MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
Raksha Bandhan Wishes
Toxic OTT Release Date
ICC Test Rankings
Mekedatu Project
Nepal-tibet Floods
New Financial Rules September
Bengaluru Airport Gold Smuggling
Bengaluru Development Authority
Mangaluru Railway station
CJ Roy Death Case
Hosapete to Arasikere Train
  • Home
  • Life
  • Health
  • ಕೋಪ ಬಂದಾಗ ಜೊತೆಗೆ ಅಳು ಬರೋದು ಯಾಕೆ?

ಕೋಪ ಬಂದಾಗ ಜೊತೆಗೆ ಅಳು ಬರೋದು ಯಾಕೆ?

ಅತಿಯಾದ ಕೋಪವು ಹೃದಯ ಬಡಿತವನ್ನು ವೇಗಗೊಳಿಸುತ್ತದೆಯೇ? ಜೊತೆಗೆ ನಿಮಗೆ ಹೆಚ್ಚು ಕೋಪ ಬಂದಾಗ ಅಳು ಬರುತ್ತದೆಯೇ? ಹೌದು ಎಂದಾದರೆ, ಈ ರೀತಿ ಆಗೋದು ನಿಮಗೆ ಮಾತ್ರ ಅಲ್ಲ, ಅಳುವುದು ಕೋಪಕ್ಕೆ ಸಾಮಾನ್ಯ ಪ್ರತಿಕ್ರಿಯೆ ಎಂದು ನಂಬಲಾಗಿದೆ, ಆದರೆ ಕೋಪ ಬಂದಾಗ ಅಳು ಬರೋದು ಯಾಕೆ? ಮನಶ್ಶಾಸ್ತ್ರಜ್ಞರಿಂದ ಕಲಿಯೋಣ.  

2 Min read
Author : Suvarna News
Published : Aug 13 2023, 11:34 AM IST
Share this Photo Gallery
  • FB
  • TW
  • Linkdin
  • Whatsapp
19

ಕೆಲವೊಮ್ಮೆ ನಮಗೆ ಅತಿಯಾಗಿ ಕೋಪ ಬಂದಾಗ, ತಡೆಯಲಾರದೆ ಕಣ್ಣೀರು ಬರುತ್ತೆ. ಆ ಕ್ಷಣದಲ್ಲಿ, ನಾವು ಏಕೆ ಅಳುತ್ತಿದ್ದೇವೆ ಅನ್ನೋದು ನಮಗೆ ಅರ್ಥ ಆಗೋದಿಲ್ಲ. ಕೋಪಗೊಂಡ ಕಣ್ಣುಗಳಿಂದ ಗಂಗಾ-ಯಮುನಾ ಹರಿಯಲು ಪ್ರಾರಂಭಿಸುತ್ತದೆ. ಇದು ಯಾರಿಗೂ ವಿವರಿಸಲು ಸಾಧ್ಯವಾಗದ ಭಾವನೆ.
 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
29

"ಹೇಯ್, ನೀನು ಕೋಪಗೊಂಡಿದ್ದೆ, ಹಾಗಾದರೆ ಇದ್ದಕ್ಕಿದ್ದಂತೆ ಏಕೆ ಅಳುತ್ತಿರುವೆ? ಎಂದು ಯಾರಾದ್ರೂ ಕೇಳಿದ್ರೆ ಖಂಡಿತಾ ಅದಕ್ಕೆ ಸರಿಯಾದ ಉತ್ತರ ಇಲ್ಲ. ಆದರೆ ಇದು ಹೆಚ್ಚಿನ ಜನರಿಗೆ ಸಂಭವಿಸುತ್ತೆ.  ತೀವ್ರ ಕೋಪದ ಮಧ್ಯೆ ಕಣ್ಣುಗಳಿಂದ ಕಣ್ಣೀರು (tears in eyes) ಬರಲು ಪ್ರಾರಂಭಿಸಿದಾಗ, ಅದು ಗೊಂದಲಮಯ ಮತ್ತು ಹೆಚ್ಚು ನೋವಿನಿಂದ ಕೂಡಿರುತ್ತದೆ. ಆ ಸಮಯದಲ್ಲಿ ನಾವು ನಮ್ಮ ದೇಹವನ್ನು ಅರ್ಥಮಾಡಿಕೊಳ್ಳುವುದಿಲ್ಲ.  

39

ಹಾಗಿದ್ರೆ ಕೋಪಗೊಂಡಾಗ ಕಣ್ಣಿರು ಯಾಕೆ ಬರುತ್ತೆ?  ಕೋಪಗೊಂಡಾಗ, ದೇಹದಲ್ಲಿ ಅನೇಕ ಹಾರ್ಮೋನುಗಳು ಉತ್ಪತ್ತಿಯಾಗುತ್ತವೆ. ಈ ಕಾರಣದಿಂದಾಗಿ, ಮುಖವು ಕೆಂಪಾಗುತ್ತದೆ, ಬೆವರಲು ಪ್ರಾರಂಭಿಸುತ್ತದೆ, ಜೊತೆಗೆ ಕಣ್ಣಲ್ಲಿ ನೀರು ಸಹ ಬರುತ್ತೆ. ಇದು ಒಂದು ರೀತಿಯ ಪ್ರತಿಕ್ರಿಯೆ. ಅಳುವುದು ಕೋಪವನ್ನು ಶಾಂತಗೊಳಿಸುತ್ತದೆ ಮತ್ತು ಒಂದು ರೀತಿಯಲ್ಲಿ ಅದು ಕೋಪವನ್ನು ದುರ್ಬಲಗೊಳಿಸುತ್ತದೆ.  

49

ನಾವು ಕೋಪಗೊಂಡಾಗ ಏಕೆ ಅಳುತ್ತೇವೆ?: ಸಹೋದರನೊಂದಿಗೆ ಜಗಳವಾಡುವಾಗ  ಅಥವಾ ಸ್ನೇಹಿತನ ಬಗ್ಗೆ ಅಸಮಾಧಾನಗೊಂಡಿದ್ದರೆ ಆವಾಗ ಕೋಪ ಬಂದಾಗ ನಾವು ಅಳುತ್ತೇವೆ. ನಾವು ಈ ಭಾವನೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರೆ, ಇದಕ್ಕೆ ಒಂದು ಸರಳ ಕಾರಣವೆಂದರೆ ನಮಗೆ ನೋವಾದಾಗ, ಕೋಪದಲ್ಲೂ ನಾವು ಅಳಲು (crying when angry) ಪ್ರಾರಂಭಿಸುತ್ತೇವೆ. 

59

ಅನೇಕ ಬಾರಿ ನಾವು ಏನನ್ನೂ ಹೇಳಲು ಸಾಧ್ಯವಾಗೋದಿಲ್ಲ ಮತ್ತು ಕೋಪದಿಂದ ಅಳಲು ಪ್ರಾರಂಭಿಸುತ್ತೇವೆ. ಇದಕ್ಕೆ ಕೆಲವೊಂದು ಕಾರಣಗಳು ಹೀಗೂ ಇರಬಹುದು..

ಸಾಮಾಜಿಕ ನಿರೀಕ್ಷೆಗಳು: ಸಮಾಜವು ನಿಗದಿಪಡಿಸಿದ ಮಾನದಂಡಗಳು ನಾವು ನಮ್ಮ ಭಾವನೆಗಳನ್ನು ಹೇಗೆ ವ್ಯಕ್ತಪಡಿಸಬೇಕು ಎಂಬುದನ್ನು ನಿರ್ಧರಿಸುತ್ತವೆ. ಈ ಒತ್ತಡದಿಂದಾಗಿ ಅನೇಕ ಬಾರಿ, ನಾವು ಕೋಪಗೊಳ್ಳುತ್ತೇವೆ ಮತ್ತು ಅಳಲು ಪ್ರಾರಂಭಿಸುತ್ತೇವೆ. ಕೋಪದಿಂದ ಅಳುವುದು ಆ ಸಾಂಪ್ರದಾಯಿಕ ಪ್ರತಿಕ್ರಿಯೆಗಳಿಗೆ ವಿರುದ್ಧವಾಗಿರಬಹುದು, ಆದರೆ ಇದು ವ್ಯಕ್ತಿಯ ಅಧಿಕೃತ ಪ್ರತಿಕ್ರಿಯೆಯನ್ನು ತೋರಿಸುತ್ತದೆ.
 

69

ಇಮೋಷನಲ್ ಇಂಟೆನ್ಸಿಟಿ: ಕೋಪವು ಒಂದು ಶಕ್ತಿಯುತ ಭಾವನೆ ಎಂದು ನಿಮಗೆ ತಿಳಿದಿದೆ. ನಾವು ಕೋಪಗೊಂಡಾಗ ನಮ್ಮನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಹಾಗಾಗಿ ನಮ್ಮ ಹತ್ತಿರದವರಿಂದಲೇ ನಾವು ಕೋಪಕ್ಕೆ ಒಳಗಾದರೆ ಆ ಸಂದರ್ಭದಲ್ಲಿ ಕೋಪ ತಡೆಯಲು ಸಾಧ್ಯವಾಗದೇ ಕಣ್ಣೀರು ಬರುತ್ತೆ. 

79

ಕ್ಯಾಥರ್ಸಿಸ್: ಕೋಪಗೊಂಡಾಗ ನಮ್ಮ ಅಳು ಭಾವನೆಗಳನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಇದು ಭಾವನಾತ್ಮಕ ಬಿಡುಗಡೆಯ ಒಂದು ಭಾಗವಾಗಿದೆ, ನಂತರ ಒತ್ತಡ ಹತಾಶೆ ಕಡಿಮೆಯಾಗುತ್ತೆ. ಮನಸ್ಸಿಗೆ ಸಮಾಧಾನ ಸಿಗುತ್ತೆ. 
 

89

ಸಂವಹನ: ಕೋಪದಲ್ಲಿ ಅಳುವುದು ನಮ್ಮ ಸುತ್ತಲಿನವರೊಂದಿಗೆ ನಾವು ಹೊಂದಿರುವ ಒಂದು ರೀತಿಯ ಸಂವಹನವಾಗಿದೆ. ಇದು ನಮ್ಮ ಸಮಸ್ಯೆಯನ್ನು ಮುಂದಿಡುತ್ತದೆ. ಕೋಪಗೊಂಡಾಗ ಅಳುವುದು ನಮಗೆ ಗೊತ್ತಿರದೇ ಆಗುವ ಪ್ರತಿಕ್ರಿಯೆ ಇರಬಹುದು, ಆದರೆ ಇದು ಭಾವನಾತ್ಮಕ ಸಂಕಟವನ್ನು ಸೂಚಿಸುತ್ತದೆ.

99

ಕೋಪದಲ್ಲಿ ಅಳುವುದು ಸಾಮಾನ್ಯವೇ?: ಕೋಪದಲ್ಲಿ ಅಳುವುದು ಸಾಮಾನ್ಯ ಪ್ರತಿಕ್ರಿಯೆ ಮಾತ್ರವಲ್ಲ, ಅನೇಕ ರೀತಿಯಲ್ಲಿ ನಿಮಗೆ ಒಳ್ಳೆಯದು ಎಂದು ಸಾಬೀತುಪಡಿಸುತ್ತದೆ. ಅಳುವುದು ನಮ್ಮ ದೇಹದಲ್ಲಿ ಆಕ್ಸಿಟೋಸಿನ್ ಮತ್ತು ಪ್ರೊಲ್ಯಾಕ್ಟಿನ್ ನಂತಹ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಇವು ನಿಮ್ಮ ಹೃದಯ ಬಡಿತವನ್ನು (heart beat) ಕಡಿಮೆ ಮಾಡುತ್ತದೆ ಮತ್ತು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
ಜೀವನಶೈಲಿ

Latest Videos
Recommended Stories
Recommended image1
Gardening Tips: ಮನೆಯಲ್ಲೇ ಅಲೋವೆರಾ ಬೆಳೆಸಿ, ಈ 5 ಅದ್ಭುತ ಪ್ರಯೋಜನಗಳನ್ನು ಪಡೆಯಿರಿ
Recommended image2
ಮಲ್ಲಿಗೆ ಹೂ ಮುಡಿದರೆ ಮನಸ್ಸಿಗೆ ಏನಾಗುತ್ತೆ? ಈ ಬಿಳಿಯ ಹೂವಿನ ರಹಸ್ಯ ತಿಳಿದರೆ ಶಾಕ್ ಆಗ್ತೀರಾ!
Recommended image3
ಊಟದ ನಂತರ ಪ್ರತಿದಿನ ಬೆಲ್ಲ-ತುಪ್ಪ ತಿನ್ನಿ... ಆರೋಗ್ಯದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಗೊತ್ತಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved