ರನ್ನಿಂಗ್ ಮಾಡೋರಾ..? ಈ ತಪ್ಪುಗಳನ್ನು ಮಾಡದಿರಿ
First Published Dec 11, 2020, 3:35 PM IST
ನೀವು ಈಗಷ್ಟೇ ರನ್ನಿಂಗ್ ಆರಂಭಿಸಿದ್ದೀರಾ? ನೀವು ಮ್ಯಾರಥಾನ್ ಓಡಲು ಬಯಸುತ್ತಿರಲಿ ಅಥವಾ ತೂಕ ಇಳಿಸಿಕೊಳ್ಳಲು ಅಥವಾ ಸದೃಢರಾಗಲು ದಾರಿಗಳನ್ನು ಹುಡುಕುತ್ತಿರಲಿ, ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ಆರೋಗ್ಯಕರ ಅಭ್ಯಾಸವನ್ನು ಯಾವಾಗ ಬೇಕಾದರೂ ಸೇರಿಸಬಹುದು. ತೂಕ ಇಳಿಸಿಕೊಳ್ಳಲು ನೀವು ಬಯಸಿದ್ದು, ಅದಕ್ಕಾಗಿ ನೀವು ಓಡುತ್ತಿದ್ದರೆ, ಹಾಗೆ ಮಾಡಿಯೂ ನಿಮ್ಮ ದೇಹದಲ್ಲಿ ಯಾವುದೇ ಬದಲಾವಣೆಗಳನ್ನು ನೀವು ಕಾಣದಿದ್ದರೆ, ನಿಮ್ಮ ರನ್ನಿಂಗ್ ಅಭ್ಯಾಸದಲ್ಲಿ ಕೆಲವು ತಪ್ಪುಗಳನ್ನು ಮಾಡುತ್ತಿದ್ದೀರಿ ಎಂದು ಅರ್ಥ.

ಹೌದು, ಪ್ರತಿಯೊಬ್ಬ ಓಟಗಾರನು ಮಾಡುವ ಸಾಮಾನ್ಯ ತಪ್ಪು ಯಾವುವು? ಅವುಗಳನ್ನು ಮಾಡದೆ ಸರಿಯಾದ ವಿಧಾನದಲ್ಲಿ ರನ್ನಿಂಗ್ ಮಾಡುವುದು ಹೇಗೆ ಅನ್ನೊ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ಈ ಆರು ಅಂಶಗಳನ್ನು ನೀವು ತಿಳಿದುಕೊಂಡರೆ ನೀವು ಬೇಗನೆ ತೂಕ ಇಳಿಕೆ ಮಾಡಬಹುದು.

ತಪ್ಪಾದ ಶೂಗಳು: ನೀವು ಬಿಗಿನರ್ ಆಗಿದ್ದರೆ, ಹಳೆಯ ಶೂಗಳೊಂದಿಗೆ ನೀವು ಸಾಮಾನ್ಯವಾಗಿ ಓಡಲು ಪ್ರಾರಂಭಿಸುತ್ತೀರಿ.. ಹೆಚ್ಚಿನ ಸಂದರ್ಭಗಳಲ್ಲಿ, ಶೂ ನಿಮ್ಮ ಪಾದಕ್ಕೆ ಉತ್ತಮ ಬೆಂಬಲವನ್ನು ನೀಡುವುದಿಲ್ಲ. ಆದುದರಿಂದ ಸರಿಯಾದ ರನ್ನಿಂಗ್ ಬೂಟುಗಳನ್ನು ಖರೀದಿಸುವುದು ಉತ್ತಮ ಮಾರ್ಗವಾಗಿದೆ. ಕಾಲು ಅಥವಾ ಕಾಲಿನ ಗಾಯಗಳನ್ನು ತಪ್ಪಿಸಲು ಸರಿಯಾದ ರೀತಿಯ ಬೂಟುಗಳನ್ನು ಧರಿಸುವುದು ಅತ್ಯಗತ್ಯ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?