ಮಾನವೀಯತೆಯ ಪ್ರತೀಕ ಈ ದೇಗುಲ: ಮುಸಲ್ಮಾನರಿಂದ ನಡೆಯುತ್ತೆ ಗಣಪತಿ ಪೂಜೆ!
ಭಾರತದ ಉದ್ದಗಲಕ್ಕೂ ಗಣಪತಿ ದೇಗುಲಗಳು ಹಲವಾರು ಇವೆ. ಆದರೆ ಇವುಗಳಲ್ಲಿ ಕೆಲವು ಚಮತ್ಕಾರ ಹಾಗೂ ವಿಶೇಷ ಕಾರಣಗಳಿಂದ ಜನಪ್ರಿಯಗೊಳ್ಳುತ್ತವೆ. ಇಂತಹ ದೇಗುಲಗಳಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ಒಂದು ದಿನ ಮುಸಲ್ಮಾನರಿಂದ ಪೂಜೆ ನಡೆಸಲಾಗುವ ಗಣಪತಿ ಮಂದಿರದ ವಿವರ ಇಲ್ಲಿದೆ ನೋಡಿ.

ವಿಘ್ನ ನಿವಾರಕನ ಮಹಾ ಆರತಿ ನಡೆಸೋದೇ ಮುಸಲ್ಮಾನರು: ಮಧ್ಯಪ್ರದೇಶದ ರತ್ಲಾಮ್ ನಗರದಲ್ಲಿರುವ ಭವ್ಯ ಗಣಪತಿ ದೇಗುಲದಲ್ಲಿ ಪುರಾತನ ಪ್ರತಿಮೆ ಇದೆ. ಇಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ಮುಸಲ್ಮಾನ ಸಮುದಾಯದ ಜನರು ಒಂದು ದಿನ ಮಹಾ ಆರತಿ ಮಾಡಿ ಗಣೇಶನಿಗಿಷ್ಟವಾದ ಖಾದ್ಯವನ್ನು ಅರ್ಪಿಸುತ್ತಾರೆ.

ಸಾಂಪ್ರಾದಾಯಿಕ ಸೌಹಾರ್ದತೆ ಹೀಗೇ ಮುಂದುವರೆಯಲಿ ಎಂದು ಕೋರಿಕೆ: ಈ ಪೂಜೆಯ ಸಂದರ್ಭದಲ್ಲಿ ಮುಸಲ್ಮಾನರು ಗಣಪತಿ ಪಾದದ ಬಳಿ ವಿಶೇಷ ಕೋರಿಕೆ ಇರುವ ಪತ್ರವನ್ನು ಇಡುತ್ತಾರೆ. ಈ ಚೀಟಿಯಲ್ಲಿ ವರ್ಷವಿಡೀ ಈ ನಗರದಲ್ಲಿ ಹಿಂದೂ ಮುಸಮ್ಮಾನರ ನಡುವಿನ ಸೌಹಾರ್ದತೆ ಹೀಗೇ ಉಳಿದುಕೊಳ್ಳಲಿ, ಶಾಂತಿಯುತ ಸಮಾಜ ನಿರ್ಮಾಣವಾಗಲಿ ಎಂಬ ಮನವಿ ಇರುತ್ತದೆಯಂತೆ.

ಚೀಟಿ ಬರೆದು ಬೇಡಿಇಕೊಳ್ಳುತ್ತಾರೆ: ಗಣೇಶೋತ್ಸವದ ಸಂದರ್ದಲ್ಲಿ ಇಲ್ಲಿ ದೂರ ದೂರದಿಂದ ಜನರು ಇಲ್ಲಿಗೆ ಆಗಮಿಸುತ್ತಾರೆ. ಸ್ಥಳೀಯರ ಅನ್ವಯ ವಿಘ್ನ ನಿವಾರಕನ ದ್ವಾರಕ್ಕೆ ಯಾರು ಬರುತ್ತಾರೋ ಅವರ ಅಭಿಲಾಷೆ ಎಲ್ಲವೂ ಪೂರ್ಣಗೊಳ್ಳುತ್ತದೆ ಎಂಬ ನಂಬಿಕೆ ಇದೆ.

ಇಲ್ಲಿ ಗಣೇಶನ ಬಳಿ ತಮಗೆ ಬೇಕಾಗಿರುವುದನ್ನು ಬೇಡಿಕೊಳ್ಳಲು ವಿಶೇಷ ಕ್ರಮ ಅನುಸರಿಸಲಾಗುತ್ತದೆ. ಇಲ್ಲಿ ಭಕ್ತರು ತಮ್ಮ ಕೋರಿಕೆಯನ್ನು ಚೀಟಿಯಲ್ಲಿ ಬರೆದು ಹಾಕುತ್ತಾರೆ. ಅಲ್ಲದೇ ಇಲ್ಲಿ ಬೇಡಿಕೊಂಡಿದ್ದು ಶೀಘ್ರದಲ್ಲಿ ನೆರವೇರುತ್ತದೆ ಹಾಗೂ ಎಲ್ಲಾ ಚಿಂತೆಗಳು ಮಾಯವಾಗುತ್ತವೆ ಎನ್ನಲಾಗಿದೆ.

ವಿಶೇಷ ವೈಭವ: ಇನ್ನು ಈ ದೇಗುಲ ಅದೆಷ್ಟು ಪುರಾತನವೋ, ಇಲ್ಲಿನ ವೈಭವ ಹಾಗೂ ಮಹಿಮೆಯೂ ಅಷ್ಟೇ ಹೆಚ್ಚಿದೆ. ಇಂದು ಕಾಣುವ ಭವ್ಯ ಮಂದಿರದಲ್ಲಿರುವ ಗನೇಶನ ವಿಗ್ರಹ ಇಂದೆ ಅರಮನೆಯೊಂದರ ಗೋಡೆಗೆ ಹಾಕಿದ್ದ ಕಲ್ಲಾಗಿತ್ತು ಎನ್ನಲಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ