ಗಂಡಸರು ಬ್ರಿಸ್ಕ್ ವಾಕ್ ಬದಲು ರನ್ ಮಾಡಿದರೆ ಹಾರ್ಟ್ ಅಟ್ಯಾಕ್ ಚಾನ್ಸ್ ಹೆಚ್ಚಾ?
ಈ ಒಂದು ಸೈಂಟಿಫಿಕ್ ಸ್ಟಡಿ ರಿಸಲ್ಟ್ (Scientific Study ಎಲ್ಲಾ ಅಥ್ಲೆಟ್ಸ್ ಗೆ ಶಾಕ್ ಆಗಬಹುದು! ಈ ಸ್ಟಡಿ ಪ್ರಕಾರ, ಲಾಂಗ್ ಡಿಸ್ಟೆನ್ಸ್ ರನ್ನಿಂಗ್ (long distance running) ಮಾಡೋದು ಪುರುಷರನ್ನು ಹೃದಯಾಘಾತ (Heart Attack) ಮತ್ತು ಪಾರ್ಶ್ವವಾಯುವಿಗೆ (Epilepsy) ಹೆಚ್ಚು ತುತ್ತಾಗುವಂತೆ ಮಾಡುತ್ತದಂತೆ ಎಂದು ತಿಳಿಸಿದೆ. ಇದು ಶಾಕ್ ನೀಡೋವಂತಹ ವಿಷಯವೇ ಅಲ್ವಾ?
ಸೇಂಟ್ ಬಾರ್ತಲೋಮಿಯೋ ಆಸ್ಪತ್ರೆಯ ಬಾರ್ಟ್ಸ್ ಹಾರ್ಟ್ ಸೆಂಟರ್, ಸೇಂಟ್ ಜಾರ್ಜ್ಸ್ ಹಾಸ್ಪಿಟಲ್ ಮತ್ತು ಯೂನಿವರ್ಸಿಟಿ ಕಾಲೇಜ್ ಲಂಡನ್ (ಯುಸಿಎಲ್) ನಡೆಸಿದ ಸೈಂಟಿಫಿಕ್ ಸ್ಟಡಿ, ರನ್ನಿಂಗ್ (running) ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಪ್ರಯೋಜನಕಾರಿ ಎಂದು ಹೇಳುತ್ತೆ. ಲಾಂಗ್ ಡಿಸ್ಟೆನ್ಸ್ ರನ್ನಿಂಗ್‌ನಿಂದ ಪುರುಷ ಕ್ರೀಡಾಪಟುಗಳ ಪ್ರಮುಖ ಆರ್ಟರಿಸ್ ನಿರೀಕ್ಷೆಗಿಂತ ಹೆಚ್ಚು ಗಟ್ಟಿಯಾಗಿರುವುದು ಕಂಡುಬಂದಿದೆ, ಇದು ಅವರಿಗೆ ಹೃದಯಾಘಾತ (Heart Attck) ಮತ್ತು ಪಾರ್ಶ್ವವಾಯುವಿನ ಹೆಚ್ಚಿನ ಅಪಾಯ ಉಂಟುಮಾಡುತ್ತದೆ ಎಂದು ಸ್ಟಡಿ ವರದಿ ಹೇಳಿದೆ.
ಸ್ಟಡಿ ಬೇರೆ ಏನನ್ನು ಸೂಚಿಸುತ್ತೆ ?
ಮ್ಯಾರಥಾನ್, ಐರನ್ಮ್ಯಾನ್ ಟ್ರಯಥ್ಲಾನ್ ಮತ್ತು ಸೈಕ್ಲಿಂಗ್ (Cycling) ಸ್ಪರ್ಧೆಗಳಲ್ಲಿ ನಿಯಮಿತವಾಗಿ ಭಾಗವಹಿಸುವ ಪುರುಷರು ತಮ್ಮ ವಯಸ್ಸಿಗಿಂತ 10 ವರ್ಷ ದೊಡ್ಡವರಾಗಿ ಕಾಣ್ತಾರೆ ಎಂದು ಸ್ಟಡಿ ಕಂಡುಕೊಂಡಿದೆ. ಇದರಿಂದ ಹೃದಯದ (heart problem)ಮೇಲೆ ಸ್ವಲ್ಪ ಹೆಚ್ಚಿನ ಪರಿಣಾಮ ಬೀರುತ್ತೆ.
ಮ್ಯಾರಥಾನ್ (Marathon) ಮಹಿಳೆಯರ ಆರೋಗ್ಯ ಬೂಸ್ಟ್ ಮಾಡುತ್ತೆ ಎಂದು ಅಧ್ಯಯನ ಕಂಡುಕೊಂಡಿದೆ. ಓಡುವುದು ಮಹಿಳೆಯರಲ್ಲಿ ಸರಾಸರಿ ಆರು ವರ್ಷ ವಯಸ್ಸು ಕಡಿಮೆ ಮಾಡುತ್ತೆ. ಇದು ಅವರನ್ನು ಹೆಚ್ಚು ಯಂಗ್ ಆಗಿ ಕಾಣುವಂತೆ ಮಾಡುತ್ತದೆ ಎಂದು ಅಧ್ಯಯನವು ತಿಳಿಸಿದೆ.
ಸ್ಟಡಿ 40 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಅಥ್ಲೆಟ್ಸ್ ಗಳನ್ನು ಆಧರಿಸಿದೆ. ಈ ಅಧ್ಯಯನದಲ್ಲಿ 300ಕ್ಕೂ ಹೆಚ್ಚು ಅಥ್ಲೆಟ್ಸ್ ಭಾಗವಹಿಸಿದ್ದರು. ಈ ಜನರು 10 ಕ್ಕೂ ಹೆಚ್ಚು ಸ್ಪೋರ್ಟ್ಸ್ ಇವೆಂಟ್ಸನಲ್ಲಿ ಭಾಗವಹಿಸಿದ್ದರು ಮತ್ತು ಕನಿಷ್ಠ 10 ವರ್ಷಗಳ ಕಾಲ ನಿಯಮಿತವಾಗಿ ವ್ಯಾಯಾಮ ಮಾಡಿದ್ದರು.
ರನ್ನಿಂಗ್ ಗೆ ಸಂಬಂಧಿಸಿದ ಮಿಥ್ಸ್
ಮಹಿಳೆಯರು ಓಡದಂತೆ ಆಗಾಗ್ಗೆ ಸಲಹೆ ನೀಡಲಾಗುತ್ತೆ. ಹಲವು ಕಾರಣಗಳಿಂದಾಗಿ ಮಹಿಳೆಯರು ಓಡುವುದರಿಂದ ದೂರವಿರಲು ಬಯಸ್ತಾರೆ ಮತ್ತು ಅವರಲ್ಲಿ ಅನೇಕರು ಇತರ ಆಲ್ಟರ್ನೇಟಿವ್ಸ್ ಹುಡುಕ್ತಾರೆ. ರನ್ನಿಂಗ್ ನಿಂದ ಮುಖದಲ್ಲಿ ಫ್ಯಾಟ್ (Face Fat) ಹೆಚ್ಚುತ್ತೆ ಅನ್ನೋದೆಲ್ಲಾ ಸುಳ್ಳು.
ಪರಿಣಾಮಕಾರಿಯಾಗಿ ಓಡುವುದು ಹೇಗೆ?
ನೀವು ಸರಿಯಾದ ಕ್ರಮ ಫಾಲೋ ಮಾಡಿದ್ರೆ, ಓಡುವುದು ಎಂದಿಗೂ ತಪ್ಪಾಗೋದಿಲ್ಲ ಎಂದು ತಜ್ಞರು ಹೇಳ್ತಾರೆ. ಒಬ್ಬ ಮನುಷ್ಯ ವಯಸ್ಸಾದಂತೆ, ವ್ಯಾಯಾಮ ಅವರನ್ನು ಆಕ್ಟೀವ್ ಆಗಿರಿಸುತ್ತೆ. ಅತ್ಯಂತ ಸುಲಭವಾದ, ಕಡಿಮೆ ವೆಚ್ಚದ ವ್ಯಾಯಾಮಗಳಲ್ಲಿ (Exercise) ಒಂದು ರನ್ನಿಂಗ್ .
ಪರಿಣಾಮಕಾರಿಯಾಗಿ ರನ್ನಿಂಗ್ ಮಾಡಲು, ಸರಿಯಾದ ಉಡುಪನ್ನು ಧರಿಸಿ. ಸರಿಯಾದ ರನ್ನಿಂಗ್ ಶೂಗಳು ಸಹ ಎಲ್ಲರಿಗೂ ಅತ್ಯಗತ್ಯ. ಮಹಿಳೆಯರು ಸ್ಪೋರ್ಟ್ಸ್ ಬ್ರಾ (sports bra) ಧರಿಸಬೇಕು.
ಆರಂಭದಲ್ಲೇ ವೇಗವಾಗಿ ನಡೀಬೇಡಿ. ಮೊದಲು ನಿಮ್ಮ ದೇಹವನ್ನು ಕಂಟ್ರೋಲ್ ಮಾಡಿ ಮತ್ತು ನಂತರ ರನ್ನಿಂಗ್ ಫಾಸ್ಟ್ ಮಾಡಿ .
ವೇಗವನ್ನು ಯಾವಾಗ ಜಾಸ್ತಿ ಮಾಡಬೇಕು ಮತ್ತು ಯಾವಾಗ ನಿಧಾನಗೊಳಿಸಬೇಕು ಎಂದು ತಿಳಿಯಿರಿ. ಓಡುವಾಗ ತಕ್ಷಣ ನಿಲ್ಲಿಸಬೇಡಿ, ನೀವು ನಿಲ್ಲುವವರೆಗೆ ನಿಧಾನಗೊಳಿಸುತ್ತಲೇ ಇರಿ. ಇದರಿಂದ ಹೃದಯದ ಮೇಲೆ ಹೆಚ್ಚಿನ ಪರಿಣಾಮ ಬೀರೋದಿಲ್ಲ.
ರನ್ನಿಂಗ್ ನ ಅಪಾಯ ಯಾವುವು ಮತ್ತು ನೀವು ಯಾವಾಗ ನಿಲ್ಲಿಸಬೇಕು?
ಕಾಲು ಮತ್ತು ಕೀಲು ಪ್ರದೇಶದಲ್ಲಿ ನಿರಂತರ ನೋವು ಕಾಣಿಸಿಕೊಂಡ್ರೆ, ಓಡೋದನ್ನು ನಿಲ್ಲಿಸೋದು ಉತ್ತಮ. ಅದರ ಬದಲಾಗಿ ಸೈಕ್ಲಿಂಗ್ (cycling) ಅಥವಾ ಸ್ವಿಮಿಂಗ್ ನಂತಹ ಇತರ ವ್ಯಾಯಾಮ ಟ್ರೈ ಮಾಡೋದು ಒಳ್ಳೆಯದು.
ಅತಿ ಓಡುವಿಕೆಯು ದೇಹಕ್ಕೆ ಹೆಚ್ಚಿನ ಹಾನಿಯನ್ನುಂಟು ಮಾಡುತ್ತೆ. ತಜ್ಞರ ಪ್ರಕಾರ, ಇದರಿಂದಾಗಿ ಹಿಮ್ಮಡಿಯ (Heels) ಬಳಿ ವಿಪರೀತ ನೋವು ಉಂಟಾಗುತ್ತದೆ. ಅಂತಹ ಸಂದರ್ಭದಲ್ಲಿ ಪಾದಗಳ ಸ್ನಾಯುಗಳಿಗೆ ಸರಿಯಾದ ವಿಶ್ರಾಂತಿ ನೀಡಬೇಕು.
ಅತಿಯಾದ ವ್ಯಾಯಾಮವು ಇಮ್ಯೂನ್ ಸಿಸ್ಟಮ್ (immune system) ಮೇಲೆ ಪರಿಣಾಮ ಬೀರಬಹುದು ಮತ್ತು ಒಬ್ಬ ವ್ಯಕ್ತಿಯನ್ನು ಸೋಂಕುಗಳಿಗೆ ಒಳಗಾಗುವಂತೆ ಮಾಡುತ್ತೆ . ಇದು ವ್ಯಕ್ತಿಯ ಹಸಿವಿನ ಮೇಲೂ ಪರಿಣಾಮ ಬೀರಬಹುದು.