- Home
- News
- India News
- 56 ಬ್ರ್ಯಾಂಚ್ ಹೊಂದಿರೋ ಸಂಗೀತಾ ರೆಸ್ಟೋರೆಂಟ್‌ನಿಂದ 40 ರೂ.ಗೆ ವಿಶೇಷ ಊಟ: ಸೀಮಿತ ಅವಧಿಗೆ ಆಫರ್!
56 ಬ್ರ್ಯಾಂಚ್ ಹೊಂದಿರೋ ಸಂಗೀತಾ ರೆಸ್ಟೋರೆಂಟ್‌ನಿಂದ 40 ರೂ.ಗೆ ವಿಶೇಷ ಊಟ: ಸೀಮಿತ ಅವಧಿಗೆ ಆಫರ್!
Rs 40 Meal Offer: ಸಂಗೀತಾ ರೆಸ್ಟೋರೆಂಟ್ ತನ್ನ 40ನೇ ವಾರ್ಷಿಕೋತ್ಸವದ ಅಂಗವಾಗಿ ಕೇವಲ ₹40ಕ್ಕೆ ವಿಶೇಷ ಥಾಲಿ ನೀಡುತ್ತಿದೆ. ಈ ಆಫರ್ ಸೀಮಿತ ಅವಧಿಗೆ ಮಾತ್ರ ಸೀಮಿತವಾಗಿರಲಿದೆ.

South Indian Thali: ಮನೆಯಲ್ಲಿ ಮಾಡಿದ ಅಡುಗೆಯೇ ಆರೋಗ್ಯಕ್ಕೆ ಒಳ್ಳೆಯದು. ಇತ್ತೀಚಿನ ದಿನಗಳಲ್ಲಿ ಹೋಟೆಲ್ ಆಹಾರವೂ ಗ್ರಾಹಕರ ಜೇಬು ಸುಡುತ್ತಿದೆ. ಶುದ್ಧ ಮತ್ತು ರುಚಿಯಾದ ಆಹಾರ ನೀಡುವ ಹೋಟೆಲ್‌ಗಳಲ್ಲಿ ಸಾಮಾನ್ಯವಾಗಿ ಒಂದು ಊಟದ ಬೆಲೆ 150 ರಿಂದ 180 ರೂಪಾಯಿ ಆಗಿರುತ್ತದೆ.
ಆದರೆ ಇದೀಗ ಜನಪ್ರಿಯ ಸಂಗೀತಾ ರೆಸ್ಟೋರೆಂಟ್ ಕೇವಲ 40 ರೂಪಾಯಿಯಲ್ಲಿ ರುಚಿಯಾದ ಫುಲ್ ಮೀಲ್ ನೀಡುತ್ತಿದೆ. ಈ ಊಟದಲ್ಲಿ ಇಡ್ಲಿ, ವಡಾ, ಸಿಹಿ ಸೇರಿದಂತೆ ಹಲವು ಆಹಾರಗಳನ್ನು ನೀಡಲಾಗುತ್ತಿದೆ. ಈ ಆಫರ್ ಕೆಲವು ದಿನಗಳಿಗೆ ಮಾತ್ರ ಸೀಮಿತವಾಗಿರಲಿದೆ ಎಂದು ರೆಸ್ಟೋರೆಂಟ್ ಹೇಳಿದೆ.
ಕಳೆದ 40 ವರ್ಷಗಳಿಂದ ಚೆನ್ನೈನ ಜನಪ್ರಿಯ ಸಂಗೀತಾ ರೆಸ್ಟೋರೆಂಟ್ 40ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಈ ಶುಭ ಸಂದರ್ಭದಲ್ಲಿ ಸಂಗೀತಾ ರೆಸ್ಟೋರೆಂಟ್ ಜುಲೈ 8ರಿಂದ ಜುಲೈ 24 ರೆವರೆಗೆ ಕೇವಲ 40 ರೂ.ಯಲ್ಲಿ ವಿಶೇಷ ಥಾಲಿಯನ್ನು ತನ್ನ ಗ್ರಾಹಕರಿಗೆ ನೀಡುತ್ತಿದೆ. ಗ್ರಾಹಕರು ಕೇವಲ 40 ರೂಪಾಯಿಯಲ್ಲಿ ರುಚಿಯಾದ ಊಟವನ್ನು ಸವಿಯಬಹುದಾಗಿದೆ.
40 ರೂ. ಸೌಥ್ ಥಾಲಿಯಲ್ಲಿ ಏನೆಲ್ಲಾ ಇರಲಿದೆ?
ಸಂಗೀತಾ ರೆಸ್ಟೋರೆಂಟ್ ತನ್ನ ಗ್ರಾಹಕರಿಗೆ ಸಾಂಪ್ರದಾಯಿಕ ಥಾಲಿಯನ್ನು ನೀಡಲಿದೆ. ಈ ಥಾಲಿಯಲ್ಲಿ ಇಡ್ಲಿ, ವಡಾ, ಸಾಂಬಾರ್, ಚಟ್ನಿ, ರಸಂ, ಕುಟೂ, ಪೊರಿಯಾಲ್, ಪಾಪಡ್, ಪಚಡಿ, ಉಪ್ಪಿನಕಾಯಿ ಮತ್ತು ಮಜ್ಜಿಗೆಯನ್ನು ಒಳಗೊಂಡಿರುತ್ತದೆ. ಇದೆಲ್ಲದರ ಜೊತೆಯಲ್ಲಿ ಸ್ವೀಟ್ ಡಿಶ್ ನೀಡಲಾಗುತ್ತದೆ.
ಈ ಥಾಲಿ ಕೇವಲ ಹೊಟ್ಟೆ ಭರ್ತಿ ಮಾಡೋದಕ್ಕೆ ಅಲ್ಲ. ನಮ್ಮ 40 ವರ್ಷದ ನೆನಪುಗಳನ್ನು ಹಂಚಿಕೊಳ್ಳೋದಾಗಿದೆ. ಊಟವನ್ನು ಪ್ರೀತಿಯಿಂದ ಬಡಿಸಿದಾಗ ಮನೆಯ ನೆನಪು ಬರುತ್ತದೆ ಎಂದು ಸಂಗೀತಾ ರೆಸ್ಟೋರೆಂಟ್ ಹೇಳುತ್ತದೆ.
56 ಶಾಖೆಗಳನ್ನು ಹೊಂದಿರುವ ಸಂಗೀತಾ ರೆಸ್ಟೋರೆಂಟ್
1985ರಲ್ಲಿ ಚೆನ್ನೈ ಚಿಕ್ಕ ಸ್ಥಳವೊಂದರಲ್ಲಿ ಆರಂಭವಾದ ಸಂಗೀತಾ ರೆಸ್ಟೋರೆಂಟ್ ಇಂದು 56 ಶಾಖೆಗಳನ್ನು ಹೊಂದಿದೆ. ಕಳೆದ 40 ವರ್ಷಗಳಿಂದ ಆಹಾರದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದ ಸಂಗೀತಾ ರೆಸ್ಟೋರೆಂಟ್ ತನ್ನದೇ ಆದ ಸಾಮ್ರಾಜ್ಯವನ್ನು ಸ್ಥಾಪಿಸಿದೆ. ಸಂಗೀತಾ ರೆಸ್ಟೋರೆಂಟ್ ಚೆನ್ನೈ ನಿವಾಸಿಗಳ ನೆಚ್ಚಿನ ಆಹಾರ ತಾಣಗಳಲ್ಲಿ ಒಂದಾಗಿದೆ. ಮದುವೆ, ಖಾಸಗಿ ಸಮಾರಂಭ, ಆಫಿಸ್ ಇವೆಂಟ್‌ಗಳಿಗೂ ಸಂಗೀತಾ ರೆಸ್ಟೋರೆಂಟ್ ಆಹಾರವನ್ನು ಪೂರೈಸುತ್ತದೆ.
ಈ ಆಫರ್ ಊಟದ ಸಮಯದಲ್ಲಿ ಮಾತ್ರ ನೀಡಲಾಗುತ್ತಿದೆ. ಈ ವಿಶೇಷ ಥಾಲಿ ಪ್ರತಿದಿನ ಆಯ್ದ ಮಳಿಗೆಗಳಲ್ಲಿ ಬೆಳಗ್ಗೆ 11 ರಿಂದ ಸಂಜೆ 4 ರವರೆಗೆ ಸಿಗುತ್ತದೆ. ಇದು ಮಾರ್ಕೆಟಿಂಗ್ ತಂತ್ರ ಅಲ್ಲ. ತಮ್ಮನ್ನು ಬೆಳೆಸಿದ ಚೆನ್ನೈ ಜನತೆಗೆ ಧನ್ಯವಾದ ಹೇಳುವ ಸಂದರ್ಭ ಎಂದು ಸಂಗೀತಾ ರೆಸ್ಟೋರೆಂಟ್ ಹೇಳಿದೆ.