MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ನಿರಂತರ ಸುದೀರ್ಘ ವ್ಯಾಯಾಮದಿಂದ ಸಾವು ಬರುತ್ತಾ? ದಿನಕ್ಕೆ ಎಷ್ಟು ಹೊತ್ತು ವರ್ಕೌಟ್‌ ಬೆಸ್ಟ್

ನಿರಂತರ ಸುದೀರ್ಘ ವ್ಯಾಯಾಮದಿಂದ ಸಾವು ಬರುತ್ತಾ? ದಿನಕ್ಕೆ ಎಷ್ಟು ಹೊತ್ತು ವರ್ಕೌಟ್‌ ಬೆಸ್ಟ್

ಇತ್ತೀಚೆಗೆ  ಜಿಮ್‌ನಲ್ಲಿ ವರ್ಕೌಟ್‌ ಮಾಡ್ತಾ ಮಾಡ್ತಾ ಅನೇಕ ಎಳೆ ವಯಸ್ಸಿನ ಯುವಕ ಯುವತಿಯರು ಸಾವಿಗೀಡಾದಂತಹ ಅನೇಕ ಘಟನೆಗಳು ನಡೆದಿವೆ. ಹೀಗಾಗಿ ದೀರ್ಘಕಾಲ ವರ್ಕೌಟ್ ಮಾಡೋದು ಒಳ್ಳೆದಾ ಹಾಳಾ ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿದೆ. 

2 Min read
Author : Anusha Kb
Published : Nov 22 2024, 04:44 PM IST
Share this Photo Gallery
  • FB
  • TW
  • Linkdin
  • Whatsapp
17

ಇತ್ತೀಚೆಗೆ ಜನ ಆರೋಗ್ಯಕ್ಕೆ ಹೆಚ್ಚು ಮಹತ್ವ ಕೊಡ್ತಿದ್ದಾರೆ. ಹೀಗಾಗಿ ವ್ಯಾಯಾಮದಲ್ಲಿ ಆಸಕ್ತಿ ತೋರಿಸುವವರ ಸಂಖ್ಯೆ ಹೆಚ್ಚಾಗಿದೆ. ಇದರ ನಡುವೆ ವ್ಯಾಯಾಮ ಮಾಡುತ್ತಲೇ ಸಾವು ಕಂಡಂತಹ ಅನೇಕ ಘಟನೆಗಳು ನಡೆದಿವೆ. ಇದು ಜಿಮ್‌ಗೆ ಹೋಗಿ ವರ್ಕೌಟ್ ಮಾಡುವವರಲ್ಲಿ ಹೊಸ ಆತಂಕ ಸೃಷ್ಟಿಯಾಗಿದೆ. ಹೀಗಾಗಿ ಸುದೀರ್ಘ ಸಮಯದವರೆಗೆ ವ್ಯಾಯಾಮ ಮಾಡೋದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಾ ಎಂಬ ಪ್ರಶ್ನೆ ಮೂಡಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27

ವ್ಯಾಯಾಮದಿಂದ ಸಾಯುವವರ ಸಂಖ್ಯೆ ಪುರುಷರಲ್ಲಿ ಹೆಚ್ಚಿದೆ. ಇತ್ತೀಚೆಗೆ ಸೇಲಂ ಜಿಲ್ಲೆಯ ಮಹದೀರ್ ಮೊಹಮ್ಮದ್ ಜಿಮ್‌ನಲ್ಲಿ ವ್ಯಾಯಾಮ ಮಾಡ್ತಿದ್ರು. ಜಿಮ್‌ನಲ್ಲಿ ಬೇರೆಯವರು ವ್ಯಾಯಾಮ ಮುಗಿಸಿ ಹೋದ ಮೇಲೂ ಮೊಹಮ್ಮದ್ ವ್ಯಾಯಾಮ ಮುಂದುವರಿಸಿದ್ರು. ಆದರೆ ನಂತರ ಸ್ನಾನಕ್ಕೆ ಹೋದವರು ವಾಪಸ್ ಬರಲಿಲ್ಲ. ಬಹಳ ಹೊತ್ತು ಆದ್ರೂ ಮೊಹಮ್ಮದ್ ಬಾರದ ಕಾರಣ ಅವರ ಚಾಲಕ ಒಳಗೆ ಹೋಗಿ ನೋಡಿದಾಗ ಅವರು ಕುಸಿದು ಬಿದ್ದಿದ್ದರು. ಅವರನ್ನು ಮೇಲೆತ್ತಿ ತಕ್ಷಣ ಆಸ್ಪತ್ರೆಗೆ ಕರ್ಕೊಂಡು ಹೋದ್ರೆ ಅಲ್ಲಿ ವೈದ್ಯರು ಅವರು ಈಗಾಗಲೇ ಸತ್ತಿದ್ದಾರೆ ಅಂತ ಘೋಷಿಸಿದ್ದರು.

37

ಈ ಸಾವು ಹೆಚ್ಚು ವ್ಯಾಯಾಮದಿಂದ ಆಯ್ತು ಅಂತ ಒಂದು ಕಡೆ ಹೇಳ್ತಿದ್ರೆ, ಇನ್ನೊಂದು ಕಡೆ ವ್ಯಾಯಾಮ ಸಾವಿಗೆ ಕಾರಣ ಆಗಲ್ಲ ಅಂತ ಬಾಡಿ ಬಿಲ್ಡರ್ಸ್ ಹೇಳ್ತಿದ್ದಾರೆ. ನಿಜ ಏನು ಅಂತ ನೋಡೋಣ. ಮನೆಯಲ್ಲಿ ವ್ಯಾಯಾಮ ಮಾಡಿದ್ರೂ, ಜಿಮ್‌ನಲ್ಲಿ ವ್ಯಾಯಾಮ ಮಾಡಿದ್ರೂ ಮೊದಲು ಗಮನಿಸಬೇಕಾದ ವಿಷಯ ನಿಮ್ಮ ಆರೋಗ್ಯ. ನಿಮ್ಮ ದೇಹಕ್ಕೆ ತಕ್ಕಂತೆ ವ್ಯಾಯಾಮ ಮಾಡೋದು ಬಹಳ ಮುಖ್ಯ. ಈಗಾಗಲೇ ನಿಮಗೆ ರಕ್ತದೊತ್ತಡ, ಹೃದಯ ಸಮಸ್ಯೆ ಇದ್ದರೆ ಅದಕ್ಕೆ ತಕ್ಕಂತೆ ವ್ಯಾಯಾಮ ಮಾಡಬೇಕು.

 

47

ಜಿಮ್ ಶುರು ಮಾಡಿದ ತಕ್ಷಣ ಸರಿಯಾದ ಮಾರ್ಗದರ್ಶನ ಇಲ್ಲದೆ ವ್ಯಾಯಾಮ ಮಾಡೋದು ತಪ್ಪು. ದೇಹದ ಸ್ಥಿತಿಗೆ ತಕ್ಕಂತೆ ವ್ಯಾಯಾಮ ಮಾಡಬೇಕು. ಕಠಿಣ ವ್ಯಾಯಾಮಗಳನ್ನು ಒಮ್ಮೆಗೆ ಶುರು ಮಾಡಬಾರದು. ಜಿಮ್‌ಗೆ ನಿಗದಿತ ಸಮಯವನ್ನು ಮೀಸಲಿಟ್ಟು ನಿರಂತರವಾಗಿ ಜಿಮ್‌ಗೆ ಹೋಗಬೇಕು. ಮನಸ್ಸಿಗೆ ಬಂದಾಗ ಮಾತ್ರ  ಜಿಮ್‌ಗೆ ಹೋಗುವುದು ತಪ್ಪು ಹೋದ ದಿನ ನಿರಂತರ ವ್ಯಾಯಾಮ ಮಾಡುವುದು ಮತ್ತೆ ಮೂರು ದಿನ ಮಾಡದೇ ಇರುವುದು ಇಂತಹ ಎಲ್ಲಾ  ತಪ್ಪುಗಳು ಹೃದಯ ಸಮಸ್ಯೆಗಳನ್ನು ಹೆಚ್ಚಿಸಿ ಹೃದಯಾಘಾತಕ್ಕೆ ಕಾರಣವಾಗುತ್ತವೆ. ಮುಖ್ಯವಾಗಿ ವ್ಯಾಯಾಮ ಮಾಡುವವರು ಚೆನ್ನಾಗಿ ನಿದ್ರೆ ಮಾಡಬೇಕು. ಸರಿಯಾದ ನಿದ್ರೆ ಇಲ್ಲದವರು ಕಠಿಣ ವ್ಯಾಯಾಮ ಮಾಡೋದು ಹೃದಯಾಘಾತಕ್ಕೆ ಕಾರಣವಾಗುತ್ತೆ ಅಂತ ಸಂಶೋಧಕರು ಹೇಳ್ತಾರೆ.

57

ವ್ಯಾಯಾಮ ಮಾಡುವಾಗ ನಿಮ್ಮ ಉಸಿರಾಟ, ಹೃದಯ ಬಡಿತ ಎಲ್ಲವೂ ಬದಲಾಗುತ್ತೆ. ಇದರಿಂದ ರಕ್ತದೊತ್ತಡ ಹೆಚ್ಚಾಗೋದು ಸಾಮಾನ್ಯ. ಈ ಸ್ಥಿತಿ ವ್ಯಾಯಾಮ ಮುಗಿದ ನಂತರ ಕೂಲ್ ಡೌನ್ ಆಗುತ್ತೆ.  ಆದರೆ ವ್ಯಾಯಾಮದ ವೇಳೆ ಏರಿದ ರಕ್ತದೊತ್ತಡ ಪ್ರಮಾಣ ಕಡಿಮೆಯಾಗದಿದ್ದರೆ ದೇಹದಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಹೀಗಾದಾಗ ವೈದ್ಯಕೀಯ ಸಹಾಯ ಪಡೆಯಬೇಕು. ನಿಮ್ಮ ದೇಹಕ್ಕೆ ಮಿತಿ ಮೀರಿ ವ್ಯಾಯಾಮ ಮಾಡೋದೂ ಅಪಾಯ. ಸ್ಟೀರಾಯ್ಡ್ ತೆಗೆದುಕೊಳ್ಳುವವರು ವೈದ್ಯಕೀಯ ಮಾರ್ಗದರ್ಶನ ಪಡೆಯಬೇಕು. ಆಗಾಗ ರಕ್ತದೊತ್ತಡ, ಮಧುಮೇಹ ಪರೀಕ್ಷೆ ಮಾಡಿಸಿಕೊಳ್ಳಬೇಕು. ವ್ಯಾಯಾಮ ದೇಹವನ್ನು ಬಲಪಡಿಸುತ್ತೆಯೇ ಹೊರತು ದೇಹವನ್ನು ಕೆಟ್ಟ ಸ್ಥಿತಿಗೆ ತಳ್ಳಲ್ಲ. ಆದರೆ ಸರಿಯಾದ ಕ್ರಮ ಮಾರ್ಗದರ್ಶನ ಬಹಳ ಅಗತ್ಯ.

 

67

ಒಂದು ದಿನದಲ್ಲಿ ಎಷ್ಟು ಹೊತ್ತು ವ್ಯಾಯಾಮ ಮಾಡಬಹುದು?

ನೀವು ಮಾಡುವ ವ್ಯಾಯಾಮವನ್ನು ಅವಲಂಬಿಸಿ ಸಮಯ ಬದಲಾಗುತ್ತೆ. ನೀವು ಪ್ರತಿದಿನ ವಾಕಿಂಗ್ ಮಾಡಿದ್ರೆ 40 ನಿಮಿಷ ನಡೆಯಬಹುದು. ಓಟದ ವ್ಯಾಯಾಮ ಮಾಡಿದ್ರೆ 30 ನಿಮಿಷ ಓಡೋದು ಒಳ್ಳೆಯದು. ಪ್ರತಿದಿನ ಓಡದೆ ವಾರದಲ್ಲಿ ಮೂರು ದಿನ ಓಟದ ವ್ಯಾಯಾಮ ಮಾಡಬಹುದು. ಒಂದು ದಿನ ಬಿಟ್ಟು ಒಂದು ದಿನ ಓಟದ ವ್ಯಾಯಾಮ, ಮತ್ತು ಕಾಲುಗಳಿಗೆ ಬಲ ನೀಡುವ ವ್ಯಾಯಾಮ (Strength training), ಇತರ ಕಾರ್ಡಿಯೋ ವ್ಯಾಯಾಮಗಳನ್ನು ಮಾಡೋದು ದೇಹಕ್ಕೆ ಒಳ್ಳೆಯದು.

77

ಜಿಮ್‌ನಲ್ಲಿ ಅಥವಾ ಮನೆಯಲ್ಲಿ ಮಧ್ಯಮ ವ್ಯಾಯಾಮ ಮಾಡಿದ್ರೆ 40 ನಿಮಿಷ ಮಾಡಬಹುದು. ದೇಹದಲ್ಲಿ ಗಟ್ಟಿಮುಟ್ಟಾಗಿರುವವರು, ಬಹಳ ಕಾಲ ವ್ಯಾಯಾಮ ಮಾಡುವವರು 1 ಗಂಟೆ ವ್ಯಾಯಾಮ ಮಾಡಬಹುದು. ಸ್ವಂತವಾಗಿ ಮಾಡುವುದಕ್ಕಿಂತ ಮಾರ್ಗದರ್ಶನದೊಂದಿಗೆ ಮಾಡೋದು ಬಹಳ ಒಳ್ಳೆಯದು. ಮುಖ್ಯವಾಗಿ ಕಠಿಣ ವ್ಯಾಯಾಮ ಮಾಡಿದ ನಂತರ ತಕ್ಷಣ ಬಿಸಿ ನೀರಿನಲ್ಲಿ ಸ್ನಾನ ಮಾಡಬೇಡಿ. ಸರಿಯಾದ ಆಹಾರ ಪದ್ಧತಿ, ಉತ್ತಮ ನಿದ್ರೆ ಇದ್ದರೆ ಮಾತ್ರ ವ್ಯಾಯಾಮ ಉತ್ತಮ ಫಲಿತಾಂಶ ನೀಡುತ್ತೆ. ಮನಸ್ಸನ್ನು ಹಗುರವಾಗಿ ಇಟ್ಟುಕೊಳ್ಳಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AK
Anusha Kb
Anusha KB ಸುದ್ದಿಲೋಕದಲ್ಲಿ 13 ವರ್ಷಗಳ ಅನುಭವ, ರಾಜಕೀಯ, ಸಿನಿಮಾ, ದೇಶ, ವಿದೇಶ ಸುದ್ದಿಗಳಲ್ಲಿ ಆಸಕ್ತಿ. ಸುವರ್ಣ ಡಿಜಿಟಲ್‌ನಲ್ಲೀಗ ಸೀನಿಯರ್ ಸಬ್ ಎಡಿಟರ್.
ಜಿಮ್
 
2nd TEST • PAK vs SL 2026
Stumps
PAKPAK
325
SLSL
(22.0 ov) 98 & 74/3
Day 2
Schedule ›
26th T20 • WBBLT20
HH-WHH-W
Thu, 19 Nov, 2026
PS-WPS-W
10:10 am
Match yet to begin.
Schedule ›
27th T20 • WBBLT20
BH-WBH-W
Thu, 19 Nov, 2026
ST-WST-W
01:40 pm
Match yet to begin.
Schedule ›
3rd ODI • AUS vs ENG 2026
Result
AUSAUS
231
ENGENG
328
ENG beat AUS by 97 runs
Schedule ›
2nd ODI • AUS vs ENG 2026
Result
AUSAUS
220
ENGENG
355/6
ENG beat AUS by 135 runs
Schedule ›
5th ODI • NZ vs IND 2026
Result
NZNZ
187
INDIND
209
IND beat NZ by 22 runs
Schedule ›
1st ODI • AUS vs ENG 2026
Result
AUSAUS
132/3
ENGENG
131
AUS won by 7 wickets
Schedule ›
4th ODI • NZ vs IND 2026
Result
NZNZ
333
INDIND
89
NZ beat IND by 244 runs
Schedule ›
3rd ODI • NZ vs IND 2026
abandoned
NZNZ
-
INDIND
-
Match abandoned
Schedule ›
1st TEST • PAK vs SL 2026
Result
PAKPAK
434 & 284/8
SLSL
446
Match drawn
Schedule ›
Latest Videos
Recommended Stories
Recommended image1
ದಿನಾ ಹಾಲು ಕುಡಿದರೂ ಈ ವಿಚಾರ ಬಹುತೇಕರಿಗೆ ಗೊತ್ತಿಲ್ಲ.. ಹಸು vs ಎಮ್ಮೆ ಹಾಲಿನಲ್ಲಿ ಯಾವುದು ಬೆಸ್ಟ್?
Recommended image2
ಹಾಸಿಗೆಯಲ್ಲಿ ತಿಗಣೆ ಕಾಟವನ್ನು ಇಗ್ನೋರ್ ಮಾಡ್ಬೇಡಿ… ಗಂಭೀರ ಕಾಯಿಲೆ ಬರಬಹುದು ಜೋಕೆ!
Recommended image3
ಟೆನಿಸ್ ಬಾಲ್ ತೋರಿಸಿ ಅಭಿಮಾನಿಗಳಿಗೆ ಸವಾಲೆಸೆದ ಶಿಲ್ಪಾ ಶೆಟ್ಟಿ, 'ನೀವು ಗೆಲ್ಲೋದು ಈಜಿ ಇಲ್ಲ' ಎಂದಿದ್ದೇಕೆ ನಟಿ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved