ಚಿನ್ನ ಸಾಧಕ ನೀರಜ್ ಚೋಪ್ರಾಗೆ ಸೇನಾ ಮುಖ್ಯಸ್ಥರಿಂದ ಅಭಿನಂದನೆ
ನವದೆಹಲಿ( ಆ. 11) ರಕ್ಷಣಾ ಇಲಾಖೆ ಮುಖ್ಯಸ್ಥ ಮತ್ತು ಆರ್ಮಿ ಜನರಲ್ ಎಂಎಂ ನರವಾನೆ ಟೋಕಿಯೋ ಒಲಿಂಪಿಕ್ಸ್ ಚಿನ್ನದ ಪದಕ ಸಾಧಕ ನೀರಜ್ ಚೋಪ್ರಾ ಭೇಟಿಯಾಗಿದೆ. ಪದಕ ವಿಜೇತ ಕ್ರೀಡಾಪಟುವಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಜಾವಲಿನ್ ಥ್ರೋದಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಸಾಧನೆ ಮಾಡಿದ್ದರು. ಅವರ ಸಾಧನೆಯನ್ನು ಇಡೀ ದೇಶವೇ ಕೊಂಡಾಡಿತ್ತು.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನ ತೊಡಿಸಿದ ಜಾವಲಿನ್ ಪಟು ನೀರಜ್ ಚೋಪ್ರಾ ಅವರಿಗೆ ಅಭಿನಂದನೆಗಳ ಮಹಾಪೂರ ಹರಿದು ಬಂದಿತ್ತು. ಇಡೀ ದೇಶವೇ ಕ್ರೀಡಾಪಟುವನ್ನು ಮೆಚ್ಚಿಕೊಂಡಿತ್ತು.
ಭಾರತೀಯ ಸೇನೆಯಲ್ಲಿಯೂ ಸೇವೆ ಸಲ್ಲಿಸುತ್ತಿರುವ ಚೋಪ್ರಾ ಜಗಮೆಚ್ಚುವ ಸಾಧನೆ ಮಾಡಿ ಗೆದ್ದ ಪದಕವನ್ನು ದಿಗ್ಗಜ ಮಿಲ್ಖಾ ಸಿಂಗ್ ಅವರಿಗೆ ಅರ್ಪಿಸಿದ್ದರು.
ಜಾವಲಿನ್ ಫೈನಲ್ ಸ್ಪರ್ಧೆಯಲ್ಲಿ ಬರೋಬ್ಬರಿ 87.58 ಮೀಟರ್ ಎಸೆಯುವ ಮೂಲಕ ಪದಕ ಜಯಿಸಿದ್ದರು. ಭಾರತ ಸ್ವಾತಂತ್ರ್ಯಗೊಂಡ ಬಳಿಕ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅಥ್ಲೀಟಿಕ್ಸ್ ವಿಭಾಗದಲ್ಲಿ ದೇಶಕ್ಕೆ ನೀರಜ್ ಚೋಪ್ರಾ ಮೊದಲ ಪದಕ ಗೆದ್ದು ಕೊಟ್ಟಿದ್ದರು.
ಈ ಪದಕ ಸಾಧನೆಯನ್ನು ನೋಡಲು ನಮ್ಮೊಂದಿಗೆ ಮಿಲ್ಖಾ ಸಿಂಗ್ ಇರಬೇಕಾಗಿತ್ತು ಎಂದು ನೀರಜ್ ಚೋಪ್ರಾ ಸ್ಮರಿಸಿಕೊಂಡಿದ್ದರು . ಭಾರತ ಈ ಬಾರಿ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಒಂದು ಚಿನ್ನ ಸೇರಿ ಏಳು ಪದಕ ಸಾಧನೆ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ