ದೆಹಲಿ ಜೆಎನ್‌ಯುನಲ್ಲಿ ಶೃಂಗೇರಿ ಪೀಠಾಧೀಶ್ವರ ವಿದ್ಯಾರಣ್ಯರ ಪ್ರತಿಮೆ ಉದ್ಘಾಟಿಸಿದ ಗೌರಿಶಂಕರ್!
ಶೃಂಗೇರಿ ಪೀಠದ ಮುಖ್ಯ ಸಲಹೆಗಾರ ಡಾ.ವಿ.ಆರ್. ಗೌರಿಶಂಕರ್ ರಿಂದ ವಿದ್ಯಾರಣ್ಯರ ಪ್ರತಿಮೆ ಉದ್ಘಾಟನೆ ಮಾಡಿಸಲಾಗಿದ್ದು, ಈ ವೇಳೆ ಜೆಎನ್ಎ ವಿವಿಯ ಉಪ ಕುಲಪತಿ ಪ್ರೊ.ಶಾಂತಿಶ್ರೀ ಡಿ ಪಂಡಿತ್, ಪ್ರೊ. ಸಂಗಮೇಶ್ ಸಾಥ್ ನೀಡಿದರು.

ದೆಹಲಿ (ಫೆ.29): ದೆಹಲಿಯ ಜವಹರಲಾಲ್ ನೆಹರೂ ವಿವಿಯಲ್ಲಿ ವಿದ್ಯಾರಣ್ಯರ ಪ್ರತಿಮೆ ಅನಾವರಣ ಮಾಡಲಾಗಿದೆ. ಶೃಂಗೇರಿ ಶ್ರೀ ಶಾರದಾ ಪೀಠದ 12ನೇ ಪೀಠಾಧೀಶ್ವರರಾದ ವಿಜಯನಗರ ಸಾಮ್ರಾಜ್ಯ ಸ್ಥಾಪಕ ಜಗದ್ಗುರು ಶ್ರೀ ವಿದ್ಯಾರಣ್ಯರು, ವಿದ್ಯಾರಣ್ಯ ಇನ್ಸ್ಟಿಟ್ಯೂಟ್ ಆಫ್ ನಾಲೆಡ್ಜ್ ಅಂಡ್ ಅಡ್ವಾನ್ಸ್ಡ್ ಸ್ಟಡೀಸ್ ಗೆ (VIKAS) ಮರುನಾಮಕರಣ ಮಾಡಲಾಗಿದೆ.
ಶೃಂಗೇರಿ ಪೀಠದ ಮುಖ್ಯ ಸಲಹೆಗಾರ ಡಾ.ವಿ.ಆರ್. ಗೌರಿಶಂಕರ್ ರಿಂದ ಉದ್ಘಾಟನೆ ಮಾಡಿಸಲಾಗಿದ್ದು, ಈ ವೇಳೆ ಜೆಎನ್ಎ ವಿವಿಯ ಉಪ ಕುಲಪತಿ ಪ್ರೊ.ಶಾಂತಿಶ್ರೀ ಡಿ ಪಂಡಿತ್, ಪ್ರೊ. ಸಂಗಮೇಶ್ ಸಾಥ್ ನೀಡಿದರು.
ದೆಹಲಿಯಲ್ಲಿ ಶೃಂಗೇರಿ ಮಠದ ಆಡಳಿತ ಅಧಿಕಾರಿ ವಿ ಆರ್ ಗೌರಿಶಂಕರ್ ಮಾತನಾಡಿ, ಸನಾತನ ಧರ್ಮದ ಅರಿವು ದೇಶದ ಜನರಿಗೆ ತುಂಬಾ ಮುಖ್ಯವಾಗಿದೆ.ಈ ಹಿಂದೆ JNU ವಿಶ್ವವಿದ್ಯಾಲಯದ ಒಳಗಡೆ ಬರುವುದಕ್ಕೂ ಭಯದ ವಾತಾವರಣ ಇತ್ತು.
ಆದರೆ ಈಗ ಅಂತಹ ವಾತಾವರಣ ಇಲ್ಲ. ವಿದ್ಯಾರಣ್ಯರ ಸಂಶೋಧನಾ ಕೇಂದ್ರವನ್ನ ಆರಂಭಿಸಿ ತುಂಬಾ ಸಂತೋಷವಾಗಿದೆ. ವಿದ್ಯಾರಣ್ಯರ ಮೂರ್ತಿಯನ್ನ ಪ್ರತಿಷ್ಠಾಪನೆ ಮಾಡಲಾಗಿದೆ. ಈಗಿನ ಯುವ ಸಮಾಜಕ್ಕೆ ಸನಾತನದ ಅರಿವು ಮೂಡಿಸುವಂತಹ ಕೆಲಸ ಆಗಬೇಕಾಗಿದೆ.
ಈ ಸಂಶೋಧನಾ ಕೇಂದ್ರದ ಮೂಲಕವಾಗಿ ಅದಕ್ಕೆ ಅಡಿಪಾಯ ಹಾಕುವ ಕೆಲಸ ಆರಂಭವಾಗಿದೆ. ವಿದ್ಯಾರಣ್ಯರು ಶೃಂಗೇರಿ ಪೀಠದ ಗುರುಗಳು ಆಗಿದ್ದರು. ಜೊತೆಗೆ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರು ಆಗಿದ್ದರು. ಅವರ ಹೆಸರಲ್ಲಿ ಒಂದು ಸಂಶೋಧನಾ ಕೇಂದ್ರ ಆರಂಭವಾಗಿರೋದು ಸಂತೋಷದ ಸಂಗತಿ ಎಂದು ಹೇಳಿದರು.
JNU ಉಪ ಕುಲಪತಿ ಪ್ರೋ.ಶಾಂತಿಶ್ರೀ ದುಲಿಪುಡಿ ಪಂಡಿತ್ ಮಾತನಾಡಿ, ದೇಶದಲ್ಲಿ JNU ಹೆಸರುವಾಸಿಯಾಗಿರುವ ವಿಶ್ವವಿದ್ಯಾಲಯವಾಗಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ಬಗೆಯ, ನಮ್ಮ ಸಂಸ್ಕೃತಿಯನ್ನ ತಿಳಿಸಿಕೊಡುವ ಕೆಲಸ ಆಗಲಿದೆ. ಇವತ್ತು ವಿದ್ಯಾರಣ್ಯರ ಮೂರ್ತಿ ಪ್ರತಿಷ್ಠಾಪನೆ ಆಗಿದೆ. ದಕ್ಷಿಣ ಭಾರತದ ವಿಜಯನಗರ ಸಾಮ್ರಾಜ್ಯದ ಸ್ಥಾಪಕರು ವಿದ್ಯಾರಣ್ಯರು. ತೆನಾಲಿ ರಾಮ, ಕೃಷ್ಣದೇವರಾಯ ಆ ಆಸ್ಥಾನದಲ್ಲಿ ಇದ್ದವರು. 2047ಕ್ಕೆ ವಿಕಸಿತ ಭಾರತ ಆಗಬೇಕು ಅಂತ ಗುರಿ ಹೊಂದಿದ್ದೇವೆ.
ಇದಕ್ಕೆ ನಮ್ಮ ಸಂಸ್ಕೃತಿ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯ. ಆದಿಶಂಕರಾಚಾರ್ಯ, ಅದ್ವೈತ ಈ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಈ ಹಿನ್ನೆಲೆ ಇವತ್ತು JNU ನಲ್ಲಿ ಸಹ ಈ ಕೆಲಸ ಮಾಡಲಾಗುತ್ತಿದೆ. ಶೃಂಗೇರಿ ಮಠ ಹಾಗೂ ಶ್ರೀಗಳಿಗೆ ನಾನು ಧನ್ಯವಾದ ಸಲಿಸ್ತೇನೆ. JNU ವಿಶ್ವಗುರು ಆಗಬೇಕು ಅಂದ್ರೆ ಅದ್ಕೆ ವಿದ್ಯಾರಣ್ಯರಿಗಿಂತ ಬೇರೆ ಯಾವುದು ಇಲ್ಲಾ. ವಿಕಸಿತ ಭಾರತ, ಭಾರತ ವಿಶ್ವ ಗುರು ಆಗುವುದಕ್ಕೆ ವಿದ್ಯಾರಣ್ಯರು ಉತ್ತಮ ಐಕಾನ್ ಆಗಲಿದ್ದಾರೆ ಎಂದು ತಿಳಿಸಿದರು.