ಈ ಸಂಸದೆ ಮೇಲೆ ಕೊರೋನಾ 'ಕರಿ ನೆರಳು': ಲಂಡನ್‌ನಿಂದ ಮರಳುವಾಗ ಸಿಕ್ಕಾಕ್ಕೊಂಡ್ರು!
ವಿಶ್ವದ 167 ದೇಶಗಳಿಗೆ ಕೊರೋನಾ ವೈರಸ್ ವ್ಯಾಪಿಸಿದೆ. ಈವರೆಗೆ ಸುಮಾರು 8 ಸಾವಿರಕ್ಕೂ ಅಧಿಕ ಮಂದಿ ಈ ವೈರಸ್ ಗೆ ಬಲಿಯಗಿದ್ದಾರೆ. ಹಲವಾರು ಸೆಲೆಬ್ರಿಟಿಗಳಲ್ಲೂ ಈ ಸೋಂಕು ಕಾಣಿಸಿಕೊಂಡಿದೆ. ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಟಿಎಂಸಿ ಸಂಸದೆ ಹಾಗೂ ನಟಿ ಮಿಮಿ ಚಕ್ರವರ್ತಿಗೆ 14 ದಿನ ದಿಗ್ಭಂಧನ ವಿಧಿಸಲಾಗಿದೆ. ಹೀಗಾಗಿ ಮನೆಯಲ್ಲಿ ಮಿಮಿ ಏಕಾಂಗಿಯಾಗೇ ಉಳಿಯಬೇಕಿದೆ.
ಮಿಮಿ ಬುಧವಾರ ಲಂಡನ್ ನಿಂದ ಮರಳಿದ್ದರು. ಸರ್ಕಾರದ ನಿಯಮಗಳನ್ವಯ ಅವರು 14 ದಿನ ಗೃಹ ಬಂಧನದಲ್ಲಿರಬೇಕಾಗಿದೆ. ವಾಸ್ತವವಾಗಿ, ಸೋಂಕಿತರಿರುವ ದೇಶಗಳಿಂದ ಬರುತ್ತಿರುವ ನಾಗರಿಕರನ್ನು 14 ದಿನ ದಿಗ್ಬಂಧನದಲ್ಲಿರಿಸಲಾಗುತ್ತದೆ.
ಕೊರೋನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ದೇಶದ ಪ್ರತಿಯೊಂದು ವಿಮಾನ ನಿಲ್ದಾಣದಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಹೀಗಿರುವಾಗ ವಿದೇಶದಿಂದ ಆಗಮಿಸುವವರಿಗೆ 14 ದಿನ ಮನೆಯಲ್ಲೇ ದಿಗ್ಬಂಧನದಲ್ಲಿರುವಂತೆ ಸಲಹೆ ನೀಡಲಾಗುತ್ತಿದೆ. ಕೊರೋನಾ ವೈರಸ್ ಲಕ್ಷಣ ಕಂಡು ಬರಲು 14 ದಿನ ಬೇಕು.
ಮಿಮಿ ಪಶ್ಚಿಮ ಬಂಗಾಳದ ಜಾಧವ್ ಪುರ್ ಲೋಕಸಭಾ ಕ್ಷೇತ್ರದ ಸಂಸದೆಯಾಗಿದ್ದಾರೆ. ಸದ್ಯ ವಿದೇಶದಿಂದ ಆಗಮಿಸಿರುವ ಮಿಮಿಗೆ ಕೊರೋನಾ ಸೋಂಕು ತಗುಲಿದ್ದರೂ, ಅವರ ಸಂಪರ್ಕಕ್ಕೆ ಬರುವ ಬೇರೊಬ್ಬರಿಗೆ ಹರಡದಿರುವ ನಿಟ್ಟಿನಲ್ಲಿ ದಿಗ್ಬಂಧನದಲ್ಲಿರುವಂತೆ ಸೂಚಿಸಲಾಗಿದೆ.
ಮಿಮಿ ಇಂಗ್ಲೆಂಡ್ ನಲ್ಲಿ ತಮ್ಮ ಮುಂಬರುವ ಸಿನಿಮಾ 'ಬಾಜೀ' ಶೂಟಿಂಗ್ ಗೆ ತೆರಳಿದ್ದರು. ಅವರು ವಿಮಾನ ನಿಲ್ದಾಣದ ಹೊರಗೆ ತಮ್ಮ ತಮ್ಮ ಸಹ ಕಲಾವಿದರು ಹಾಗೂ ಜನರ ಬಳಿ ಮನವಿಯನ್ನೂ ಮಾಡಿದ್ದಾರೆ.
ಜನರ ಬಳಿ ಮನವಿ ಮಾಡಿಕೊಂಡಿರುವ ಮಿಮಿ 'ಈ ಮಹಾಮಾರಿ ತಡೆಯುವ ನಿಟ್ಟಿನಲ್ಲಿ ನಾನು ಸರ್ಕಾರಿ ನಿಯಮಗಳನ್ನು ಪಾಲಿಸಬೇಕು' ಎಂದಿದ್ದಾರೆ.
ನಾನು ಲಂಡನ್ ನಿಂದ ದುಬೈಗೆ ಬಂದು ಅಲ್ಲಿಂದ ಬಂದಿದ್ದೇನೆ. ಹೀಗಾಗಿ ಸರ್ಕಾರ ಈ ನಿಯಮ ವಿಧಿಸಿದೆ. ನಾನು ನನ್ನ ತಂದೆ ತಾಯಿ ಬಳಿಯೂ ಭೇಟಿಯಾಗದಂತೆ ಹೇಳಿದ್ದೇನೆ ಎಂದಿದ್ದಾರೆ.
ಮಿಮಿ ಬಂಗಾಳಿ ಸಿನಿ ಕ್ಷೇತ್ರದ ಸ್ಟಾರ್ ನಟಿಯಲ್ಲೊಬ್ಬರು. ರಾಜಕೀಯದೊಂದಿಗೆ ಈಗಲೂ ಅವರು ಟಿವಿ ಹಾಗೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆರಂಭದಲ್ಲಿ ಇವರೊಬ್ಬ ಮಾಡೆಲ್ ಕೂಡಾ ಆಗಿದ್ದರು.
ಮಿಮಿ ಲೋಕಸಭಾ ಚುನಾವಣೆಗೂ ಮುನ್ನ ಮಮತಾ ಬ್ಯಾನರ್ಜಿ ಪಕ್ಷ ತೃಣಮೂಲ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದರು.