ಆಮ್ ಆದ್ಮಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಐಷಾರಾಮಿ ಪ್ಯಾಲೆಸ್‌ನ Exclusive ಚಿತ್ರಗಳು!
ಆಮ್ ಆದ್ಮಿ ಪಾರ್ಟಿಯ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಐಷಾರಾಮಿ ಶೀಶ್‌ಮಹಲ್ ಈಗ ರಾಜಕೀಯ ಕಾರಣಗಳಿಗಾಗಿ ಸುದ್ದಿಯಲ್ಲಿದೆ. ಇದರ ನಡುವೆ ದೆಹಲಿ ಬಿಜೆಪಿ ನಾಯಕ ತಜಿಂದರ್ ಪಾಲ್ ಸಿಂಗ್ ಬಗ್ಗಾ ಈ ಬಂಗಲೆಯ ಒಳಾಂಗಣ ಚಿತ್ರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರಗಳನ್ನು ಏಷ್ಯಾನೆಟ್ ಸುವರ್ಣನ್ಯೂಸ್ ವೆರಿಫೈ ಮಾಡಿರುವುದಿಲ್ಲ.
ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಮೀಟಿಂಗ್ ಹಾಲ್. ಇದೇ ಹಾಲ್‌ನಲ್ಲಿ ಸಾಕಷ್ಟು ರಾಜಕೀಯ ನಾಯಕರವನ್ನು ಅವರು ಭೇಟಿಯಾಗಿದ್ದರು.
ಅರವಿಂದ್ ಕೇಜ್ರಿವಾಲ್ ಹಾಗೂ ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಭೇಟಿ ಇದೇ ಸ್ಥಳದಲ್ಲಿ ನಡೆದಿತ್ತು. ಅದರೊಂದಿಗೆ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರನ್ನೂ ಇಲ್ಲಿ ಭೇಟಿಯಾಗಿದ್ದರು.
ಐಷಾರಾಮಿ ಹಾಲ್‌ನ ಚಿತ್ರ. ಕೇಜ್ರಿವಾಲ್ ಇರುವ ಸರ್ಕಾರಿ ಬಂಗಲೆಯ ಐಷಾರಾಮಿ ಹಾಲ್‌ನ ಚಿತ್ರ ಇದು. ಒಟ್ಟಾರೆ, ಈ ಮನೆಗಾಗಿಯೇ ಅವರು 45 ಕೋಟಿ ವೆಚ್ಚ ಮಾಡಿದ್ದಾರೆ ಎನ್ನುವ ಆರೋಪಗಳಿವೆ.
ಮನೆಯೊಳಗಿನ ಕೆತ್ತನೆಗಳ ಚಿತ್ರ. ಐಷಾರಾಮಿ ಬಂಗಲೆಯ ಒಳಗಿನ ಕೆತ್ತನೆಯ ಚಿತ್ರಗಳು ಹಾಗೂ ನೆಲಕ್ಕೆ ಹಾಕಲಾಗಿರುವ ಮಾರ್ಬಲ್‌ಗಳ ಚಿತ್ರಗಳು. ಈ ಮಾರ್ಬಲ್‌ಗಳನ್ನು ವಿಯಟ್ನಾಂನಿಂದ ತರಿಸಲಾಗಿದೆ ಎನ್ನುವ ಆರೋಪಗಳಿವೆ.
ಐಷಾರಾಮಿ ಬಂಗಲೆಯ ಮುಂದಿರುವ ಆಕರ್ಷಕ ಉದ್ಯಾನವನ. ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ಬಂಗಲೆಯ ಮುಂದೆ ವಿಶಾಲ ವಿನ್ಯಾಸದ ಗಾರ್ಡನ್ ಇದ್ದು, ಶೀಶ್‌ಮಹಲ್ ಅದರ ಹಿಂದೆ ಅತ್ಯಾಕರ್ಷಕವಾಗಿ ಗೋಚರವಾಗುತ್ತಿದೆ.
ಈ ಚಿತ್ರಗಳನ್ನು ಬಿಜೆಪಿ ನಾಯಕ ತಜೀಂದರ್ ಸಿಂಗ್ ಬಗ್ಗಾ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಬಡಜನರ ಪಕ್ಷ ಎನ್ನುವ ಅರ್ಥದ ಆಮ್ ಆದ್ಮಿ ಪಾರ್ಟಿಯ ನಾಯಕ, ತನ್ನ ಮನೆಗಾಗಿ 45 ಕೋಟಿ ರೂಪಾಯಿ ಸರ್ಕಾರಿ ಹಣ ವೆಚ್ಚ ಮಾಡಿರುವುದು ಎಷ್ಟು ಸರಿ ಎಂದು ಬಿಜೆಪಿ, ಕಾಂಗ್ರೆಸ್ ಪ್ರಶ್ನೆ ಮಾಡಿದೆ.