ಯಾವ ಸಂದರ್ಭದಲ್ಲಿ ಮಹಿಳೆಯರು ಸ್ತ್ರೀರೋಗ ತಜ್ಞರನ್ನು ನೋಡಬೇಕು ಗೊತ್ತಾ?
ಹೆಚ್ಚಾಗಿ ಮಹಿಳೆಯರು ತಮ್ಮ ಖಾಸಗಿ ಭಾಗಗಳ ಸಮಸ್ಯೆಯನ್ನು ನಿರ್ಲಕ್ಷಿಸುತ್ತಾರೆ ಅಥವಾ ನಾಚಿಕೆಯಿಂದಾಗಿ ಯಾರೊಂದಿಗೂ ಇದರ ಬಗ್ಗೆ ಹೇಳೊದಿಲ್ಲ, ಆದರೆ ಯೋನಿಯನ್ನು ಆರೋಗ್ಯಕರವಾಗಿಡುವುದು ಎಷ್ಟು ಮುಖ್ಯ ಎಂದು ನಿಮಗೆ ತಿಳಿದಿದೆಯೇ? ಇದಕ್ಕಾಗಿ, ನೀವು ಸ್ತ್ರೀರೋಗ ತಜ್ಞರನ್ನು ಸಂಪರ್ಕಿಸಬಹುದು.
ಸಂತಾನೋತ್ಪತ್ತಿಗೆ ಸಂಬಂಧಿಸಿದ ಸಮಸ್ಯೆಯನ್ನು ನೀವು ನಿರ್ಲಕ್ಷಿಸಿದರೆ, ಅದು ಆರೋಗ್ಯಕ್ಕೆ ಅನೇಕ ಗಂಭೀರ ಹಾನಿಯನ್ನುಂಟು ಮಾಡುತ್ತದೆ. ಅನೇಕ ಬಾರಿ ಮಹಿಳೆಯರು ಖಾಸಗಿ ಭಾಗಗಳಲ್ಲಿ ಅನೇಕ ಸಮಸ್ಯೆಗಳನ್ನು ಹೊಂದಿರುತ್ತಾರೆ, ಆದರೆ ಭಯದಿಂದಾಗಿ, ಅವರು ಯಾರೊಂದಿಗೂ ಇದರ ಬಗ್ಗೆ ಮಾತನಾಡಲು ಹೆದರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಸ್ತ್ರೀರೋಗತಜ್ಞರನ್ನು (gynaecologist) ಯಾವಾಗ ಭೇಟಿಯಾಗಬೇಕು ಅನ್ನೋದನ್ನು ತಿಳಿಯಿರಿ.
ಸ್ತ್ರೀರೋಗತಜ್ಞರನ್ನು ಭೇಟಿ ಮಾಡುವಾಗ ಮಹಿಳೆಯರಿಗೆ ಹೆಚ್ಚಾಗಿ ಒತ್ತಡ, ಮುಜುಗರ ಉಂಟಾಗುತ್ತೆ. ಸ್ತ್ರೀರೋಗತಜ್ಞರು ಮಾತ್ರ ಮಹಿಳೆಗೆ ಅವಳ ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ಹೇಳಬಹುದು. ಆದ್ದರಿಂದ, ಸ್ತ್ರೀರೋಗತಜ್ಞರನ್ನು ಭೇಟಿ ಮಾಡುವುದು ಯಾವಾಗ ಅಗತ್ಯವೆಂದು ತಿಳಿಯೋಣ.
ಅನಿಯಮಿತ ಋತುಚಕ್ರ (Irregular Periods): ಕೆಲವು ಮಹಿಳೆಯರು ಆಗಾಗ್ಗೆ ವಿಳಂಬವಾದ ಋತುಚಕ್ರ, ಅಧಿಕ ರಕ್ತಸ್ರಾವ ಅಥವಾ ದೀರ್ಘಕಾಲದ ರಕ್ತಸ್ರಾವವನ್ನು ಹೊಂದಿರುತ್ತಾರೆ. ಈ ಸಮಸ್ಯೆಗಳು ಹಾರ್ಮೋನುಗಳ ಅಸಮತೋಲನ, ಪಿಸಿಒಎಸ್, ಥೈರಾಯ್ಡ್ ಇತ್ಯಾದಿಗಳಿಂದ ಉಂಟಾಗಬಹುದು. ಅನೇಕ ಬಾರಿ ಮಹಿಳೆಯರು ಈ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಾರೆ. ಈ ಸಂದರ್ಭದಲ್ಲಿ, ಸ್ತ್ರೀರೋಗತಜ್ಞರನ್ನು ಸಂಪರ್ಕಿಸಿ.
ಪೆಲ್ವಿಕ್ ನೋವು (Pelvic Pain): ನೀವು ದೀರ್ಘಕಾಲದಿಂದ ಪೆಲ್ವಿಕ್ ನೋವಿನಿಂದ ಬಳಲುತ್ತಿದ್ದರೆ, ಈ ಪರಿಸ್ಥಿತಿಯಲ್ಲಿ ಸ್ತ್ರೀರೋಗ ತಜ್ಞರನ್ನು ಸಂಪರ್ಕಿಸಿ. ಮುಟ್ಟಿನ ಸಮಯದಲ್ಲಿ ಅಥವಾ ಲೈಂಗಿಕ ಕ್ರಿಯೆಯ ಸಮಯದಲ್ಲಿ ಮಹಿಳೆಯರು ಪೆಲ್ವಿಕ್ ನೋವನ್ನು ಕೆಲವು ಮಹಿಳೆಯರು ಎದುರಿಸುತ್ತಾರೆ.
ಕೆಲವು ಮಹಿಳೆಯರು ಸೆಕ್ಸ್ ಸಮಯದಲ್ಲಿ ನಿರಂತರ ಪೆಲ್ವಿಕ್ ನೋವನ್ನು ಹೊಂದಿರುತ್ತಾರೆ, ಇದು ಎಂಡೊಮೆಟ್ರಿಯೋಸಿಸ್, ಪೆಲ್ವಿಕ್ ಇನ್ಫ್ಲಮೇಟರಿ ಡಿಸೀಸ್ (PID), ಫೈಬ್ರಾಯ್ಡ್ಗಳು ಅಥವಾ ಅಂಡಾಶಯದ ಸಿಸ್ಟ್ಗಳಂತಹ ಸಮಸ್ಯೆಗಳ ಸಂಕೇತವಾಗಿರಬಹುದು, ಆದ್ದರಿಂದ ಸಮಯಕ್ಕೆ ಸರಿಯಾಗಿ ವೈದ್ಯರನ್ನು ಭೇಟಿ ಮಾಡಲು ಮರೆಯದಿರಿ.
ವಜೈನಲ್ ಡಿಸ್ ಚಾರ್ಜ್ (Vaginal Discharge): ವಜೈನಲ್ ಡಿಸ್ ಚಾರ್ಜ್ ನೈಸರ್ಗಿಕ ಪ್ರಕ್ರಿಯೆಯಾಗಿದೆ, ಆದರೆ ಅದರ ಬಣ್ಣ ಅಥವಾ ವಾಸನೆ ವಿಭಿನ್ನವಾಗಿದ್ದಾಗ, ಅದು ಕಾಳಜಿಯ ವಿಷಯವಾಗಿದೆ. ಈ ಬದಲಾವಣೆಗಳು ಮಹಿಳೆಯರ ಆರೋಗ್ಯಕ್ಕೆ ಒಳ್ಳೆಯದಲ್ಲದ ಅನೇಕ ಪರಿಸ್ಥಿತಿಗಳನ್ನು ಸೂಚಿಸಬಹುದು. ಯೋನಿ ವಿಸರ್ಜನೆಯಿಂದಾಗಿಯೂ ಅನೇಕ ಸೋಂಕುಗಳು ಸಂಭವಿಸಬಹುದು. ಈ ಸಮಸ್ಯೆ ಬೆಳೆಯದಂತೆ ತಡೆಯಲು ಸ್ತ್ರೀರೋಗ ತಜ್ಞರನ್ನು ಸಂಪರ್ಕಿಸುವುದು ಅವಶ್ಯಕ.
ಯುಟಿಐ ಸೋಂಕು (UTI infection): ಮೂತ್ರ ವಿಸರ್ಜಿಸುವಾಗ ನಿಮಗೆ ನೋವು ಮತ್ತು ಕಿರಿಕಿರಿ ಉಂಟಾದರೆ, ಖಂಡಿತವಾಗಿಯೂ ಸ್ತ್ರೀರೋಗ ತಜ್ಞರನ್ನು ಭೇಟಿ ಮಾಡಿ. ಇದಲ್ಲದೆ, ಮೂತ್ರದಲ್ಲಿ ರಕ್ತ ಅಥವಾ ಬಲವಾದ ವಾಸನೆ ಇದ್ದರೆ, ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ.