ಮತ್ತೆ ಮತ್ತೆ ಆಕಳಿಕೆಯೇ? ಹಾಗಿದ್ರೆ ಏನೋ ಡೇಂಜರ್ ಇದೆ ಅನ್ನೋದು ಗ್ಯಾರಂಟಿ
First Published Jan 4, 2021, 7:54 PM IST
ಇತ್ತಿಚಿನ ದಿನಗಳಲ್ಲಿ ಜನರ ಬದಲಾದ ಜೀವನಶೈಲಿ ಮತ್ತು ಒತ್ತಡದಿಂದಾಗಿ ಹೃದಯಾಘಾತ ಸಾಮಾನ್ಯವಾಗಿಬಿಟ್ಟಿದೆ. ಹೃದಯಾಘಾತವು ಒಂದು ಗಂಭೀರ ವೈದ್ಯಕೀಯ ತುರ್ತು ಪರಿಸ್ಥಿತಿಯಾಗಿದ್ದು, ತಕ್ಷಣ ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳಲೇಬೇಕು.ಇದು ಹೃದಯಕ್ಕೆ ರಕ್ತಸಂಚಾರವನ್ನು ನಿರ್ಬಂಧಿತವಾಗಿದ್ದು, ಆಮ್ಲಜನಕದ ಸಾಗಣೆಯಲ್ಲಿ ಅಡಚಣೆಯುಂಟಾಗುತ್ತದೆ ಮತ್ತು ಹೃದಯದ ಸ್ನಾಯು ಸಾಯಲು ಪ್ರಾರಂಭಿಸುತ್ತದೆ.

ಇವುಗಳ ಬಗ್ಗೆ ಗಮನ ಹರಿಸಿದ್ದರೆ ಈ ಸ್ಥಿತಿಯಿಂದ ಸುಲಭವಾಗಿ ಪಾರಾಗಬಹುದು. ಆದರೆ ಸಮಸ್ಯೆ ಏನೆಂದರೆ ಎಲ್ಲಾ ಹೃದಯ ಸ್ಥಿತಿಗಳು ಸ್ಪಷ್ಟ ಎಚ್ಚರಿಕೆಯ ಚಿಹ್ನೆಗಳೊಂದಿಗೆ ಬರುವುದಿಲ್ಲ. ಪ್ರತಿ ದಿನ ಸಿನಿಮಾ, ಸೀರಿಯಲ್ ನೋಡುವುದರಿಂದ ಜನರು ಎದೆನೋವು ಮತ್ತು ನೆಲದ ಮೇಲೆ ಬೀಳುವುದು ಹೃದಯಾಘಾತದ ಸ್ಪಷ್ಟ ಚಿಹ್ನೆಗಳು ಎಂದು ಅಂದುಕೊಳ್ಳುತ್ತಾರೆ. ಇದಕ್ಕೆ ವಿರುದ್ಧವಾಗಿ, ಕೆಲವು ಲಕ್ಷಣಗಳು ಎದೆಯ ಹತ್ತಿರವೂ ಸಂಭವಿಸುವುದಿಲ್ಲ . ಕೆಲವೊಂದನ್ನು ನಿರ್ಲಕ್ಷ್ಯ ಮಾಡುತ್ತೇವೆ. ಅವುಗಳಲ್ಲಿ ಒಂದು ಲಕ್ಷಣ ಎಂದರೆ ಆಕಳಿಕೆ. ಹೌದು ಆಕಳಿಕೆ ಸಹ ಹೃದಯಾಘಾತದ ಒಂದು ಪ್ರಮುಖ ಲಕ್ಷಣವಾಗಿದೆ.

ಹೃದಯಘಾತ:
ಸಾಮಾನ್ಯವಾಗಿ ನಿದ್ದೆ ಬಾರದಿರುವುದು ಒಂದು ಸಂಕೇತ. ಆದರೆ ಉತ್ತಮ ನಿದ್ರೆಯನ್ನು ಹೊಂದಿರುವ ದಿನಗಳಲ್ಲಿಯೂ ಸಹ ಇದನ್ನು ಮಾಡುತ್ತಲಿದ್ದರೆ ಮತ್ತು ಆಯಾಸದ ಅನುಭವವಾಗದಿದ್ದರೆ, ಅದು ಗಂಭೀರ ಆರೋಗ್ಯ ಸ್ಥಿತಿಯ ಲಕ್ಷಣವಾಗಿರಬಹುದು.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?