ಮೋದಿಯ ಒಂದು ದೇಶ-ಒಂದು ಚುನಾವಣೆ ನೀತಿ ಜಾರಿಗೊಳಿಸಲು ಚುನಾವಣಾ ಆಯೋಗ ರೆಡಿ!
ಪ್ರಧಾನಿ ನರೇಂದ್ರ ಮೋದಿ ಒಂದು ದೇಶ- ಒಂದು ಚುನಾವಣೆ ಪರಿಕಲ್ಪನೆಯನ್ನು ಕಳೆದ ಕೆಲ ವರ್ಷಗಳಿಂದ ಒತ್ತಿ ಹೇಳುತ್ತಿದ್ದಾರೆ. ಈ ಮೂಲಕ ಹೊಸ ಭಾರತದ ಕನಸು ಬಿತ್ತಿದ್ದಾರೆ. ಇದೀಗ ಪ್ರಧಾನಿ ಮೋದಿ ಮಾತಿಗೆ ಚುನಾವಣಾ ಆಯೋಗವೂ ತಲೆಯಾಡಿಸಿದೆ. ಹೊಸ ಒಂದು ದೇಶ-ಒಂಜು ಚುನಾವಣೆ ನೀತಿ ಜಾರಿಗೊಳಿಸಲು ಆಯೋಗ ರೆಡಿ ಎಂದಿದೆ.
ಪ್ರಧಾನಿ ನರೇಂದ್ರ ಮೋದಿ ದೇಶದ ಹಲವು ವ್ಯವಸ್ಥೆ ಹಾಗೂ ನೀತಿಗಳಲ್ಲಿ ಬದಲಾವಣೆ ತಂದಿದ್ದಾರೆ. ಚುನಾವಣೆ ಕುರಿತು ಕೆಲ ಮಹತ್ವದ ಬದಲಾವಣೆಗೆ ಮೋದಿ ಆಗ್ರಹಿಸಿದ್ದಾರೆ. ಇದರಲ್ಲಿ ಒಂದು ದೇಶ-ಒಂದು ಚುನಾವಣೆ ಪ್ರಮುಖವಾಗಿದೆ.
ಭಾರತದಲ್ಲಿ ಪ್ರತಿ ತಿಂಗಳು ಒಂದಲ್ಲಾ ಒಂದು ಕಡೆ ಚುನಾವಣೆ ನಡೆಯುತ್ತಲೇ ಇದೆ. ಇದು ದೇಶದ ಅಭಿವೃದ್ಧಿಗೆ ಅಡ್ಡಿಯಾಗಿದೆ. ಹೀಗಾಗಿ ಭಾರತದಲ್ಲಿ ಸಂಪೂರ್ಣ ಒಂದೇ ಸಮಯದಲ್ಲಿ ಚುನಾವಣೆ ನಡೆಸಲು ಒಂದು ದೇಶ-ಒಂದು ಚುನಾವಣೆ ಪರಿಕಲ್ಪನೆ ತಂದಿದ್ದಾರೆ.
ಮೋದಿ ಹಲವು ಬಾರಿ ಒಂದು ದೇಶ-ಒಂದು ಚುನಾವಣೆ ಕುರಿತು ಹೇಳಿದ್ದಾರೆ. ಇದೀಗ ಚುನಾವಣಾ ಆಯೋಗ ಮುಖ್ಯಸ್ಛ ಸುನಿಲ್ ಅರೋರ, ಆಯೋಗ ಮೋದಿ ಒಂದು ದೇಶ ಒಂದು ಚುನಾವಣೆ ನೀತಿ ಜಾರಿಗೊಳಿಸಲು ಬದ್ಧವಾಗಿದೆ ಎಂದಿದ್ದಾರೆ.
ಶಾಸಕಾಂಗದಲ್ಲಿನ ತಿದ್ದುಪಡಿ, ಕಾನೂನಿನಲ್ಲಿನ ತಿದ್ದುಪಡಿ ಬಳಿಕ ಭಾರತದ ಚುನಾವಣಾ ಆಯೋಗ ಒನ್ ನೇಶನ್, ಒನ್ ಎಲೆಕ್ಷನ್ ಜಾರಿಗೊಳಿಸಲಿದ್ದೇವೆ ಎಂದು ಸುನಿಲ್ ಆರೋರ ಹೇಳಿದ್ದಾರೆ.
ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸುವ ಚಿಂತನೆ ಹೊಸದಲ್ಲ. ಆದರೆ ಇತರ ಯಾವ ನಾಯಕರು ಈ ಕುರಿತು ಒಂದು ಮಾತೂ ಆಡಿಲ್ಲ. ಪ್ರಧಾನಿ ಮೋದಿ ಧೈರ್ಯವಾಗಿ ಈ ಬದಲಾವಣೆ ಅಗತ್ಯ ಎಂದು ಒತ್ತಿಹೇಳಿದ್ದಾರೆ ಎಂದು ಆಯೋಗ ಮುಖ್ಯಸ್ಥ ಅರೋರ ಹೇಳಿದ್ದಾರೆ.
ಸಾರ್ವಜನಿಕ ಕುಂದುಕೊರತೆ, ಕಾನೂನು ಮತ್ತು ನ್ಯಾಯದ ಸಂಸದೀಯ ಸ್ಥಾಯಿ ಸಮಿತಿ ಮುಖ್ಯಸ್ಥ ಇಎಂ. ನಾಟಚಿಯಪ್ಪನ್, 2015ರಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸುವ ಶಿಫಾರಸು ಮುಂದಿಟ್ಟರು.
ಪ್ರಧಾನಿ ಮೋದಿ ಒಂದು ದೇಶ-ಒಂದು ಚುನಾವಣೆ ಪರಿಕಲ್ಪೆಗೆ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿದೆ. ಇನ್ನು ಪ್ರಾಯೋಗಿಕ ಅಲ್ಲ ಎಂದಿವೆ.
ಪ್ರತಿ ಚುನಾವಣೆಗೆ ಮತದಾರರ ಪಟ್ಟಿ ಪ್ರಕಟಿಸುವುದು ಸೇರಿದಂತೆ ಹಲವು ವ್ಯರ್ಥ ಕೆಲಸಗಳು ಹಾಗೂ ಖರ್ಚು ವೆಚ್ಚ ಹೆಚ್ಚಾಗುತ್ತಿದೆ. ಹೀಗಾಗಿ ಒಂದು ದೇಶ-ಒಂದು ಚುನಾವಣೆ ಭಾರತಕ್ಕೆ ಅಗತ್ಯವಾಗಿದೆ. ಈ ಕುರಿತು ಪರ ವಿರೋಧ ಚರ್ಚೆಗಳು ನಡೆಯಬೇಕು ಎಂದು ಮೋದಿ ಹೇಳಿದ್ದರು.