಲ್ಲ ಎಂದು ಐಸಿಎಂಆರ್ ಸ್ಪಷ್ಟಪಡಿಸಿದೆ.
HMPV ಪ್ರಕರಣ ಜಾಗತಿಕವಾಗಿ ಏರಿಕೆಯಾಗುತ್ತಿದೆ. ಭಾರತದಲ್ಲಿ ಈ ವೈರಸ್ ಪ್ರಕರಣ ನಿಯಂತ್ರಣದಲ್ಲಿದೆ. ಭಾರತದ ಪರಿಸ್ಥಿತಿ ಎದುರಿಸಲು ಸಿದ್ಧವಾಗಿದೆ. ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ. ಇದು ಚಳಿಗಾಲದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿದೆ. ಹೀಗಾಗಿ ಮುಂಜಾಗ್ರತೆ ವಹಿಸಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಐಸಿಎಂಆರ್ ಹೇಳಿದೆ.