ಪ್ರತಿದಿನ ಮೈದಾ ತಿನ್ನೋರು ಗಮನಿಸಿ, ಹಾಗಾದ್ರೆ ತಪ್ಪದೇ ಈ ಸುದ್ದಿ ಓದಿ
ಮೈದಾ ಹಿಟ್ಟನ್ನು ಬಳಸಿ ಅನೇಕ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಇದು ಸಂಸ್ಕರಿಸಿದ ಹಿಟ್ಟು ಎಂದು ಬಹುತೇಕರಿಗೆ ತಿಳಿದಿರಲ್ಲ. ಹಾಗಾಗಿಯೇ ಈ ಹಿಟ್ಟು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. ಪ್ರತಿದಿನ ಮೈದಾ ಹಿಟ್ಟು ತಿನ್ನುವವರಿಗೆ ಏನಾಗುತ್ತದೆ ಗೊತ್ತಾ?
ಮೈದಾ ಬಳಕೆ
ಮೈದಾ ಹಿಟ್ಟಿನಿಂದ ಮಾಡಿದ ಯಾವುದೇ ಖಾದ್ಯ ತುಂಬಾ ರುಚಿಯಾಗಿರುತ್ತದೆ. ಉದಾಹರಣೆಗೆ, ಪಿಜ್ಜಾ, ಬರ್ಗರ್, ಬ್ರೆಡ್, ಕೇಕ್, ಪಟುರೇಸ್ ಮುಂತಾದ ಅನೇಕ ಆಹಾರ ಪದಾರ್ಥಗಳನ್ನು ತಯಾರಿಸಲು ಇದನ್ನು ಬಳಸಲಾಗುತ್ತದೆ. ಇವುಗಳನ್ನು ದಿನವೂ ತಿನ್ನುವವರೇ ಹೆಚ್ಚು. ನಗರ ಪ್ರದೇಶದಲ್ಲಿ ಮೈದಾ ಬಳಕೆ ಹೆಚ್ಚು.
ಮೈದಾ ಸೇವನೆ
ಪ್ರತಿದಿನ ಮೈದಾದಿಂದ ತಯಾರಿಸಿದ ಆಹಾರ ತಿನ್ನುವುದು ಆರೋಗ್ಯಕ್ಕೆ ತುಂಬಾ ಕೆಟ್ಟದು. ಹೌದು, ಮೈದಾ ಹಿಟ್ಟು ನಿಮ್ಮನ್ನು ಹಲವಾರು ರೋಗಗಳಿಗೆ ತುತ್ತಾಗುವಂತೆ ಮಾಡುತ್ತದೆ. ಪ್ರತಿನಿತ್ಯ ಮೈದಾ ತಿಂದರೆ ಏನಾಗುತ್ತದೆ ಎಂಬುದರ ಮಾಹಿತಿ ಇಲ್ಲಿದೆ.
ಪೌಷ್ಟಿಕಾಂಶದ ಕೊರತೆ
ಮೈದಾದಲ್ಲಿ ಯಾವುದೇ ಪೋಷಕಾಂಶಗಳಿಲ್ಲ. ಪ್ರತಿದಿನ ಈ ಹಿಟ್ಟನ್ನು ತಿಂದರೆ ದೇಹ ಅಪೌಷ್ಟಿಕತೆಯ ಹೆಚ್ಚಾಗುತ್ತದೆ. ಮೈದಾ ತಯಾರಿಸುವ ವೇಳೆ ಅದರಲ್ಲಿರುವ ಎಲ್ಲಾ ಪೋಷಕಾಂಶಗಳು ಉಳಿಯಲ್ಲ. ಮೈದಾ ಹಿಟ್ಟಿನಲ್ಲಿ ನಾರಿನಂಶವೂ ಇರಲ್ಲ.
ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು
ಮೈದಾ ಹಿಟ್ಟು ನಮ್ಮನ್ನು ಅನಗತ್ಯ ಆರೋಗ್ಯ ಸಮಸ್ಯೆಗಳಿಗೆ ಒಡ್ಡುತ್ತದೆ. ಪ್ರತಿದಿನ ಈ ಹಿಟ್ಟನ್ನು ತಿಂದರೆ ಮಲಬದ್ಧತೆ, ಅಸಿಡಿಟಿ, ಅಜೀರ್ಣದಂತಹ ಜೀರ್ಣಕ್ರಿಯೆ ಸಮಸ್ಯೆಗಳು ಬರುವುದು ಖಂಡಿತ. ಏಕೆಂದರೆ ಇದರಲ್ಲಿ ಫೈಬರ್ ಇರುವುದಿಲ್ಲ. ಈ ಕಾರಣದಿಂದಾಗಿ ಈ ಹಿಟ್ಟು ಸುಲಭವಾಗಿ ಜೀರ್ಣವಾಗುವುದಿಲ್ಲ.
ರಕ್ತದಲ್ಲಿಯ ಸಕ್ಕರೆ ಪ್ರಮಾಣ ಏರಿಕೆ
ಮಧುಮೇಹಿಗಳು ಮೈದಾ ಹಿಟ್ಟನ್ನು ಅಪ್ಪಿತಪ್ಪಿಯೂ ತಿನ್ನಬಾರದು. ಏಕೆಂದರೆ ಈ ಹಿಟ್ಟು ಅತಿ ಹೆಚ್ಚು ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿದೆ. ನೀವು ಮೈದಾ ಹಿಟ್ಟಿನಿಂದ ಮಾಡಿದ ಆಹಾರವನ್ನು ಸೇವಿಸಿದರೆ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವು ತಕ್ಷಣವೇ ಹೆಚ್ಚಾಗುತ್ತದೆ.
ಮೂಳೆಗಳ ದುರ್ಬಲ
ಮೈದಾ ಹಿಟ್ಟು ನಿಮ್ಮ ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ಈ ಹಿಟ್ಟಿನಲ್ಲಿರುವ ಅಂಶಗಳು ನಮ್ಮ ದೇಹದಲ್ಲಿ ಆಮ್ಲೀಯತೆಯನ್ನು ಹೆಚ್ಚಿಸುತ್ತವೆ. ಇದು ಮೂಳೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ ಮೂಳೆಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ.
ಹೃದಯ ಕಾಯಿಲೆ, ಬೊಜ್ಜು
ಮೈದಾ ಹಿಟ್ಟು ನಮ್ಮ ಹೃದಯಕ್ಕೆ ತುಂಬಾ ಅಪಾಯಕಾರಿ. ಈ ಹಿಟ್ಟಿನಿಂದ ತಯಾರಿಸಿದ ಆಹಾರಗಳ ದೈನಂದಿನ ಸೇವನೆಯು ದೇಹದ ಕೊಬ್ಬನ್ನು ಹೆಚ್ಚಿಸಲು ಪ್ರಾರಂಭಿಸುತ್ತದೆ. ಇದು ನಿಮ್ಮ ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ನಿಮ್ಮ ದೇಹದ ತೂಕವೂ ಹೆಚ್ಚಾಗುತ್ತದೆ. ಇದರಿಂದ ನೀವು ಬಹುಬೇಗ ಬೊಜ್ಜು ಹೊಂದುತ್ತೀರಿ. ವಾಸ್ತವವಾಗಿ ಈ ಹಿಟ್ಟಿನಲ್ಲಿ ಪಿಷ್ಟ ಹೆಚ್ಚಾಗಿರುತ್ತದೆ. ಇದು ನಿಮ್ಮ ತೂಕವನ್ನು ಹೆಚ್ಚಿಸುತ್ತದೆ.
ಮೈದಾಗೆ ಇದನ್ನು ಸೇರಿಸಿ ತಿನ್ನಿ
ಮೈದಾ ಹಿಟ್ಟಿನಿಂದ ಮಾಡಿದ ಆಹಾರವನ್ನು ಸೇವಿಸಬೇಕಾದರೆ ಅದಕ್ಕೆ ನಿಂಬೆ, ಅಡಿಗೆ ಸೋಡಾ ಅಥವಾ ಯೀಸ್ಟ್ ಅನ್ನು ಸೇರಿಸಿಸಬೇಕು. ಉದಾಹರಣೆಗೆ ಮೊಸರು. ಇದು ನಿಮ್ಮ ಹೊಟ್ಟೆಗೆ ಹಿಟ್ಟು ಅಂಟಿಕೊಳ್ಳದಂತೆ ಮಾಡುತ್ತದೆ. ಮೈದಾಹಿಟ್ಟಿನ ಜೊತೆ ಮೇಲಿನ ಪದಾರ್ಥಗಳನ್ನು ಸೇರಿಸುವದರಿಂದ ಆಹಾರ ಜೀರ್ಣವಾಗುತ್ತದೆ. ನೀವು ಪ್ರತಿದಿನ ಮೈದಾ ಸೇವಿಸುತ್ತಿದ್ದರೆ ವ್ಯಾಯಾಮ ಮಾಡಬೇಕು. ಮೈದಾ ಸೇವನೆ ಬಳಿಕ ಮೊಸರು ಸೇವಿಸಿದ್ರೆ ಜೀರ್ಣವಾಗುತ್ತದೆ. ಹಾಗೆಯೇ ನೀರು ಸಹ ಹೆಚ್ಚು ಕುಡಿಯಬೇಕು.