ಮನೆಯಲ್ಲಿ ತಯಾರಿಸಿದ ಮೌತ್ ವಾಶ್ ಬಳಸಿ ಕೀಟಾಣು ದೂರ ಮಾಡಿ...
First Published Jan 5, 2021, 4:29 PM IST
ಬಾಯಿಯ ನೈರ್ಮಲ್ಯ ಬಹಳ ಮುಖ್ಯ ಏಕೆಂದರೆ ಬಾಯಿ ಅನೇಕ ಹಾನಿಕಾರಕ ಬ್ಯಾಕ್ಟೀರಿಯಾಗಳಿಗೆ ಸಂತಾನೋತ್ಪತ್ತಿಯಾಗಬಹುದು. ಅದು ಒಟ್ಟಾರೆ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಆದ್ದರಿಂದ, ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು ಮುಖ್ಯ. ಪ್ರತಿ ಊಟದ ನಂತರವೂ ಅನೇಕ ಜನರು ಬ್ರಷ್ ಮಾಡುತ್ತಾರೆ. ಆದರೆ ಅನೇಕ ದಂತವೈದ್ಯರ ಪ್ರಕಾರ, ಬಾಯಿ ಸ್ವಚ್ಛವಾಗಿ ಮತ್ತು ತಾಜಾವಾಗಿರಲು ಇದು ಸಾಕಾಗುವುದಿಲ್ಲ. ಇಂದು, ಅನೇಕ ಜನರು ತಮ್ಮ ಬಾಯಿಯನ್ನು ತಾಜಾಗೊಳಿಸಲು ಔಷಧೀಯ ಮೌತ್ ವಾಶ್ ಗಳನ್ನು ಸಹ ಬಳಸುತ್ತಾರೆ. ಇವುಗಳನ್ನು ಬಳಸಲು ಸುಲಭ ಮತ್ತು ಸಾಮಾನ್ಯವಾಗಿ ವೈದ್ಯರು ಶಿಫಾರಸು ಮಾಡುತ್ತಾರೆ.

ಈ ಮೌತ್ ವಾಶ್ಗಳು ನೈಸರ್ಗಿಕವಲ್ಲ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ನ್ಯಾಚುರಲ್ ವಸ್ತುಗಳಿಂದ ಮೌತ್ ವಾಶ್ ಮಾಡಲು ಬಯಸಿದರೆ ಅದಕ್ಕಾಗಿ ಹಲವು ಆಯ್ಕೆಗಳಿವೆ ಎಂದು ತಿಳಿದುಕೊಳ್ಳಬೇಕು. ಮನೆಯಲ್ಲಿಯೇ ಸಿಗುವ ವಸ್ತುಗಳನ್ನು ಬಳಸಿ ಮಾರುಕಟ್ಟೆಯ ಬದಲು ಮನೆಯಲ್ಲಿಯೇ ಮೌತ್ ವಾಶ್ ತಯಾರಿಸಬಹುದು. ಇವು ನೈಸರ್ಗಿಕ ಮತ್ತು ಬಾಯಿಯನ್ನು ತಾಜಾ ಮತ್ತು ಸ್ವಚ್ಛವಾಗಿಡಲು ಚೆನ್ನಾಗಿ ಕೆಲಸ ಮಾಡುತ್ತದೆ.

ಬಾಯಿಯನ್ನು ಉಪ್ಪು ಮತ್ತು ನೀರಿನಿಂದ ತೊಳೆಯಿರಿ
ಊಟದ ನಂತರ, ಅರ್ಧ ಗ್ಲಾಸ್ ಬೆಚ್ಚಗಿನ ನೀರಿಗೆ ಅರ್ಧ ಟೀ ಚಮಚ ಉಪ್ಪು ಸೇರಿಸಿ. ಬಾಯಿಯನ್ನು ತೊಳೆಯಲು ಈ ದ್ರಾವಣವನ್ನು ಬಳಸಿ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?