ಸರ್ಕಾರಿ ಕಚೇರಿ, ಸಾರ್ವಜನಿಕ ಸೇವೆಗೆ ಗರಿಷ್ಠ ಲಂಚ ಪೀಕುವ ದೇಶ ಯಾವುದು?
First Published Dec 13, 2020, 5:33 PM IST
ಸರ್ಕಾರಿ ದಾಖಲೆ ಪತ್ರ, ಗುರುತಿನ ಚೀಟಿ, ವಾಸ ದೃಢೀಕರಣ ಪತ್ರ ಸೇರಿದಂತೆ ಒಂದಲ್ಲೂ ಒಂದು ಕಾರಣಕ್ಕೆ ಭಾರತದಲ್ಲಿ ಹುಟ್ಟಿದ ಎಲ್ಲರೂ ಸರ್ಕಾರಿ ಕಚೇರಿ ಮೆಟ್ಟಿಲು ಹತ್ತಲೇ ಬೇಕು. ಹಾಗಂತ ಲಂಚ ನೀಡದೇ ಒಂದು ಟೇಬಲ್‌ನಿಂದ ಮತ್ತೊಂದು ಟೇಬಲ್‌ಗೆ ದಾಖಲೆ ಪತ್ರಗಳು ರವಾನೆಯಾಗುವುದಿಲ್ಲ ಅನ್ನೋದು ಗೌಪ್ಯವಾಗಿ ಉಳಿದಿಲ್ಲ. ಇದೀಗ ಏಷ್ಯಾದಲ್ಲಿ ಸರ್ಕಾರಿ ಕೆಲಸಗಳಿಗೆ, ಸಾರ್ವಜನಿಕ ಸೇವೆಗಳಿಗೆ ಅತೀ ಹೆಚ್ಚು ಲಂಚ ಪೀಕುವ ದೇಶ ಯಾವುದು? ಇಲ್ಲಿದೆ ಪಟ್ಟಿ

ಸರ್ಕಾರಿ ಕಚೇರಿಗಳನಲ್ಲಿ ಕೆಲಸ, ಸಾರ್ವಜನಿಕ ಸೇವೆಗಳು ಹೋದ ತಕ್ಷಣ ಸಿಗುವುದಿಲ್ಲ ಅಥವಾ ಮುಗಿಯುವುದಿಲ್ಲ. ಒಂದು ದಾಖಲೆ ಪತ್ರ ಹಲವು ಅಧಿಕಾರಿಗಳ ಸಹಿಯೊಂದಿಗೆ ಅಂತಿಮ ಮುದ್ರೆ ಬೀಳಲು ಸರ್ಕಸ್ ಮಾಡಲೇಬೇಕು.

ಅಧಿಕಾರಿಗಳು ಕೈ ಬಿಸಿ ಮಾಡಿದರೆ ದಾಖಲೆ ಪತ್ರೆ ಯಾವುದೇ ಅಡೆ ತಡೆ ಇಲ್ಲದೆ ಅಥವಾ ಯಾವುದಾದರೊಂದು ದಾಖಲೆ ಲಗತ್ತಿಸಲು ಮರೆತು ಹೋಗಿದ್ದರೂ ನಿಮ್ಮ ಪತ್ರ ಕೈಸೇರಲಿದೆ. ಗ್ರಾಮ, ಪಟ್ಟಣ, ನಗರ ಸೇರಿದಂತೆ ದೇಶದ ಬಹುತೇಕ ಸಾರ್ವಜನಿಕ ಸೇವೆಗಳ ಅವಸ್ಥೆ ಇದು.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?