Chewing gum ತಿನ್ನುವಾಗ ಈ ತಪ್ಪು ಮಾಡೋದು ಡೇಂಜರ್
ಚೂಯಿಂಗ್ ಗಮ್ (chewing gum_ತಿನ್ನುವಾಗ ಮಾಡುವ ಈ ತಪ್ಪುಗಳು ಆರೋಗ್ಯಕ್ಕೆ ಸಾಕಷ್ಟು ಹಾನಿಯನ್ನು ಉಂಟುಮಾಡುತ್ತವೆ. ನಿಮ್ಮ ಜೀವನದುದ್ದಕ್ಕೂ ಚೇತರಿಸಿಕೊಳ್ಳಲು ಸಾಧ್ಯವಾಗದಷ್ಟು ದೊಡ್ಡ ಅಪಾಯವನ್ನು ಉಂಟು ಮಾಡಬಹುದು. ಹಾಗಾದರೆ ಅದರಿಂದ ಉಂಟಾಗುವ ಸಮಸ್ಯೆಗಳೇನು ತಿಳಿದುಕೊಳ್ಳೋಣ.
ಹೆಚ್ಚಿನ ಜನರು ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು, ಮುಖದ ವ್ಯಾಯಾಮ (facial exercise), ಏಕತಾನತೆಯನ್ನು ಮುರಿಯುವುದು, ಹಸಿವನ್ನು ಕಡಿಮೆ ಮಾಡುವುದು ಮುಂತಾದ ಕಾರಣಗಳಿಗಾಗಿ ಚೂಯಿಂಗ್ ಗಮ್ ಸೇವಿಸುತ್ತಾರೆ. ಚೂಯಿಂಗ್ ಗಮ್ ಅನೇಕ ಪ್ರಯೋಜನಗಳನ್ನು ಹೊಂದಿದೆ ಎಂಬುದನ್ನು ಅಧ್ಯಯನಗಳು ಸಾಬೀತುಪಡಿಸಿವೆ. ಆದರೆ ಅದು ಉಂಟು ಮಾಡುವ ದೊಡ್ಡ ಹಾನಿಯ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ.
ಚೂಯಿಂಗ್ ಗಮ್ ಅನ್ನು ತಪ್ಪಾಗಿ ತಿಂದರೆ, ಅದು ವಿವಿಧ ಹಾನಿಗಳನ್ನು ಉಂಟು ಮಾಡುತ್ತದೆ. ಜೀವನಪರ್ಯಂತ ಹಾನಿ ಉಂಟು ಮಾಡುವ ಕೆಲವು ಅನಾನುಕೂಲಗಳಿವೆ. ಅವುಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿಯೋಣ.
ಚೂಯಿಂಗ್ ಗಮ್ ಅನ್ನು ಅತಿಯಾಗಿ ಜಗಿಯುವುದರಿಂದ ಹೊಟ್ಟೆಯಲ್ಲಿ ಸಮಸ್ಯೆಗಳು (stomach problem)ಉತ್ಪತ್ತಿಯಾಗುತ್ತವೆ. ಉದಾಹರಣೆಗೆ, ಇದು ಹೊಟ್ಟೆಯ ಕಿರಿಕಿರಿ ಮತ್ತು ಅನಿಲ ಸಮಸ್ಯೆಗಳನ್ನು ಉಂಟು ಮಾಡಬಹುದು. ಇದರಿಂದ ಹೊಟ್ಟೆ ಭಾರ ಎನಿಸಬಹುದು. ಆದುದರಿಂದ ಅತಿಯಾಗಿ ಜಗಿಯುವ ಅಭ್ಯಾವ ದೂರ ಮಾಡಿ.
ಸಕ್ಕರೆಯುಕ್ತ ಚೂಯಿಂಗ್ ಗಮ್ ಅನ್ನು ದಿನಕ್ಕೆ ಹಲವಾರು ಬಾರಿ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ (blood sugar) ಹೆಚ್ಚುತ್ತದೆ. ಸಕ್ಕರೆ ರಹಿತ ಚೂಯಿಂಗ್ ಗಮ್ ನ ಹೆಚ್ಚಿನ ಬಳಕೆಯು ಹಲ್ಲುಗಳನ್ನು ಹಾನಿಗೊಳಿಸುತ್ತದೆ. ಹಲ್ಲುಗಳು ಡ್ಯಾಮೇಜ್ ಆಗೋದನ್ನು ತಪ್ಪಿಸಲು ಇದನ್ನು ತಿನ್ನದೇ ಇರೋದು ಉತ್ತಮ.
ಮಧ್ಯಾಹ್ನದ ಊಟದ ನಂತರ ಚೂಯಿಂಗ್ ಗಮ್ ತಿನ್ನುವುದು ಅನಗತ್ಯ ಹಸಿವನ್ನು ನಿಯಂತ್ರಿಸುತ್ತದೆ. ಆದರೆ ಆಗಾಗ್ಗೆ ಜಂಕ್ ಫುಡ್ ತಿನ್ನುವ ಬಯಕೆಯನ್ನು ಹೆಚ್ಚುತ್ತದೆ. ಇದರಿಂದ ನೀವು ಮತ್ತೆ ಮತ್ತೆ ಏನಾದರೂ ಅನಾರೋಗ್ಯಕರ ಆಹಾರ ಸೇವಿಸುವ ಸಾಧ್ಯತೆ ಕೂಡ ಹೆಚ್ಚಾಗಿದೆ.
ಚೂಯಿಂಗ್ ಗಮ್ ದವಡೆಯಲ್ಲಿ ಟೆಂಪೊರೊಂಡಿಬುಲಾರ್ ಎಂಬ ಅಸ್ವಸ್ಥತೆಯನ್ನು ಉಂಟು ಮಾಡುತ್ತದೆ. ಇದರಿಂದ ದವಡೆಯ ಸಮಸ್ಯೆ ಉಂಟಾಗುತ್ತದೆ. ಈ ಸಮಸ್ಯೆಯಿಂದ ದೂರ ಉಳಿಯಲು ಚೂಯಿಂಗ್ ಗಮ್ ಸೇವಿಸೋದಕ್ಕೆ ಕಡಿವಾಣ ಹಾಕಿ.
ನ್ಯೂಯಾರ್ಕ್ ನ ಸೇಂಟ್ ಲಾರೆನ್ಸ್ ವಿಶ್ವವಿದ್ಯಾಲಯದ ಮನಃಶಾಸ್ತ್ರ ವಿಭಾಗದ ಅಧ್ಯಯನದ ಪ್ರಕಾರ, ಪ್ರತಿದಿನ 15-20 ನಿಮಿಷಗಳ ಕಾಲ ಚೂಯಿಂಗ್ ಗಮ್ ಅಗಿಯುವುದು ಪ್ರಯೋಜನಕಾರಿಯಾಗಿದೆ. ಇದರಿಂದ ಜ್ಞಾಪಕ ಶಕ್ತಿ (memory power) ಹೆಚ್ಚುತ್ತದೆ ಮತ್ತು ಏಕಾಗ್ರತೆ ಹೆಚ್ಚುತ್ತದೆ. ಆದರೆ, ಇದರಿಂದ ಹಲ್ಲುಗಳು ಮತ್ತು ಹೊಟ್ಟೆಗೆ ಒಳ್ಳೆಯದಲ್ಲ.
ಕ್ಯಾರೆಟ್, ಮೂಲಂಗಿಯಂತಹ ತರಕಾರಿಗಳನ್ನು 15-20 ನಿಮಿಷಗಳ ಕಾಲ ಜಗಿದರೂ ಅವುಗಳಿಂದ ನಿಮಗೆ ಲಾಭವಾಗುತ್ತದೆ. ಚೂಯಿಂಗ್ ಗಮ್ ಅನ್ನು 15-20 ನಿಮಿಷಗಳ ಕಾಲ ಮಾತ್ರ ಅಗಿಯಬೇಕು. ಅದೇ ಚೂಯಿಂಗ್ ಗಮ್ ಅನ್ನು ಗಂಟೆಗಳ ಕಾಲ ಅಗಿಯಬೇಡಿ. ಈ ತಪ್ಪು ಮಾಡಿದ್ರೆ ಆರೋಗ್ಯ ಕೆಡುತ್ತದೆ.