ಡಿಯರ್ ಲೇಡೀಸ್… ಡೆಲಿವರಿ ಬಳಿಕ 40 ದಿನಗಳವರೆಗೆ ಈ ಕೆಲಸಗಳನ್ನು ತಪ್ಪಿಯೂ ಮಾಡಬೇಡಿ
ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಡೆಲಿವರಿ ನಂತರವೂ ಮಹಿಳೆಯರು ತಮ್ಮನ್ನು ತಾವೇ ನೋಡಿಕೊಳ್ಳುವ ಕಡೆಗೆ ಹೆಚ್ಚು ಒಲವು ತೋರಿಸುತ್ತಾರೆ. ಆ ಸಂದರ್ಭದಲ್ಲಿ ಎಲ್ಲಾ ಕೆಲಸಗಳನ್ನು ಕೂಡ ತಾವೇ ಮಾಡುತ್ತಾರೆ. ಆದರೆ ಈ ಹೊಸ ತಾಯಂದಿರು ಕೆಲವು ಕೆಲಸಗಳನ್ನು 40 ದಿನಗಳವರೆಗೆ ಮಾಡಲೇಬಾರದು.

ಅನೇಕ ಮಹಿಳೆಯರು ಗರ್ಭಾವಸ್ಥೆಯಲ್ಲಿ (pregnancy) ತಮ್ಮನ್ನು ತಾವು ಚೆನ್ನಾಗಿ ನೋಡಿಕೊಳ್ಳುತ್ತಾರೆ, ಆದರೆ ಮಗು ಜನಿಸಿದ ನಂತರ, ಅವರು ಮನೆಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಆದರೆ ಡೆಲಿವರಿ ಬಳಿಕ, ಅದು ನಾರ್ಮಲ್ ಡೆಲಿವರಿ ಆಗಿರಲಿ ಅಥವಾ ಸಿಸೇರಿಯನ್ ಆಗಿರಲಿ, ಇದಾದ ಬಳಿಕ ಕನಿಷ್ಠ 40 ದಿನಗಳವರೆಗೆ ಕೆಲವು ಕೆಲಸಗಳನ್ನು ಮಾಡದಂತೆ ವೈದ್ಯರು ಸಲಹೆ ನೀಡುತ್ತಾರೆ. ಹೆರಿಗೆಯ ನಂತರ 40 ದಿನಗಳವರೆಗೆ ಯಾವ ಕಾರ್ಯಗಳನ್ನು ತಪ್ಪಿಸಬೇಕು ಎಂಬುದನ್ನು ನೋಡೋಣ..
ಪ್ರತಿಯೊಬ್ಬ ಮಹಿಳೆಗೆ, ತಾಯಿಯಾಗುವುದು ಅತ್ಯಂತ ಸುಂದರವಾದ ಭಾವನೆಯಾಗಿದೆ. ಈ ಸಮಯವು ಭಯ ಹುಟ್ಟಿಸೋದು ಮಾತ್ರವಲ್ಲ, ಸಂತಸವನ್ನು ಸಹ ನೀಡುತ್ತೆ. ಏಕೆಂದರೆ, ತಾಯಿಯಾದ ನಂತರ, ಯಾವುದೇ ಮಹಿಳೆ ವಿವಿಧ ದೈಹಿಕ ಮತ್ತು ಭಾವನಾತ್ಮಕ ಬದಲಾವಣೆಗಳಿಗೆ (physical and mental changes) ಒಳಗಾಗಬೇಕಾಗುತ್ತದೆ. ಅನೇಕ ಮಹಿಳೆಯರು ಗರ್ಭಾವಸ್ಥೆಯಲ್ಲಿ ತಮ್ಮನ್ನು ತಾವು ಚೆನ್ನಾಗಿ ನೋಡಿಕೊಳ್ಳುತ್ತಾರೆ, ಆದರೆ ಮಗು ಬಂದ ನಂತರ, ಅವರು ಮನೆಕೆಲಸಗಳಲ್ಲಿ ಸಿಲುಕಿಕೊಳ್ಳುತ್ತಾರೆ. ಆದರೆ, ವೈದ್ಯರು ಕನಿಷ್ಠ 40 ದಿನಗಳವರೆಗೆ ಕೆಲವು ಕೆಲಸ ಮಾಡದಂತೆ ಸಲಹೆ ನೀಡುತ್ತಾರೆ.
ಹೆರಿಗೆಯ ನಂತರದ ಮೊದಲ 40 ದಿನಗಳನ್ನು ಚೇತರಿಕೆಯ ಸಮಯವೆಂದು ಪರಿಗಣಿಸಲಾಗುತ್ತದೆ. ಹೆರಿಗೆಯು ಸಿಸೇರಿಯನ್ ಮೂಲಕ ಆಗಿರಲಿ ಅಥವಾ ನಾರ್ಮಲ್ ಡೆಲಿವರಿ ಆಗಿರಲಿ, ಕನಿಷ್ಠ 40 ದಿನಗಳವರೆಗೆ ಯಾವುದೇ ಕೆಲಸವನ್ನು ಮಾಡುವುದನ್ನು ತಪ್ಪಿಸಬೇಕು. ಈಗ ಪ್ರಶ್ನೆಯೆಂದರೆ, ಹೆರಿಗೆಯ ನಂತರ 40 ದಿನಗಳವರೆಗೆ ಯಾವ ಕಾರ್ಯಗಳನ್ನು ತಪ್ಪಿಸಬೇಕು? ಹೆರಿಗೆಯ ನಂತರದ 40 ದಿನಗಳವರೆಗೆ ಕೈಗೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕೆಗಳು ಯಾವುವು?
ಟ್ಯಾಂಪೂನ್ ಮತ್ತು ಮೆನ್’ಸ್ಟ್ರುವಲ್ ಕಪ್ ಬಳಕೆ ತಪ್ಪಿಸಿ:
ತಜ್ಞರ ಪ್ರಕಾರ ಹೆರಿಗೆಯ ನಂತರ, ನೀವು ಯೋನಿ ರಕ್ತಸ್ರಾವವನ್ನು ಅನುಭವಿಸುತ್ತೀರಿ, ಇದು 2 ರಿಂದ 6 ವಾರಗಳವರೆಗೆ ಇರುತ್ತದೆ. ಈ ಸಮಯದಲ್ಲಿ, ಮೆಟರ್ನಿಟಿ ಪ್ಯಾಡ್ಗಳು ಅಥವಾ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು (sanitary pads) ಬಳಸುವುದು ಉತ್ತಮ. ಆದರೆ ಈ ಸಮಯದಲ್ಲಿ ಟ್ಯಾಂಪೂನ್ ಮತ್ತು ಮೆನ್’ಸ್ಟ್ರುವಲ್ ಕಪ್ ಬಳಸುವುದನ್ನು ತಪ್ಪಿಸಿ. ವಜೈನಾದ ಗಾಯ ಗುಣವಾಗಿರೋದಿಲ್ಲ. ಈ ಉತ್ಪನ್ನಗಳನ್ನು ಬಳಸುವುದರಿಂದ ಸೋಂಕಿಗೆ ಕಾರಣವಾಗಬಹುದು.
ಅನಾರೋಗ್ಯಕರ ಆಹಾರವನ್ನು ತಪ್ಪಿಸಿ:
ಹೆರಿಗೆಯ ನಂತರ ಕನಿಷ್ಠ 40 ದಿನಗಳವರೆಗೆ ನಿಮ್ಮ ಆಹಾರದ ಬಗ್ಗೆ ವಿಶೇಷ ಗಮನ ಹರಿಸಿ. ಮಸಾಲೆಯುಕ್ತ ಆಹಾರ, ಎಣ್ಣೆಯುಕ್ತ ಆಹಾರ, ಅಲರ್ಜಿಕಾರಕ ಆಹಾರಗಳು ಮತ್ತು ಅನಿಲ ಉತ್ಪಾದಿಸುವ ಆಹಾರಗಳನ್ನು ನೀವು ತಪ್ಪಿಸಿ. ಮಸಾಲೆಯುಕ್ತ ಮತ್ತು ಬಿಸಿ ಆಹಾರಗಳು ಸ್ತನ್ಯಪಾನದ (breast feeding) ಮೂಲಕ ನಿಮ್ಮ ನವಜಾತ ಶಿಶುವಿಗೆ ಹಾನಿ ಉಂಟುಮಾಡಬಹುದು, ಇದು ಮಗು ಮತ್ತು ತಾಯಿ ಇಬ್ಬರಿಗೂ ಹೊಟ್ಟೆ ಮತ್ತು ಚರ್ಮದ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ತಡ ರಾತ್ರಿಯವರೆಗೆ ಎಚ್ಚರವಾಗಿರೋದು
ಸಾಮಾನ್ಯವಾಗಿ ಮಕ್ಕಳು ರಾತ್ರಿಯಿಡೀ ಎಚ್ಚರವಾಗಿರುತ್ತಾರೆ. ಅಂತಹ ಸಂದರ್ಭಗಳಲ್ಲಿ, ತಾಯಂದಿರು ಸಹ ಎಚ್ಚರವಾಗಿರಬೇಕು. ಹೆರಿಗೆಯ ನಂತರ ನೀವು ತಕ್ಷಣ ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳದಿದ್ದರೆ, ಅದು ನಿಮ್ಮ ಚೇತರಿಕೆಯನ್ನು ನಿಧಾನಗೊಳಿಸುತ್ತದೆ. ಅಂತಹ ಸಂದರ್ಭಗಳಲ್ಲಿ, ನೀವು ಕಿರಿಕಿರಿಗೊಳ್ಳಬಹುದು. ತಜ್ಞರ ಪ್ರಕಾರ, ತ್ವರಿತ ಚೇತರಿಕೆಗೆ ಚೆನ್ನಾಗಿ ವಿಶ್ರಾಂತಿ ಪಡೆಯುವುದು ಅತ್ಯಗತ್ಯ. ಮಗುವಿನ ಹೊಟ್ಟೆ ತುಂಬಿದ್ದು, ಮಗು ಇನ್ನೂ ರಾತ್ರಿ ಮಲಗದಿದ್ದರೆ, ನೀವು ಕುಟುಂಬದ ಇನ್ನೊಬ್ಬ ಸದಸ್ಯರ ಸಹಾಯ ಪಡೆಯಬಹುದು.
ಶಾರೀರಿಕ ಸಂಬಂಧ ತಪ್ಪಿಸಿ :
ತಜ್ಞರ ಪ್ರಕಾರ, ಹೆರಿಗೆಯ ನಂತರ ಯೋನಿ ಅಂಗಾಂಶಗಳು ತೆಳ್ಳಗಾಗುತ್ತವೆ ಮತ್ತು ಹೆಚ್ಚು ಸೂಕ್ಷ್ಮವಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, 40 ದಿನಗಳವರೆಗೆ ಲೈಂಗಿಕತೆಯನ್ನು (avoid sex) ತಪ್ಪಿಸಿ. ಇದಕ್ಕಾಗಿಯೇ ಹೆರಿಗೆಯ ನಂತರ 4 ರಿಂದ 6 ವಾರಗಳವರೆಗೆ ಕಾಯಲು ವೈದ್ಯರು ಸಲಹೆ ನೀಡುತ್ತಾರೆ.
ಅತಿಯಾದ ವ್ಯಾಯಾಮವನ್ನು ತಪ್ಪಿಸಿ:
ಹೆರಿಗೆಯ ನಂತರ 6 ವಾರಗಳವರೆಗೆ ಭಾರವಾದ ವ್ಯಾಯಾಮದಿಂದ ದೂರವಿರಿ. ವೈದ್ಯರ ಸಲಹೆಯ ಮೇರೆಗೆ ಕಡಿಮೆ ತೀವ್ರತೆಯ ವ್ಯಾಯಾಮಗಳೊಂದಿಗೆ ಪ್ರಾರಂಭಿಸಿ. ಹೆರಿಗೆಯ ನಂತರ ತಕ್ಷಣ ವ್ಯಾಯಾಮ ಮಾಡುವುದರಿಂದ ನಿಮ್ಮ ಸ್ನಾಯುಗಳ ಮೇಲೆ ಒತ್ತಡ ಬೀಳುತ್ತೆ, ಇದು ಸ್ನಾಯು ನೋವು, ಬೆನ್ನು ನೋವು, ರಕ್ತಸ್ರಾವ ಮತ್ತು ಹೊಲಿಗೆಗಳ ಮೇಲೆ ಒತ್ತಡಕ್ಕೆ ಕಾರಣವಾಗಬಹುದು.
ಭಾರವಾದ ವಸ್ತುಗಳನ್ನು ಎತ್ತಬೇಡಿ:
ಇತ್ತೀಚಿನ ದಿನಗಳಲ್ಲಿ, ಹೆಚ್ಚಿನ ಮಹಿಳೆಯರು ಹೆರಿಗೆಯ ನಂತರ ಸ್ವತಃ ತಾವೇ ತಮ್ಮನ್ನು ಮತ್ತು ತಮ್ಮ ನವಜಾತ ಶಿಶುಗಳನ್ನು ನೋಡಿಕೊಳ್ಳುತ್ತಾರೆ. ಅಂತಹ ಸಂದರ್ಭಗಳಲ್ಲಿ, ಅವರು ಕೆಲವೊಮ್ಮೆ ಪೂರ್ಣ ಬಕೆಟ್ ನೀರು, ಒಗೆದ ಬಟ್ಟೆಗಳು ಮುಂತಾದ ಭಾರವಾದ ವಸ್ತುಗಳನ್ನು ಎತ್ತುತ್ತಾರೆ. ಕನಿಷ್ಠ 40 ದಿನಗಳವರೆಗೆ ಇದನ್ನು ಮಾಡದಂತೆ ವೈದ್ಯರು ಸಲಹೆ ನೀಡುತ್ತಾರೆ. ಹಾಗೆ ಮಾಡೋದ್ರಿಂದ ಹೊಟ್ಟೆಯ ಮೇಲೆ ಸಾಕಷ್ಟು ಒತ್ತಡ ಬಿದ್ದು, ಇದು ಹೊಟ್ಟೆ ನೋವು ಅಥವಾ ಚಲಿಸಲು ಕಷ್ಟವಾಗಬಹುದು.