MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • Home Remedy: ಚಿಕೂನ್ ಗುನ್ಯ, ಮಲೇರಿಯಾ , ಡೆಂಗ್ಯೂ ಜ್ವರಕ್ಕೆ ಪಾರಿಜಾತ ರಾಮಬಾಣ

Home Remedy: ಚಿಕೂನ್ ಗುನ್ಯ, ಮಲೇರಿಯಾ , ಡೆಂಗ್ಯೂ ಜ್ವರಕ್ಕೆ ಪಾರಿಜಾತ ರಾಮಬಾಣ

ವಿಶೇಷವಾಗಿ ಆರೋಗ್ಯ ಲಾಭಗಳಿಗೆ ಹೆಸರುವಾಸಿಯಾಗಿರುವ ಆಯುರ್ವೇದದಲ್ಲಿ ಪಾರಿಜಾತ ಒಂದು ಅದ್ಭುತ ಔಷಧಿ (medicine). ಇದರ ವ್ಯಾಪಕ ಔಷಧೀಯ ಗುಣಗಳಿಂದಾಗಿ, ಇದು ಸಂಶೋಧನೆಗೆ ಆಸಕ್ತಿಯ ವಿಷಯ. ಈ ಆಂಟಿ ಆಕ್ಸಿಡೆಂಟ್, ಔಷಧೀಯ ಸಸ್ಯ ನೋವನ್ನು ಕಡಿಮೆ ಮಾಡುವುದರಿಂದ ಹಿಡಿದು ಜ್ವರವನ್ನು ಕಡಿಮೆ ಮಾಡುವವರೆಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. 

3 Min read
Suvarna News | Asianet News
Published : Nov 10 2021, 05:32 PM IST
Share this Photo Gallery
  • FB
  • TW
  • Linkdin
  • Whatsapp
112

ಪಾರಿಜಾತವನ್ನು (parijata) ದೇಶದಲ್ಲಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಕೆಲವೆಡೆ ಇದನ್ನು ಪಾರಿಜತ್ ಮತ್ತು ರಾತ್ರಿ ಮಲ್ಲಿಗೆ ಎಂದೂ ಕರೆಯಲಾಗುತ್ತದೆ. ಕೆಲವರು ಇದನ್ನು ರಾಟ್ರೀ ರಾಣಿ ಹೂವು ಎಂದೂ ಕರೆಯುತ್ತಾರೆ. ಆದರೆ ಪಾರಿಜಾತ ಹೂವು, ಎಲೆಗಳು, ರೆಂಬೆಗಳು ಮತ್ತು ಅದರ ತೊಗಟೆ ಸಹ ತುಂಬಾ ಪ್ರಯೋಜನಕಾರಿ. ಆಯುರ್ವೇದದಲ್ಲಿ ಇದನ್ನು ಔಷಧಿಗಳನ್ನು ತಯಾರಿಸಲು ಬಳಸಲಾಗುತ್ತದೆ, ವಿಶೇಷವಾಗಿ ಇದರ ಎಲೆಗಳು ಕೀಲು ನೋವು ನಿವಾರಿಸಲು ತುಂಬಾ ಪರಿಣಾಮಕಾರಿ ಎಂದು ಸಾಬೀತಾಗಿದೆ.

212

ಪಾರಿಜಾತ ಕೆಲಸ ಹೇಗೆ ಮಾಡುತ್ತದೆ ಎಂದು ತಿಳಿಯಿರಿ?
ಪಾರಿಜಾತ ಎಲೆಗಳು : ಆಯುರ್ವೇದದಲ್ಲಿ, ವಿವಿಧ ರೀತಿಯ ಜ್ವರ, ಕೆಮ್ಮು (fever and cough), ಸಂಧಿವಾತ, ಹುಳು ಸೋಂಕು ಇತ್ಯಾದಿಗಳಿಗೆ ಚಿಕಿತ್ಸೆ ನೀಡಲು ಪಾರಿಜಾತ ಎಲೆಗಳನ್ನು ಬಳಸಲಾಗುತ್ತದೆ. ಎಲೆಯ ರಸ ಕಹಿಯಾಗಿದ್ದು ಟಾನಿಕ್ ನಂತೆ ಕಾರ್ಯನಿರ್ವಹಿಸುತ್ತದೆ. ಸಂಧಿವಾತ, ಮಲಬದ್ಧತೆ, ಹುಳು ಸೋಂಕಿಗೆ ಇದು ಉತ್ತಮ ಪರಿಹಾರ.

312

ಈ ಸಣ್ಣ, ಪರಿಮಳಯುಕ್ತ, ಬಿಳಿ ಹೂವು ಗ್ಯಾಸ್ಟ್ರಿಕ್ ( gastric)ಮತ್ತು ಉಸಿರಾಟದ ಸಮಸ್ಯೆ ವಿರುದ್ಧ ಅದ್ಭುತವಾಗಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಕೀಲು ನೋವು ಮತ್ತು ಮಲೇರಿಯಾ ಚಿಕಿತ್ಸೆಗೆ ಪಾರಿಜಾತ ಕಾಂಡದ ಪುಡಿ ತುಂಬಾ ಒಳ್ಳೆಯದು. ಚಿಕನ್ ಗುನ್ಯಾ, ಮಲೇರಿಯಾ ರೋಗಗಳಿಗೂ ಇದು ಉತ್ತಮ ಪರಿಹಾರ. ಕೀಲು ನೋವಿಗೆ ಅತ್ಯುತ್ತಮ. 

412

 ಆಯುರ್ವೇದ ವೈದ್ಯರು ಹೇಳುವಂತೆ, ಪಾರಿಜಾತ ಎಲೆಗಳು ಅನೇಕ ಔಷಧೀಯ ಗುಣಗಳನ್ನು ಹೊಂದಿವೆ ಆದ್ದರಿಂದ ಇದನ್ನು ಕಷಾಯವಾಗಿ ಬಳಸಿದರೆ, 20 ರಿಂದ 30 ವರ್ಷಗಳಷ್ಟು ಹಳೆಯದಾದ ಕೀಲುಗಳಲ್ಲಿ ಸಂಧಿವಾತ (Arthritis ) ಮತ್ತು ಊತದ ಸಮಸ್ಯೆಯನ್ನು ಬೇರಿನಿಂದ ನಿವಾರಿಸಬಹುದು. ಅಷ್ಟೇ ಅಲ್ಲ, ಮುಚ್ಚಿದ ರಕ್ತನಾಳಗಳನ್ನು ತೆರೆದು  ನೋವನ್ನು ನಿವಾರಿಸುತ್ತದೆ.

512

 ಪಾರಿಜಾತ ಮಲೇರಿಯಾ, ಡೆಂಗ್ಯೂ ಮತ್ತು ಚಿಕೂನ್ ಗುನ್ಯ (chicken gunya) ಜ್ವರ ಸೇರಿದಂತೆ ವಿವಿಧ ರೀತಿಯ ವಾಕರಿಕೆ ಜ್ವರವನ್ನು ಗುಣಪಡಿಸುತ್ತದೆ. ಇತ್ತೀಚಿನ ಅಧ್ಯಯನಗಳು ಪಾರಿಜಾತ ಎಲೆ ಮತ್ತು ತೊಗಟೆಯ ಸಾರಗಳು ಜ್ವರವನ್ನು ತಕ್ಷಣವೇ ಕಡಿಮೆ ಮಾಡಲು ಬಹಳ ಉಪಯುಕ್ತ ಎಂದು ತೋರಿಸುತ್ತವೆ. ಇದು ಡೆಂಗ್ಯೂ ಮತ್ತು ಚಿಕೂನ್ ಗುನ್ಯ ಜ್ವರದಲ್ಲಿ ಪ್ಲೇಟ್ಲೆಟ್ ಎಣಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಬ್ಯಾಕ್ಟೀರಿಯಾ, ಪರಾವಲಂಬಿಗಳು ಜ್ವರಕ್ಕೆ ಕಾರಣವಾಗಬಹುದಾದ ಬೆಳವಣಿಗೆಯನ್ನು ತಡೆಯುತ್ತವೆ. 

612

ಬಳಸುವುದು ಹೇಗೆ ? ಒಂದು ಟೀ ಚಮಚ ಎಲೆಯ ಸಾರವನ್ನು ತೆಗೆದುಕೊಂಡು ಅದನ್ನು 2 ಕಪ್ ನೀರಿನಿಂದ ಒಂದು ಕಪ್ ಉಳಿಯುವವರೆಗೆ ಕುದಿಸಿ. ಇದರ ಜೊತೆಗೆ  ಆಲಿವ್ ಎಣ್ಣೆಯನ್ನು (olive oil) 2 ಹನಿ ಪರಿಜಾತದೊಂದಿಗೆ ಬೆರೆಸಿ ಅಂಗಾಲುಗಳಿಗೆ ಉಜ್ಜಬಹುದು. ಇದು ನಿಮ್ಮ ದೇಹದ ತಾಪಮಾನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

712

ಒಣ ಕೆಮ್ಮು ಗುಣಪಡಿಸುತ್ತದೆ ನಿರಂತರ ಕೆಮ್ಮು ಮತ್ತು ಗಂಟಲಿನ ಕಿರಿಕಿರಿಯಿಂದ ಬಳಲುತ್ತಿದ್ದೀರೇ? ಕೆಮ್ಮು, ಶೀತ ಮತ್ತು ಬ್ರಾಂಕೈಟಿಸ್ (bronchitis) ಕಡಿಮೆ ಮಾಡಲು ಪಾರಿಜಾತ ಎಲೆಗಳು ಮತ್ತು ಹೂವುಗಳಿಂದ ತಯಾರಿಸಿದ ಚಹಾ ಬಳಸಲಾಗುತ್ತದೆ. ಪಾರಿಜಾತ ಸಸ್ಯದ ಎಥೆನಾಲ್ ಸಾರವು ಅತ್ಯುತ್ತಮ ಬ್ರಾಂಕೋಡೈಟರ್ ಎಂದು ಅಧ್ಯಯನಗಳು ತೋರಿಸುತ್ತವೆ. ಇದು ಅಸ್ತಮಾದಲ್ಲಿಯೂ ಉತ್ತಮ ಕೆಲಸ ಮಾಡುತ್ತದೆ. 

812

ಬಳಸುವುದು ಹೇಗೆ - ಶುಂಠಿಯೊಂದಿಗೆ (ginger) ಸ್ವಲ್ಪ ಪಾರಿಜಾತ ಹೂವು ಮತ್ತು ಎಲೆಗಳನ್ನು ತೆಗೆದುಕೊಂಡು, ಅದನ್ನು 2 ಕಪ್ ನೀರಿನಲ್ಲಿ 5-7 ನಿಮಿಷಗಳ ಕಾಲ ಕುದಿಸಿ. ಅದನ್ನು ಚೆನ್ನಾಗಿ ಸೋಸಿ ಅದಕ್ಕೆ ಜೇನುತುಪ್ಪ (honey) ಸೇರಿಸಿ ಕುಡಿಯಿರಿ.

912

ಕೂದಲಿಗೆ ಪೋಷಣೆ ಒದಗಿಸುತ್ತದೆ 
ಪಾರಿಜಾತ ಬೀಜಗಳ ಕಷಾಯವು ತಲೆಹೊಟ್ಟು (dandruf) ಮತ್ತು ಕೂದಲಿನ ಹೇನುಗಳನ್ನು ಸ್ವಚ್ಛಗೊಳಿಸುತ್ತದೆ ಮತ್ತು ನಿಯಂತ್ರಿಸುತ್ತದೆ. ಪಾರಿಜಾತ ಹೂವುಗಳು ಕೂದಲಿಗೆ ಟಾನಿಕ್ ಗಳಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಕೂದಲನ್ನು ಬಲಪಡಿಸಲು ಮತ್ತು ಕೂದಲು ಉದುರುವಿಕೆಯನ್ನು ತಡೆಯಲು ಬಳಸಲಾಗುತ್ತದೆ. ಇವು ಕೂದಲು ಬೂದು ಬಣ್ಣಕ್ಕೆ ಬರದಂತೆ ಮತ್ತು ನೆತ್ತಿಗೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ತಡೆಗಟ್ಟಲು ಸಹ ಸಹಾಯ ಮಾಡುತ್ತದೆ.

1012

 ಪಾರಿಜಾತ ಎಲೆಗಳು ಮತ್ತು ಹೂವುಗಳನ್ನು ಹೇಗೆ ಬಳಸುವುದು : ಪಾರಿಜಾತ ಬಳಸಲು ಸುಲಭವಾದ ಮಾರ್ಗವೆಂದರೆ ಎಲೆಗಳು ಮತ್ತು ಹೂವುಗಳನ್ನು ಬಳಸಿಕೊಂಡು ಚಹಾ ಅಥವಾ ಕಷಾಯ ಮಾಡುವುದು. ಸಸ್ಯದಿಂದ ಹೊರ ತೆಗೆದ ಎಣ್ಣೆಯನ್ನು ಅದರ ಗುಣಪಡಿಸುವ ಗುಣಗಳಿಗಾಗಿಯೂ ಬಳಸಲಾಗುತ್ತದೆ. ಪಾರಿಜಾತ ಸಸ್ಯದ ಕ್ಯಾಪ್ಸೂಲ್ ಗಳು, ಪುಡಿಗಳು ಮತ್ತು ಮಾತ್ರೆಗಳು ಸಹ ಮಾರುಕಟ್ಟೆಯಲ್ಲಿ ಲಭ್ಯವಿದೆ.

1112

ಪಾರಿಜಾತ  ಎಲೆಗಳು ಕಹಿ ಮತ್ತು ತೀಕ್ಷ್ಣವಾದ ರುಚಿಯನ್ನು ಹೊಂದಿರುತ್ತವೆ, ಇದು ಮೊದಲ ಬಾರಿಗೆ ವಾಂತಿಗೆ (vomiting) ಕಾರಣವಾಗಬಹುದು. ಪಾರಿಜಾತ ಎಲೆಗಳ ನಿರಂತರ ಬಳಕೆ ಮೀಥೈಲ್ ಸ್ಯಾಲಿಸೈಲೇಟ್ ಅನ್ನು ಹೊಂದಿರುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗಬಹುದು. ಎಲೆಗಳಲ್ಲಿ ಟಾನಿಕ್ ಆಮ್ಲವೂ ಇದೆ, ಇದು ಕೆಲವರಿಗೆ ಹೊಟ್ಟೆ ಕಿರಿಕಿರಿ, ವಾಕರಿಕೆ ಮತ್ತು ವಾಂತಿಗೆ ಕಾರಣವಾಗಬಹುದು. ಒಂದು ಸಮಯದಲ್ಲಿ ಹೆಚ್ಚಿನ ಪ್ರಮಾಣದ ಪಾರಿಜಾತ ಎಲೆಗಳನ್ನು ತಿನ್ನುವುದರಿಂದ ಎಲೆಗಳಲ್ಲಿ ಗ್ಲೈಕೋಸೈಡ್ ಇರುವ ಕಾರಣ ವಾಕರಿಕೆ, ಹೊಟ್ಟೆಯ ಕಿರಿಕಿರಿ ಮತ್ತು ಅತಿಸಾರಕ್ಕೆ ಕಾರಣವಾಗಬಹುದು.

1212

ಪಾರಿಜಾತ  ಎಲೆಗಳು ಮತ್ತು ಹೂವುಗಳನ್ನು ಬಳಸಿಕೊಂಡು ಚಹಾ ಅಥವಾ ಕಷಾಯ ಮಾಡುವುದು. ಸಸ್ಯದಿಂದ ಹೊರತೆಗೆದ ಎಣ್ಣೆಯನ್ನು ಅದರ ಗುಣಪಡಿಸುವ ಗುಣಗಳಿಂದಾಗಿ ವಿವಿಧ ರೋಗ ನಿವಾರಿಸಲು ಬಳಸಲಾಗುತ್ತದೆ. ಪಾರಿಜಾತ ಸಸ್ಯದ ಕ್ಯಾಪ್ಸೂಲ್ ಗಳು (capsule), ಪುಡಿಗಳು ಮತ್ತು ಮಾತ್ರೆಗಳು ಸಹ ಮಾರುಕಟ್ಟೆಯಲ್ಲಿ ಲಭ್ಯವಿದೆ.

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved