ಇಟಲಿಗೆ ಆಗಮಿಸಿದ ಪ್ರಧಾನಿ ಮೋದಿಗೆ ಭಾರತೀಯ ಸಮುದಾಯದಿಂದ ಅದ್ಧೂರಿ ಸ್ವಾಗತ!
ಜಿ20 ಶೃಂಗಸಭೆಗಾಗಿ ಇಟಲಿಯ ರೋಮ್ ನಗರಕ್ಕೆ ಆಗಮಿಸಿದ ಪ್ರಧಾನಿ ಮೋದಿ ರೋಮ್ ಜಿ20 ಶೃಂಗಸಭೆ ಹಾಗೂ ಹವಾಮಾನ ಬದಲಾವಣೆ ಸಮಾವೇಶದಲ್ಲಿ ಭಾಗಿ ರೋಮ್‌ಗೆ ಬಂದಳಿದ ಮೋದಿಗೆ ಭಾರತೀಯ ಮೂಲದ ನಿವಾಸಿಗಳಿಂದ ಅದ್ಧೂರಿ ಸ್ವಾಗತ

ಪ್ರಧಾನಿ ನರೇಂದ್ರ ಮೋದಿ ಜಿ20 ಶೃಂಗಸಭೆಗಾಗಿ ಇಟೆಲಿಯ ರೋಮ್ ನಗರಕ್ಕೆ ಆಗಮಿಸಿದ್ದಾರೆ. ಎರಡು ಪ್ರಮುಖ ಸಮಾವೇಶದಲ್ಲಿ ಮೋದಿ ಪಾಲ್ಗೊಳ್ಳಲ್ಲಿದ್ದಾರೆ. ರೋಮ್ ನಗರಕ್ಕೆ ಬಂದಿಳಿಯುತ್ತಿದ್ದಂತ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಇಟಲಿಯಲ್ಲಿರುವ ಭಾರತೀಯ ಸಮುದಾಯ ಮೋದಿ ಜಯೋಘೋಷ, ಬ್ಯಾನರ್ ಹಿಡಿದು ಸ್ವಾಗತಿಸಿದ್ದಾರೆ.
ಮೋದಿಯನ್ನು ಸ್ವಾಗಸಿಲು ನೆರೆದಿದ್ದ ಜನರತ್ತ ತೆರಳಿದ ಪ್ರಧಾನಿ ಮೋದಿ, ಕೈಕುಲುಕಿ ತಮ್ಮ ಸಂತಸ ವ್ಯಕ್ತಪಡಿಸಿದರು. ಮೋದಿ ತಮ್ಮ ಬಳಿ ಆಗಮಿಸುತ್ತಿದ್ದಂತೆ ನೆರೆದಿದ್ದವರ ಸಂತಸ ಡಬಲ್ ಆಗಿದೆ. ಮಕ್ಕಳ ಜೊತೆ ಮೋದಿ ಮಕ್ಕಳಾಗಿದ್ದರು. ಇತ್ತ ಮೋದಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ನೆರೆದಿದ್ದ ಜನ ಸಂಭ್ರಮಿಸಿದರು.
ಮೋದಿ ಸ್ವಾಗತಕ್ಕಾಗಿ ತ್ರಿವರ್ಣ ಧ್ವಜ, ಮೋದಿ ಪ್ಲೇಕಾರ್ಡ್, ಬ್ಯಾನರ್ ಹಿಡಿದು ಭಾರತೀಯ ನಿವಾಸಿಗಳು ಕಾದಿದ್ದಾರೆ. ಮೋದಿ ಆಗಮಿಸುತ್ತಿದ್ದಂತೆ ಘೋಷಣೆಗಳು ಮೊಳಗಿದೆ. ಕೆಲ ಹೊತ್ತು ಅವರೊಂದಿಗೆ ಕಳೆದ ಮೋದಿ, ಎಲ್ಲರತ್ತ ಕೈಬಿಸಿ ಮುಂದೆ ಸಾಗಿದ್ದಾರೆ. ಮೋದಿಗೆ ಸಿಕ್ಕ ಅದ್ಧೂರಿ ಸ್ವಾಗತ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪುಟ್ಟ ಮಕ್ಕಳು ಕೂಜ ಮೋದಿಗೆ ಸ್ವಾಗತ ಕೋರಲು ನೆರೆದಿದ್ದರು. ಪ್ರಧಾನಿಯಾಗಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ಇಟಲಿ ಪ್ರವಾಸ ಕೈಗೊಂಡಿದ್ದಾರೆ. ಇಷ್ಟೇ ಅಲ್ಲ 12 ವರ್ಷಗಳ ಬಳಿಕ ಭಾರತದ ಪ್ರಧಾನಿ ಇಟೆಲಿಗೆ ಭೇಟಿ ನೀಡುತ್ತಿದ್ದಾರೆ. ಯುಪಿಎ ಮೊದಲ ಅವಧಿಯಲ್ಲಿ ಪ್ರಧಾನಿ ಮನ್‌ಮೋಹನ್ ಸಿಂಗ್ ಇಟೆಲಿಗೆ ಭೇಟಿ ನೀಡಿದ್ದರು.
ಇಟಲಿ ಪ್ರಧಾನಿ ಮಾರಿಯಾ ಡ್ರಾಗಿ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಇನ್ನು ಜಿ20 ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲಿರುವ ಮೋದಿ ಕೋವಿಡ್‌ನಿಂದ ಆರೋಗ್ಯ ಚೇತರಿಕೆ, ಜಾಗತಿಕ ಆರ್ಥಿಕತೆ ಕುರಿತು ಮಾತನಾಡಲಿದ್ದಾರೆ. ಇನ್ನು ವಿಶ್ವಸಂಸ್ಥೆ ಹವಾಮಾನ ಬದಲಾವಣೆ ಸಮಾವೇಶದಲ್ಲೂ ಮೋದಿ ಭಾಗವಹಿಸಲಿದ್ದಾರೆ.
ಅಕ್ಟೋಬರ್ 31ರ ವರೆಗೆ ಮೋದಿ ಇಟಲಿಯಲ್ಲಿ ಸತತ ಕಾರ್ಯಕ್ರಮಗಳಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ. ಇಂದು(ಅ.29) ರಾತ್ರಿ ಇಟಲಿಯಲ್ಲಿರು ಭಾರತೀಯ ಸಮುದಾಯದವರ ಜೊತೆ ಮೋದಿ ಮಾತುಕತೆ ನಡೆಸಲಿದ್ದಾರೆ. ಮಹತ್ವದ ಸಭೆ ಹಾಗೂ ಇಟಲಿ ವ್ಯಾಟಿಕನ್ ಸಿಟಿ, ಟಿವಿ ಫೌಂಟೆನ್ ಸೇರಿದಂತೆ ಕೆಲ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ.
ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುುಯೆಲ್ ಮ್ಯಾಕ್ರೆನ್, ಇಂಡೋನೇಷಿಯಾ ಅಧ್ಯಕ್ಷ ಜೋಕೋ ವಿಡೋಡೋ, ಸಿಂಗಾಪುರ ಪ್ರಧಾನಿ ಲಿ ಸಿಯೆನ್ ಲೂಂಗ್ ಜೊತೆ ಮೋದಿ ಮಾತುಕತೆ ನಡೆಸಲಿದ್ದಾರೆ. ಇನ್ನು ಜಿ20 ನಾಯಕ ಜೊತೆ ರಾತ್ರಿ ಔತಣಕೂಟದಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ.ಇಟಲಿ ಪ್ರವಾಸ ಮುಗಿಸಿ ಪ್ರಧಾನಿ ನರೇಂದ್ರ ಮೋದಿ ನೇರವಾಗಿ ಯುಕೆ ಪ್ರವಾಸ ಕೈಗೊಳ್ಳಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ