ಹಿಮದ ಹೊದಿಕೆ ಹೊತ್ತ ಕಣಿವೆ ನಾಡು, ಭೂಮಿ ಮೇಲಿನ ಸ್ವರ್ಗದಂತಾದ ಗಡಿ ಪ್ರದೇಶ!
ಜಮ್ಮು ಕಾಶ್ಮೀರದಲ್ಲಿ ಶನಿವಾರದಂದು ಚಳಿಗಾಲದ ಮೊದಲ ಮಂಜು ಸುರಿದಿದೆ. ಶ್ರೀನಗರವಂತೂ ದಪ್ಪಗಿನ ಹಿಮದ ಹೊದಿಕೆಯಿಂದ ಮುಚ್ಚಿದೆ. ಇದರಿಂದಾಗಿ ಕಣಿವೆ ನಾಡಿನಲ್ಲಿ ಚಳಿ ತೀವ್ರತೆಯೂ ಹೆಚ್ಚಿದೆ. ಕಾಶ್ಮೀರದ ಗುಲ್ಮರ್ಗ್ ಹಾಗೂ ಪಹಲ್‌ಗಾಮ್‌ನಲ್ಲಿ ತಾಪಮಾನ ಶೂನ್ಯಕ್ಕಿಂತ ಕೆಳಗಿಳಿದಿದೆ. ಅತ್ತ ಹಿಮಾಚಲದ ಲಾಹೌಲ್ ಸ್ಪೀತಿಯಲ್ಲೂ ಮಂಜು ಸುರಿದಿದೆ. ಫೋಟೋಗಳಲ್ಲಿ ನೀವೇ ನೋಡಿ ಭೂಮಿ ಮೇಲಿನ ಸ್ವರ್ಗದಂತಿರುವ ಗಡಿ ಪ್ರದೇಶದ ಮನಮೋಹಕ ದೃಶ್ಯ

ಜಮ್ಮು ಕಾಶ್ಮೀರದಲ್ಲಿ ಶ್ರೀನಗರ ಹೊರತುಪಡಿಸಿ ಉದಂಪುರದಲ್ಲೂ ಮಂಜು ಸುರಿದಿದೆ. ಹವಾಮಾನ ಇಲಾಖೆ ಕೂಡಾ ಜಮ್ಮುವಿನಲ್ಲಿ ಮಂಜು ಸುರಿಯುವ ವರದಿ ನೀಡಿದ್ದರೆ, ಕಾಶ್ಮೀರದಲ್ಲಿ ಮಂಜು ಹಾಗೂ ಮಳೆ ಸುರಿಯುವ ಎಚ್ಚರಿಕೆ ನೀಡಿದೆ.

ಅಲ್ಲದೇ ಹವಾಮಾನ ಇಲಾಖೆ ಕಣಿವೆ ನಾಡಿನಲ್ಲಿ ಡಿಸೆಂಬರ್ 20ವರೆಗೆ ಶೂನ್ಯ ತಾಪಮಾನ ಇರುವ ಅಂದಾಜು ವ್ಯಕ್ತಪಡಿಸಿದೆ.

ಹಿಮದಿಂದಾಗಿ ಜಮ್ಮು ಕಾಶ್ಮೀರದ ಪುಂಚ್, ಡೋಡಾ, ಕಿಶ್ತವಾಡ ಹಾಗೂ ಕುಲಗಾಂ ಹಾಗೂ ಲಡಾಖ್‌ನ ಕಾರ್ಗಿಲ್‌ನ ಎತ್ತರ ಪ್ರದೇಶಗಳಲ್ಲಿ ಹಿಮ ಕುಸಿತವುಂಟಾಗುವುದಾಗಿ ಎಚ್ಚರಿಕೆ ನೀಡಿದೆ.

ಹಿಮಾವೃತದಿಂದಾಗಿ ಜಮ್ಮು ಹಾಗೂ ಶ್ರೀನಗರ ನಡುವಿನ ಹೆದ್ದಾರಿ ಬಂದ್ ಆಗಿದೆ. ಜವಾಹರ್ ಸುರಂಗದೊಳಗೂ ಸುಮಾರು ಒಂಭತ್ತು ಇಂಚಿನಷ್ಟು ದಪ್ಪದ ಹಿಮ ಬಿದ್ದಿದೆ.

ಜಮ್ಮು ಕಾಶ್ಮೀರ ಹೊರತುಪಡಿಸಿ ಹಿಮಾಚಲ ಪ್ರದೇಶದ ಕೆಲ ಪ್ರದೇಶಗಳಲ್ಲೂ ಹಿಮ ಸುರಿದಿದೆ.

ಲಾಹೌಲ್ ಸ್ಪೀತಿಯರಶೇಲ್ ಹಳ್ಳಿಯಲ್ಲಿ ಕಂಡು ಬಂದ ದೃಶ್ಯ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ