ಮಕ್ಕಳ ರೋಗನಿರೋಧಕ ಶಕ್ತಿ ದುಪ್ಪಟ್ಟುಗೊಳಿಸಲು ಹೀಗ್ ಮಾಡಿ
ಮನೆಯ ಹೊರಗಿನ ವಾತಾವರಣವನ್ನು ನೋಡಲು ಭಯವಾಗಿದೆಯೇ? ಭಯ ಅನಿವಾರ್ಯ ಏಕೆಂದರೆ ಕಳೆದ ಕೆಲವು ದಿನಗಳಲ್ಲಿ ಮಕ್ಕಳು, ವೃದ್ಧರು ಮತ್ತು ಯುವಕರಾದಿಯಾಗಿ ಎಲ್ಲರ ಮೇಲೂ ಕರೋನಾದ ವಕ್ರ ದೃಷ್ಟಿ ಬೀಳುತ್ತಿದೆ. ಕರೋನಾವನ್ನು ತಪ್ಪಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿರಬಹುದು, ಕಷಾಯವನ್ನು ದಿನಕ್ಕೆ ಹಲವಾರು ಬಾರಿ ಕುಡಿಯಬಹುದು, ಆದರೆ ಮಕ್ಕಳು ಕಷಾಯ ಕುಡಿಯುವುದನ್ನು ಇಷ್ಟಪಡುವುದಿಲ್ಲ.ಹಾಗಿದ್ರೆ ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ಹೇಗೆ?

ಕಷಾಯವನ್ನು ಕುಡಿಯುವ ಮೂಲಕ ಮಾತ್ರ ಮಕ್ಕಳ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು ಎಂದು ಯೋಚಿಸುತ್ತಿದ್ದರೆ, ಅದು ತಪ್ಪು. ಮಕ್ಕಳಲ್ಲಿ ರೋ ಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಬಹಳ ಮುಖ್ಯ ಮತ್ತು ಕಷಾಯದ ಬದಲು ಈ ವಿಧಾನಗಳಲ್ಲಿ ಮಕ್ಕಳ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಈ ಆಹಾರಗಳು ಯಾವುವು?

ಜ್ಯೂಸ್ ಮತ್ತು ಶೇಕ್
ಜ್ಯೂಸ್ ಮತ್ತು ಶೇಕ್ ವಯಸ್ಕರಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಹಾಗೆಯೇ ಮಕ್ಕಳ್ಳಲ್ಲಿಯೂ ಸಹ. ವಿವಿಧ ಸೀಸನಲ್ ಹಣ್ಣುಗಳು ಮತ್ತು ತರಕಾರಿಗಳಿಂದ ರಸವನ್ನು ತಯಾರಿಸಬಹುದು, ಇದು ಸಾಕಷ್ಟು ಪೌಷ್ಟಿಕವಾಗಿದೆ.
ಕಿತ್ತಳೆ, ಬೀಟ್ ಜ್ಯೂಸ್ ಅಥವಾ ಕ್ಯಾರೆಟ್ ಜ್ಯೂಸ್ ತಯಾರಿಸಬಹುದು, ಇದು ಉತ್ತಮ ಪ್ರಮಾಣದ ವಿಟಮಿನ್ ಸಿ ಮತ್ತು ಕಬ್ಬಿಣವನ್ನು ನೀಡುತ್ತದೆ.ಅಂತೆಯೇ, ಸ್ಟ್ರಾಬೆರಿ ಶೇಕ್, ಮಾವಿನ ಶೇಕ್, ಕಿವಿ ಜ್ಯೂಸ್ ಮತ್ತು ಕಲ್ಲಂಗಡಿ ರಸವು ಬೇಸಿಗೆಯಲ್ಲಿ ಆರೋಗ್ಯವಾಗಿರಿಸುತ್ತದೆ. ಪೌಷ್ಠಿಕಾಂಶವನ್ನೂ ನೀಡುತ್ತದೆ.
ಕರಗುವ ಮಾತ್ರೆಗಳು
ಮಾತ್ರೆಗಳು ಮಕ್ಕಳಿಗೆ ನುಂಗಲು ಕಷ್ಟವಾಗಬಹುದು ಮತ್ತು ವೈದ್ಯರು ಸಹ ಅವುಗಳನ್ನು ಶಿಫಾರಸು ಮಾಡುವುದಿಲ್ಲ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ನೀರಿನಲ್ಲಿ ಕರಗಿಸುವ ಮೂಲಕ ನೀವು ಈ ಮಾತ್ರೆಗಳನ್ನು ನೀಡಬಹುದು.
ಈ ಮಾತ್ರೆಗಳು ಸಾಮಾನ್ಯವಾಗಿ ಕಿತ್ತಳೆ ಮತ್ತು ನಿಂಬೆ ರುಚಿಯಾಗಿರುತ್ತವೆ, ಅವು ವಿಟಮಿನ್ ಸಿ ಯಿಂದ ತುಂಬಿರುತ್ತವೆ. ಅವು ನೀರಿನಲ್ಲಿ ಸುಲಭವಾಗಿ ಕರಗುತ್ತವೆ ಮತ್ತು ಮಕ್ಕಳಿಗೆ ಇಷ್ಟವಾಗುತ್ತದೆ.
ಗಮ್ಮಿ ಬಿಯರ್ಸ್
ಮಾರುಕಟ್ಟೆಯಲ್ಲಿ ಸಾಕಷ್ಟು ಬ್ರಾಂಡ್‌ಗಳಿವೆ. ಅವರು ಮಕ್ಕಳಿಗೆ ರೋಗ ನಿರೋಧಕ ವರ್ಧಕ ಗಮ್ಮಿ ಬಿಯರ್ಸ್ ಕ್ಯಾಂಡಿಗಳನ್ನು ತಯಾರಿಸುತ್ತಾರೆ. ಈ ಗಮ್ ಮಕ್ಕಳನ್ನು ಆಕರ್ಷಿಸುವುದಲ್ಲದೆ ತಿನ್ನಲು ತುಂಬಾ ರುಚಿಯಾಗಿರುತ್ತದೆ.
ಬಿಯರ್ ಕ್ಯಾಂಡಿಗಳು ಅಗಿಯುವಾಗ ರುಚಿ ಇರುತ್ತದೆ. ಈ ಕಾರಣದಿಂದಾಗಿ ಮಕ್ಕಳು ಅದನ್ನು ತಿನ್ನಲು ಇಷ್ಟಪಡುತ್ತಾರೆ. ಹೌದು, ದಯವಿಟ್ಟು ಅದನ್ನು ಬಳಸುವ ಮೊದಲು ವೈದ್ಯರನ್ನು ಸಂಪರ್ಕಿಸಿ.
ಅಗಿಯುವ ಕ್ಯಾಂಡಿ
ಕ್ಯಾಂಡಿ ಮತ್ತು ಸಿಹಿತಿಂಡಿಗಳು ಮಕ್ಕಳಿಗೆ ಅಚ್ಚುಮೆಚ್ಚಿನವು ಮತ್ತು ಇಂತಹ ಕ್ಯಾಂಡಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿದರೆ, ಎಷ್ಟು ಉತ್ತಮವಲ್ಲವೆ?. ಮಾರುಕಟ್ಟೆಯಲ್ಲಿ ಸಾಕಷ್ಟು ಚೂಯಿಂಗ್ ಮಿಠಾಯಿಗಳು ಲಭ್ಯವಿದೆ, ಇದು ಉತ್ತಮ ಪ್ರಮಾಣದ ವಿಟಮಿನ್ ಸಿ ನೀಡುತ್ತದೆ ಮತ್ತು ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹೆಚ್ಚು ಸಹಾಯ ಮಾಡುತ್ತದೆ.
ಇಮ್ಮ್ಯೂನಿಟಿ ಹೆಚ್ಚಿಸುವ ಕುಕೀಗಳು
ಮನೆಯಲ್ಲಿ ಅಡುಗೆ ಮಾಡಲು ಇಷ್ಟಪಟ್ಟರೆ, ಕೆಲವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕುಕೀಗಳನ್ನು ತಯಾರಿಸಬಹುದು. ಇದಕ್ಕೆ ಬಾದಾಮಿ, ಗೋಡಂಬಿ, ವಾಲ್ನಟ್ಸ್, ಕುಂಬಳಕಾಯಿ ಬೀಜಗಳು, ಅಗಸೆ ಬೀಜಗಳು, ಶುಂಠಿ, ಬೆಲ್ಲ, ದಾಲ್ಚಿನ್ನಿ, ಕರಿಮೆಣಸು, ಜೇನುತುಪ್ಪ ಮತ್ತು ಅರಿಶಿನವನ್ನು ಬಳಸಬಹುದು. ಮಕ್ಕಳು ಈ ಕುಕೀಗಳನ್ನು ಸುಲಭವಾಗಿ ತಿನ್ನುತ್ತಾರೆ.