ಕೊರೋನಾ ಗೆದ್ದು ಬಂದಿರುವಿರೇ? ಹಾಗಿದ್ರೆ ಟೂತ್ ಬ್ರಶ್ ಬದಲಿಸಿ
ಭಾರತದಲ್ಲಿ ಕೊರೊನಾ ವೈರಸ್ ಅಪಾಯಕಾರಿ ಮಟ್ಟವನ್ನು ತಲುಪಿದೆ. ಒಮ್ಮೆ ಒಬ್ಬ ವ್ಯಕ್ತಿಯು ಕೊರೊನಾ ಸೋಂಕಿಗೆ ಒಳಗಾದರೆ, ಅವನು ಮತ್ತೆ ಸೋಂಕಿಗೆ ಒಳಗಾಗಬಹುದು ಎಂಬುದಕ್ಕೆ ಪುರಾವೆಗಳಿವೆ. ಲಸಿಕೆಯು ಕೊರೊನಾ ವಿರುದ್ಧದ ರಕ್ಷಣೆಗೆ ಗಮನಾರ್ಹ ಕೊಡುಗೆ ನೀಡುತ್ತದೆ. ಲಸಿಕೆಯು ಎಲ್ಲಾ ಸಮಯದಲ್ಲೂ ಶೇಕಡಾ 100ರಷ್ಟು ಸುರಕ್ಷತೆಯನ್ನು ಖಾತರಿ ಪಡಿಸಲು ಸಾಧ್ಯವಿಲ್ಲ ಎಂದು ತಜ್ಞರು ನಂಬುತ್ತಾರೆ. ಏನೇ ಆದರು ನಾವು ಜಾಗರೂಕರಾಗಿರಬೇಕು.
ಒಂದು ವೇಳೆ ನೀವು ಕೊರೋನಾ ಸೋಂಕಿಗೆ ಒಳಗಾಗಿದ್ದು, ಇದೀಗ ಚೇತರಿಸಿಕೊಂಡು ಮನೆಯಲ್ಲಿದ್ದೀರಾ? ಹಾಗಿದ್ರೆ ಇದನ್ನು ನೀವು ಓದಲೇಬೇಕು... ಮೊದಲು ನೀವು ಕೊರೊನಾದಿಂದ ಚೇತರಿಸಿಕೊಂಡ ನಂತರ ಮಾಡಲೇ ಬೇಕಾದ ಸಂಗತಿ ಎಂದರೆ ಬ್ರಷ್ ಅನ್ನು ಬದಲಾಯಿಸಿ. ಬ್ರಷ್ ಮತ್ತು ನಾಲಿಗೆ ಕ್ಲೀನರ್‌ಗಳಿಂದ ಮತ್ತೆ ಸೋಂಕು ಉಂಟಾಗಬಹುದು.
ನೀವು ಅಥವಾ ನಿಮ್ಮ ಕುಟುಂಬದ ಸದಸ್ಯರು ಅಥವಾ ಸ್ನೇಹಿತ ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದರೆ, ಮೊದಲು ಟೂತ್ ಬ್ರಷ್, ನಾಲಿಗೆ ಕ್ಲೀನರ್ ಅನ್ನು ಬದಲಿಸಿ.
ಬ್ರಷ್ ಬಾಯಿಯ ಆರೋಗ್ಯಕ್ಕೆ ಅತ್ಯಗತ್ಯ ಮಾತ್ರವಲ್ಲ, ಕೊರೊನಾ ಸೋಂಕು ಹರಡುವುದನ್ನು ತಡೆಯಬಹುದು. ಸೀಸನಲ್ ಜ್ವರ, ಕೆಮ್ಮು ಮತ್ತು ಶೀತದಿಂದ ಚೇತರಿಸಿಕೊಂಡ ಜನರು ತಕ್ಷಣವೇ ತಮ್ಮ ಬ್ರಷ್ ಅನ್ನು ಬದಲಾಯಿಸಬೇಕು.
ಟಂಗ್ ಕ್ಲೀನರ್ ಬದಲಾಯಿಸುವುದು ಸಹ ಮುಖ್ಯ
ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವ ರೋಗಿಯು ಸಾಮಾನ್ಯ ಟಂಗ್ ಕ್ಲೀನರ್ ಅನ್ನು ಸಹ ಬಳಸಬಾರದು. ಕೊರೊನಾದಿಂದ ಚೇತರಿಸಿಕೊಂಡ 20 ದಿನಗಳ ನಂತರ ಟಂಗ್ ಕ್ಲೀನರ್ ಅನ್ನು ಬದಲಾಯಿಸುವ ಮೂಲಕ, ಸೋಂಕು ಹರಡುವುದನ್ನು ಮತ್ತು ಮರು ಸೋಂಕು ಹರಡುವುದನ್ನು ತಪ್ಪಿಸಬಹುದು.
ಬಾಯಿ ಬ್ಯಾಕ್ಟೀರಿಯಾವನ್ನು ಕೊಲ್ಲಿ:
ಬಾಯಿಯಲ್ಲಿ ಅಡಗಿರುವ ವೈರಸ್‌ಗಳು ಅಥವಾ ಬ್ಯಾಕ್ಟೀರಿಯಾಗಳನ್ನು ತೊಡೆದು ಹಾಕಲು ಉತ್ತಮ ಮಾರ್ಗವೆಂದರೆ ಮೌತ್ ವಾಷ್ ಮಾಡುವುದು. ಇದನ್ನು ನೈಸರ್ಗಿಕ ವಿಧಾನವಾಗಿಯೂ ಮಾಡಬಹುದು.
ಬೆಚ್ಚಗಿನ ನೀರಿನಿಂದ ಸ್ವಲ್ಪ ಪ್ರಮಾಣದ ಉಪ್ಪಿನೊಂದಿಗೆ ಮೌತ್ ವಾಷ್ ಮಾಡಬಹುದು. ಇದಕ್ಕಾಗಿ ವಿವಿಧ ಮೌತ್ ವಾಶ್ ಮತ್ತು ಬೆಟಾಡಿನ್ ಗಾರ್ಗಲ್ ಕೂಡ ಮಾರುಕಟ್ಟೆಯಲ್ಲಿ ಲಭ್ಯವಿದೆ.
ವಾಸ್ತವವಾಗಿ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ವೈರಸ್‌ನ ಸಣ್ಣ ಹನಿಗಳು ಕೆಮ್ಮು, ಸೀನುಗಳು ಇತ್ಯಾದಿಗಳ ಮೂಲಕ ಸೋಂಕಿತ ವ್ಯಕ್ತಿಯ ಬಾಯಿಯಿಂದ ಹೊರಬರುತ್ತವೆ ಮತ್ತು ಸುತ್ತಮುತ್ತಲಿನ ಮೇಲ್ಮೈಗಳನ್ನು ಕಲುಷಿತಗೊಳಿಸುತ್ತದೆ. ಆದುದರಿಂದ ಸಾಧ್ಯವಾದಷ್ಟು ಜಾಗರೂಕರಾಗಿರುವುದು ಮುಖ್ಯವಾಗಿದೆ.