MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • News
  • India News
  • wayanad landslide ವಯನಾಡು ದುರಂತದ ಎರಡನೇ ದಿನದ ರಣಭೀಕರ ಮನಕಲಕುವ ಚಿತ್ರಗಳು!

wayanad landslide ವಯನಾಡು ದುರಂತದ ಎರಡನೇ ದಿನದ ರಣಭೀಕರ ಮನಕಲಕುವ ಚಿತ್ರಗಳು!

ಕೇರಳದಲ್ಲಿ ಭೂಕುಸಿತದ ಪ್ರಾಕೃತಿಕ ದುರಂತ ಮತ್ತೆ ಮರುಕಳಿಸಿದೆ. ಎರಡನೇ ದಿನದ ಚಿತ್ರಣ ಮನಕಲಕುವಂತಿತ್ತು. ಬೆಟ್ಟಗಳಿಂದ ಉರುಳಿಬಂದ ದೊಡ್ಡ ದೊಡ್ಡ ಬಂಡೆಕಲ್ಲುಗಳು ತಗ್ಗುಪ್ರದೇಶದಲ್ಲಿ ನಿಂತಿದ್ದು, ರಕ್ಷಣಾ ಕಾರ್ಯಚರಣೆಗೆ ಮಳೆ ಅಡ್ಡಿಯಾಗಿದೆ. ಈವರೆಗೆ ವಯನಾಡು ದುರಂತದಲ್ಲಿ ಮೃತಮಟ್ಟವರ ಸಂಖ್ಯೆ 184ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆ ಇದೆ.

2 Min read
Gowthami K
Published : Jul 31 2024, 03:56 PM IST
Share this Photo Gallery
  • FB
  • TW
  • Linkdin
  • Whatsapp
115

ವಯನಾಡು ಜಿಲ್ಲೆಯಲ್ಲಿ 57 ಸೆ.ಮೀನಷ್ಟು ಭಾರೀ ಮಳೆ ಸುರಿದ ಪರಿಣಾಮ ಚೂರಲ್‌ಮಾಲಾ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ದುರಂತ ನಡೆದಿದ್ದು,  ಇಂದು ಗ್ರಾಮಕ್ಕೆ ಗ್ರಾಮವೇ ನಾಮಾವಶೇಷವಾಗಿದೆ.

215

ವಯನಾಡು ಜಿಲ್ಲೆಯ ಚೂರಲ್‌ಮಾಲಾ, ಮುಂಡಕ್ಕಾಯ್‌, ಅಟ್ಟಮಲ ಮತ್ತು ನೂಲ್‌ಪುಳ ಗ್ರಾಮಗಳಲ್ಲಿ ಇಂದು ಎಲ್ಲಿ ನೋಡಿದರು ನೀರು, ಬಂಡೆಕಲ್ಲು ಮತ್ತು ಕಟ್ಟಡ ಅವಶೇಷಗಳು, ಕೆಸರು ಬಿಟ್ಟು ಬೇರೇನು ಕಾಣಿಸುತ್ತಿಲ್ಲ

315

ಭೂಕುಸಿತದ ವೇಳೆ ಕೊಚ್ಚಿಹೋದ ವಾಹನಗಳು ಮಣ್ಣಿನಡಿ, ಮರಗಳ ಅಡಿ ಬಿದ್ದಿರುವ ದೃಶ್ಯಗಳು ಘಟನೆಯ ತೀವ್ರತೆಯನ್ನು ಸಾರಿಹೇಳಿವೆ. ಭೂಕುಸಿದ ಪರಿಣಾಮ ಹಲವು ಜಲಮೂಲಗಳು ಉಕ್ಕಿ ಹರಿಯುತ್ತಿದ್ದು, ತಮ್ಮ ಹರಿವಿನ ಹಾದಿಯನ್ನೇ ಬದಲಿಸಿ, ಜನವಸತಿ ಪ್ರದೇಶಗಳಿ ನುಗ್ಗಿ ಪರಿಸ್ಥಿತಿಯನ್ನು ಮತ್ತಷ್ಟು ಭೀಕರಗೊಳಿಸಿವೆ.

415

ಭೂಕುಸಿತ ಪರಿಣಾಮ ನಾಲ್ಕೂ ಗ್ರಾಮಗಳು, ರಾಜ್ಯದ ಇತರೆ ಪ್ರದೇಶಗಳಿಂದ ಸಂಪರ್ಕ ಕಡಿದುಕೊಂಡಿವೆ. ಇನ್ನೊಂದೆಡೆ ಮಣ್ಣು, ಬಂಡೆ, ಮರಗಳು, ತಗ್ಗುಪ್ರದೇಶಗಳಲ್ಲಿ ಕೆರೆ ನದಿ, ಕಾಲುವೆಗಳ ಮೇಲೆ ಅಪ್ಪಳಿಸಿ ಎಲ್ಲಿ ಏನಿದೆ ಎಂಬುದು ಕೂಡ ಕಾಣದಂತಾಗಿದೆ.

515

ಭೂಕುಸಿತದಲ್ಲಿ ಅತ್ಯಂತ ಹೆಚ್ಚು ಹಾನಿಗೊಳಗಾಗಿದೆ ಎನ್ನಲಾದ ಚೂರಲ್‌ಮಾಲಾ ಒಂದರಲ್ಲೇ 200ಕ್ಕೂ ಹೆಚ್ಚು ಮನೆಗಳು ಕೊಚ್ಚಿಹೋಗಿವೆ. ಮುಂಡಕ್ಕಾಯ್‌ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ಸೇತುವೆ ಕೊಚ್ಚಿಹೋಗಿರುವ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.

615

ದುರಂತಕ್ಕೆ ಒಳಗಾದ ಗ್ರಾಮಗಳ ಜನರು ಸಂಬಂಧಿಕರಿಗೆ ಕರೆ ಮಾಡಿ ತಮ್ಮನ್ನು ರಕ್ಷಣೆ ಮಾಡುವಂತೆ ಗೋಳಿಡುತ್ತಿರುವ, ತಮ್ಮವರನ್ನು ಕಳೆದುಕೊಂಡು ಚೀರಾಡುತ್ತಿರುವ ಆಡಿಯೋ ಕರೆಗಳು ಘಟನೆಯ ಭೀಕರತೆಗೆ ಸಾಕ್ಷಿಯಾಗಿದೆ.

715

ಘಟನಾ ಸ್ಥಳಗಳಲ್ಲಿ ಈಗಲೂ ಅಲ್ಲಲ್ಲಿ ಭೂಕುಸಿತದ ಘಟನೆಗಳು ಮುಂದುವರೆದಿರುವ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ.

815

ಕೇರಳದ ವಯನಾಡಿನಲ್ಲಿ ಭೂಕುಸಿತದಿಂದ ಸಂಭವಿಸಿರುವ ಅವಘಡದಲ್ಲಿ ಗಾಯಾಳುಗಳ ಚಿಕಿತ್ಸೆಗೆ ಎಚ್‌.ಡಿ. ಕೋಟೆಯ ಸಾರ್ವಜನಿಕ ಆಸ್ಪತ್ರೆ ಹಾಗೂ ಮೈಸೂರಿನ ಕೆ.ಆರ್‌. ಆಸ್ಪತ್ರೆಯಲ್ಲಿ ಕೂಡ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ. ಗಾಯಾಳುಗಳ ಚಿಕಿತ್ಸೆಗೆ ವೈದ್ಯರನ್ನು ನಿಯೋಜಿಸಲಾಗಿದೆ. ಗಾಯಾಳುಗಳನ್ನು ಕರೆತರಲು ವಾಹನಗಳನ್ನು ವ್ಯವಸ್ಥೆ ಮಾಡಿದೆ. ಜಿಲ್ಲಾಡಳಿತ ಸಹಾಯವಾಣಿಯನ್ನು ಕೂಡ ಆರಂಭಿಸಿದೆ.

915

ವಯನಾಡಿನ 4 ಹಳ್ಳಿಗಳು ಭೂಸಮಾಧಿ, ಮುಂಜಾನೆ ಸಂಭವಿಸಿದ ಭೂಕುಸಿತದ ವೇಳೆ ಸುಖ ನಿದ್ದೆಯಲ್ಲಿದ್ದವರು ಮಣ್ಣುಪಾಲು. ರಕ್ಷಣಾ ಕಾರ್ಯಾಚರಣೆಗೆ ಸೇನೆ, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ನಿಯೋಜನೆ

1015

 ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದ ದುರಂತದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕೇರಳದ ನೆರವಿಗೆ ನೆರೆಯ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳು ಧಾವಿಸಿವೆ.

1115

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ದುರಂತದ ಬಗ್ಗೆ ತೀವ್ರ ಸಂತಾಪ ಸೂಚಿಸಿದ್ದು, ‘ಕೇರಳಕ್ಕೆ ಕರ್ನಾಟಕದಿಂದ ಸಾಧ್ಯವಿರುವ ಎಲ್ಲ ನೆರವುಗಳನ್ನು ನೀಡುತ್ತೇವೆ’ ಎಂದಿದ್ದಾರೆ. ಈಗಾಗಲೇ ಬೆಂಗಳೂರಿನ ಒಂದು ಎನ್‌ಡಿಆರ್‌ಎಫ್ ತಂಡ ಕೇರಳದಲ್ಲಿ ರಕ್ಷಣಾ ಕಾರ್ಯಕ್ಕೆ ಹೋಗಿದೆ. 

1215

ಪ್ರವಾಹದ ತೀವ್ರತೆ ಯಾವ ರೀತಿ ಇತ್ತು ಎಂದರೆ ವಯನಾಡಿನ ಪೋತುಕಾಲ್ ಪ್ರದೇಶಲ್ಲಿ ಸಂಭವಿಸಿದ ಭೂಕುಸಿತದ ಕಾರಣ, ಪ್ರವಾಹ ಪಾಲಾದ 20 ಶವಗಳು ನದಿ ಮೂಲಕ ಹರಿದು ಪಕ್ಕದ ಮಲಪ್ಪುರಂ ಜಿಲ್ಲೆಯಲ್ಲಿ ಪತ್ತೆ ಆಗಿವೆ.

1315

ಕಳೆದ ಕೆಲವು ವರ್ಷಗಳಿಂದ ಕೇರಳವು ಭೂಕುಸಿತಗಳು , ಪ್ರವಾಹಗಳು ಮತ್ತು ಚಂಡಮಾರುತಗಳಿಂದ ಪದೇ ಪದೇ ಹಾನಿಗೊಳಗಾಗುತ್ತಿದೆ , ಇದು ಹವಾಮಾನ ಬದಲಾವಣೆಯ ವಿನಾಶಕಾರಿ ಪರಿಣಾಮವನ್ನು ಸ್ಪಷ್ಟವಾಗಿ ಸೂಚಿಸುತ್ತದೆ.

1415

ಆಗಸ್ಟ್ 2019 ರಲ್ಲಿ, ಮಲಪ್ಪುರಂ ಮತ್ತು ವಯನಾಡ್ ಜಿಲ್ಲೆಗಳ ಪಶ್ಚಿಮ ಘಟ್ಟಗಳ ಭಾಗವಾದ ಮುತ್ತಪ್ಪನ್ ಬೆಟ್ಟದ ಎದುರು ಬದಿಗಳಲ್ಲಿ ಕವಳಪ್ಪಾರ ಮತ್ತು ಪುತ್ತುಮಲದಲ್ಲಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ ಕ್ರಮವಾಗಿ 59 ಜನರು ಸಾವನ್ನಪ್ಪಿದರು. ದುರಂತದ ನಂತರ ಸುಮಾರು 150 ಕುಟುಂಬಗಳನ್ನು ಈ ಪ್ರದೇಶಗಳಿಂದ ಸ್ಥಳಾಂತರಿಸಲಾಯಿತು. ಮಂಗಳವಾರ ಭೂಕುಸಿತ ಸಂಭವಿಸಿದ ಅದೇ ಮೆಪ್ಪಾಡಿ ಗ್ರಾಮದಲ್ಲಿ ಪುತ್ತುಮಲ ಇದೆ.

1515

ಆಗಸ್ಟ್ 2020ರಲ್ಲಿ, ಇಡುಕ್ಕಿ ಜಿಲ್ಲೆಯ ಪೆಟ್ಟಿಮುಡಿಯಲ್ಲಿ 66 ಜನರು ಭೂಕುಸಿತದಿಂದ ಜೀವಂತ ಸಮಾಧಿಯಾದರು. ಈ ಪೈಕಿ ನಾಲ್ವರ ಮೃತದೇಹಗಳು ಇನ್ನೂ ಪತ್ತೆಯಾಗಿಲ್ಲ. ಅಕ್ಟೋಬರ್ 2021ರಲ್ಲಿ ಮತ್ತೊಂದು ಭೂಕುಸಿತವು ಕೊಟ್ಟಾಯಂ ಜಿಲ್ಲೆಯ ಕೂಟ್ಟಿಕ್ಕಲ್ ಗ್ರಾಮದಲ್ಲಿ 13 ಜನರನ್ನು ಬಲಿ ತೆಗೆದುಕೊಂಡಿತು.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಭೂಕುಸಿತ
ಕೇರಳ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved