ವಾಯುಭಾರತ ಕುಸಿತ ಬೆನ್ನಲ್ಲೇಎಲ್ ನಿನೋ ಭೀತಿ, ಈ ನಗರಕ್ಕೆ ಪ್ರವಾಹ, ಕೆಲೆವೆಡೆ ಬರಗಾಲ ಎಚ್ಚರಿಕೆ
ವಾಯುಭಾರತ ಕುಸಿತದಿಂದ ಪ್ರತಿ ದಿನ ಮಳೆ ಆತಂಕ, ಹವಾಮಾನ ವೈಪರಿತ್ಯ ಆತಂಕ ಹೆಚ್ಚಾಗಿದೆ. ಎನ್ ನಿನೊ ಚಂಡಮಾರುತ ಅಪ್ಪಳಿಸುವ ಭೀತಿ ಎದುರಾಗಿದೆ. ಇದರ ಪರಿಣಾಮ ಭಾರತದ ಪ್ರಮುಖ ನಗರಗಳಲ್ಲಿ ಪ್ರವಾಹ ಎಚ್ಚರಿಕೆ ಎದುರಾಗಿದೆ.

ಎನ್ ನಿನೊ ಚಂಡಮಾರುತ ಆತಂಕ
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿ ಅವಾಂತರ ಸೃಷ್ಟಿಸಿದೆ. ದೆಹಲಿ, ಉತ್ತರ ಪ್ರದೇಶ ಸೇರಿದಂತೆ ಕೆಲ ರಾಜ್ಯಗಳು ಬಿರುಗಾಳಿ ಮಳೆಗೆ ತತ್ತರಿಸಿದೆ. ಇತ್ತ ಭಾರತೀಯ ಹವಾಮಾನ ಇಲಾಖೆ ಇದೀಗ ಎನ್ ನಿನೊ ಚಂಡಮಾರುತ ಎಚ್ಚರಿಕೆ ನೀಡಿದೆ. ಇದು ಈ ಬಾರಿಯ ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳ ಆತಂಕ ಹೆಚ್ಚಿಸಿದೆ.

ಅತೀಯಾದ ಮಳೆ, ಸಾರಸರಿ ಕಡಿಮೆ ಮಳೆ ಭೀತಿ
2026ರ ನೈರುತ್ಯ ಮಾನ್ಸೂನ್ ಹಾಗೂ ಫೆಸಿಪಿಕ್ ಮಹಾಸಾಗರದಲ್ಲಿ ರೂಪುಗೊಂಡಿರುವ ಸೂಪರ್ ಎನ್ ನಿನೋ ತೀವ್ರ ಪರಿಣಾಮ ಬೀರಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಎನ್ ನಿನೊ ಪರಿಣಾಮದಿಂದ ಭಾರತದಲ್ಲಿ ಈ ಬಾರಿ ಸರಾಸರಿ ಮಳೆ ಕಡಿಮೆಯಾಗಲಿದೆ. ಇದರಿಂದ ಹೆಲೆವೆಡೆ ಬರಗಾಲ, ಕೆಲೆವಡೆ ಅತೀ ಹೆಚ್ಚು ಮಳೆಯಾಗಿ ಪ್ರವಾಹ ಸೃಷ್ಟಿಯಾಗಲಿದೆ ಎಂಬ ಎಚ್ಚರಿಕೆ ನೀಡಲಾಗಿದೆ.
ಸಾಧಾರಣ ಮಳೆಗಿಂತ ಕಡಿಮೆ
ಜೂನ್ ತಿಂಗಳಲ್ಲಿ ಸಾಧಾರಣ ಮಳೆಯಾಗಲಿದೆ. ಆಧರೆ ಜುಲೈನಿಂದ ಸೆಪ್ಟೆಂಬರ್‌ವರೆಗೆ ಮಳೆ ಕೊರತೆ ಎದುರಾಗಲಿದೆ. ಮಾನ್ಸೂನ್‌ನಲ್ಲಿ ಭಾರತದಲ್ಲಿ ಸರಾಸರಿ 870 ಮಿ.ಮಿ ಮಳೆಯಾಗಲಿದೆ. ಆದರೆ ಎನ್ ನಿನೊ ಪ್ರಭಾವದಿಂದ 800ಕ್ಕೆ ಕುಸಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಚೆನ್ನೈಗೆ ಪ್ರವಾಹ ಭೀತಿ
ಎನ್ ನಿನೊ ಭೀತಿಯಿಂದ ಚೆನ್ನೈಗೆ ಪ್ರವಾಹ ಭೀತಿ ಎದುರಾಗಿದೆ. ಚೆನ್ನೈ ಹಾಗೂ ತಮಿಳುನಾಡಿನ ಕರಾವಳಿ ಭಾಗದಲ್ಲಿ ಅತೀಯಾದ ಮಳೆಯಿಂದ ಪ್ರವಾಹ ಭೀತಿ ಎದುರಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. 2015ರಲ್ಲಿ ಸೃಷ್ಟಿಯಾದ ಪ್ರವಾಹ ಚೆನ್ನೈನಲ್ಲಿ ಮತ್ತೆ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದಿದೆ.
ದಕ್ಷಿಣ ಭಾರತಕ್ಕೆ ಮಳೆ ಕೊರತೆ
ದಕ್ಷಿಣ ಭಾರತದಲ್ಲಿ ಮಳೆ ಕೊರತೆ ಎದುರಾಗಲಿದೆ. ಇದು ಡಿಸೆಂಬರ್ ತಿಂಗಳಿನಿಂದಲೇ ನೀರಿನ ಕೊರತೆಗೆ ಕಾರಣವಾಗಲಿದೆ. ಇನ್ನು ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್‌ನಲ್ಲಿ ಬರಗಾಲದ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ದಕ್ಷಿಣ ಭಾರತಕ್ಕೆ ಮಳೆ ಕೊರತೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

