ಒಬ್ಬನೇ ಮಗ ಸಂತೋಷ, ತಮಿಳುನಾಡಿನ ಆದಿತ್ಯ, ಪ್ರಾಣಾರ್ಪಣೆ ಮಾಡಿದ ನಿಮಗೊಂದು ಸೆಲ್ಯೂಟ್

First Published Jun 16, 2020, 8:10 PM IST

ಲಡಾಖ್(ಜೂ.16): ಗಡಿಯಲ್ಲಿ ದಿನೇ ದಿನೇ ಚೀನಾ ಹಾವಳಿ ಹೆಚ್ಚುತ್ತಿದ್ದು, ಮತ್ತೆ ಮತ್ತೆ ಇದು ತನ್ನ ನರಿ ಬುದ್ಧಿ ತೋರಿಸುತ್ತಿದೆ. ಈಗಾಗಲೇ ಭಾರತ ಹಾಗೂ ಚೀನಾದ ಗಡಿ ಪ್ರದೇಶವಾದ ಲಡಾಖ್‌ನಲ್ಲಿ ಹೆಚ್ಚಿನ ಸೈನ್ಯ ನಿಯೋಜಿಸುವ ಮೂಲಕ ವಿವಾದ ಸೃಷ್ಟಿಸಿದ್ದ ಡ್ರ್ಯಾಗನ್ ರಾಷ್ಟ್ರ, ಮತ್ತೆ ತನ್ನ ಪುಂಡಾಟ ಮುಂದುವರಿಸಿದೆ. ಭಾರತೀಯ ಯೋಧರ ಮೇಲೆ ಗುಂಡಿನ ದಾಳಿ ಮಾಡಿದ ಪರಿಣಾಮ ಮೂವರು ಯೋಧರು ಪ್ರಾಣ ಅರ್ಪಿಸಿದ್ದಾರೆ.  ತೆಲಂಗಾಣದ ವೀರ ಯೋಧ ಸಂತೋಷ್ ಬಾಬು ಸಹ ಪ್ರಾಣತ್ಯಾಗ ಮಾಡಿದ್ದಾರೆ.