ಕೊರೋನಾ ಸೋಂಕಿತರಲ್ಲಿ ಹೊಸ ರೋಗ, ದೇಹದ ಭಾಗವೇ ತುಂಡರಿಸುವ ಸ್ಥಿತಿ!
ಕೊರೋನಾ ಸೋಂಕು ಮಣಿಸಿದ ರೋಗಿಗಳಲ್ಲಿ ಬ್ಲ್ಯಾಕ್ ಫಂಗಸ್ ಬಳಿಕ ಇದೀಗ ಹೊಸ ರೋಗ ಕಾಣಿಸಿಕೊಳ್ಳಲಾರಂಭಿಸಿದ್ದು, ಇದನ್ನು ನೋಡುವಾಗಲೇ ಭಯ ಬೀಳುವಂತಿದೆ. ಇನ್ನು ವೈದ್ಯರ ಅನ್ವಯ ಇದು ಗ್ಯಾಂಗ್ರಿನ್ ಎನ್ನಲಾಗಿದೆ. ಈ ರೋಗವು ಸಾಮಾನ್ಯವಾಗಿ ಪಾದಗಳು, ಕೈಗಳು, ಬೆರಳುಗಳು ಮತ್ತು ತೋಳುಗಳಲ್ಲಿ ಕಂಡುಬರುತ್ತದೆ. ಇದು ದಾಳಿ ಇಟ್ಟ ದೇಹದ ಭಾಗ ಕಪ್ಪಾಗಿ ಮಾರ್ಪಾಡಾಗುತ್ತದೆ. ಇನ್ನು ಈ ರೋಗ ಕಾಣಿಸಿಕೊಂಡ ದೇಹದ ಭಾಗ ಕತ್ತರಿಸದೇ ಬೇರೆ ದಾರಿ ಇಲ್ಲ ಎಂದೂ ಹೇಳಲಾಗಿದೆ.

<p>ಈ ರೋಗ ದಾಳಿ ಇಟ್ಟ ಭಾಗ ಕಪ್ಪು, ನೇರಳೆ, ನೀಲಿ ಅಥವಾ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಚರ್ಮವೂ ಬಹಳ ತೆಳ್ಳಗಾಗುತ್ತದೆ, ಈ ಭಾಗ ಮುಟ್ಟಿದಾಗ ತಂಪಾದ ಅನುಭವವಾಗುತ್ತದೆ. ಸ್ವಲ್ಪ ಜ್ವರವೂ ಕಾಣಿಸಿಕೊಳ್ಳುತ್ತದೆ. ಉಸಿರಾಟದ ತೊಂದರೆ ಜೊತೆ ಹೃದಯ ಬಡಿತವೂ ಹೆಚ್ಚುತ್ತದೆ. ಅಲ್ಲದೇ ಈ ರೋಗ ಕಾಣಿಸಿಕೊಂಡ ಭಾಗದಲ್ಲಿ ನೋವು ಹಾಗೂ ಉರಿ ಕಾಣಿಸಿಕೊಳ್ಳುತ್ತದೆ. </p>
ಈ ರೋಗ ದಾಳಿ ಇಟ್ಟ ಭಾಗ ಕಪ್ಪು, ನೇರಳೆ, ನೀಲಿ ಅಥವಾ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಚರ್ಮವೂ ಬಹಳ ತೆಳ್ಳಗಾಗುತ್ತದೆ, ಈ ಭಾಗ ಮುಟ್ಟಿದಾಗ ತಂಪಾದ ಅನುಭವವಾಗುತ್ತದೆ. ಸ್ವಲ್ಪ ಜ್ವರವೂ ಕಾಣಿಸಿಕೊಳ್ಳುತ್ತದೆ. ಉಸಿರಾಟದ ತೊಂದರೆ ಜೊತೆ ಹೃದಯ ಬಡಿತವೂ ಹೆಚ್ಚುತ್ತದೆ. ಅಲ್ಲದೇ ಈ ರೋಗ ಕಾಣಿಸಿಕೊಂಡ ಭಾಗದಲ್ಲಿ ನೋವು ಹಾಗೂ ಉರಿ ಕಾಣಿಸಿಕೊಳ್ಳುತ್ತದೆ.
<p>ವೈದ್ಯರ ಅನ್ವಯ ಈ ರೋಗ ಕಾಣಿಸಿಕೊಂಡವವರ ಚರ್ಮ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ರಕ್ತ ಹೆಪ್ಪುಗಟ್ಟಲಾರಂಭಿಸುತ್ತದೆ. ಯಾವ ಭಾಗಕ್ಕೆ ಈ ರೋಗಗ ತಗುಲುತ್ತದೋ ಅಲ್ಲಿ ರಕ್ತ ಚಲನೆಯೂ ನಿಲ್ಲುತ್ತದೆ.</p>
ವೈದ್ಯರ ಅನ್ವಯ ಈ ರೋಗ ಕಾಣಿಸಿಕೊಂಡವವರ ಚರ್ಮ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ರಕ್ತ ಹೆಪ್ಪುಗಟ್ಟಲಾರಂಭಿಸುತ್ತದೆ. ಯಾವ ಭಾಗಕ್ಕೆ ಈ ರೋಗಗ ತಗುಲುತ್ತದೋ ಅಲ್ಲಿ ರಕ್ತ ಚಲನೆಯೂ ನಿಲ್ಲುತ್ತದೆ.
<p>ಯಾವ ಭಾಗದಲ್ಲಿ ಗ್ಯಾಂಗ್ರಿನ್ ಆಗುತ್ತದೋ, ಆ ಭಾಗವನ್ನು ಆಪರೇಷನ್ ಮಾಡಿ ತೆಗೆದು ಹಾಕಲಾಗುತ್ತದೆ. ಅನೇಕ ಬಗೆಯ ಆಂಟಿ ಬಯೋಟಿಕ್ ನೀಡಲಾಗುತ್ತದೆ ಜೊತೆಗೆ ಆಕ್ಸಿಜನ್ ಥೆರಪಿ ಕೂಡಾ ನೀಡಲಾಗುತ್ತೆ. ಆರಂಭದಲ್ಲೇ ಎಚ್ಚೆತ್ತುಕೊಂಡು ಚಿಕಿತ್ಸೆ ಆರಂಭಿಸಿದರೆ ಯಾವುದೇ ಸಮಸ್ಯೆಯಾಗುವುದಿಲ್ಲ.</p>
ಯಾವ ಭಾಗದಲ್ಲಿ ಗ್ಯಾಂಗ್ರಿನ್ ಆಗುತ್ತದೋ, ಆ ಭಾಗವನ್ನು ಆಪರೇಷನ್ ಮಾಡಿ ತೆಗೆದು ಹಾಕಲಾಗುತ್ತದೆ. ಅನೇಕ ಬಗೆಯ ಆಂಟಿ ಬಯೋಟಿಕ್ ನೀಡಲಾಗುತ್ತದೆ ಜೊತೆಗೆ ಆಕ್ಸಿಜನ್ ಥೆರಪಿ ಕೂಡಾ ನೀಡಲಾಗುತ್ತೆ. ಆರಂಭದಲ್ಲೇ ಎಚ್ಚೆತ್ತುಕೊಂಡು ಚಿಕಿತ್ಸೆ ಆರಂಭಿಸಿದರೆ ಯಾವುದೇ ಸಮಸ್ಯೆಯಾಗುವುದಿಲ್ಲ.
<p>ಮಾಧ್ಯಮಗಳ ವರದಿಯನ್ವಯ ದೆಹಲಿಯ ಏಮ್ಸ್‌ನಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರ ಕುಟುಂಬಸ್ಥರು ಸೇರಿ ಒಟ್ಟು ಆರಕ್ಕೂ ಅಧಿಕ ಮಂದಿಯಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ ಎನ್ನಲಾಗಿದೆ. ಇವರಿಗೆ ಚಿಕಿತ್ಸೆ ಆರಂಭಿಸಲಾಗಿದ್ದು, ನಾಲ್ವರಿಗೆ ಈಗಾಗಲೇ ಆಪರೇಷನ್ ಕೂಡಾ ನಡೆದಿದೆ. ಸಮಾಧಾನದ ವಿಚಾರವೆಂದರೆ ಈ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಿಲ್ಲ. </p>
ಮಾಧ್ಯಮಗಳ ವರದಿಯನ್ವಯ ದೆಹಲಿಯ ಏಮ್ಸ್‌ನಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರ ಕುಟುಂಬಸ್ಥರು ಸೇರಿ ಒಟ್ಟು ಆರಕ್ಕೂ ಅಧಿಕ ಮಂದಿಯಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ ಎನ್ನಲಾಗಿದೆ. ಇವರಿಗೆ ಚಿಕಿತ್ಸೆ ಆರಂಭಿಸಲಾಗಿದ್ದು, ನಾಲ್ವರಿಗೆ ಈಗಾಗಲೇ ಆಪರೇಷನ್ ಕೂಡಾ ನಡೆದಿದೆ. ಸಮಾಧಾನದ ವಿಚಾರವೆಂದರೆ ಈ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ