ಮಳೆಗಾಲದ ತುರಿಕೆ: ಬೆಸ್ಟ್ ಈ ಮನೆಮದ್ದುಗಳ ಬಳಕೆ
ಪ್ರಸ್ತುತ ದೇಶದಲ್ಲಿ ಮುಂಗಾರು ಮಳೆ ಭಾರಿ ಜೋರಾಗಿಯೇ ಸುರೀತಿದೆ. ಮಳೆಗಾಲದಲ್ಲಿ, ಬೆವರು ಮತ್ತು ಮಳೆ ನೀರಿಗೆ ದೇಹ ಬೇಗ ಒಡ್ಡಿಕೊಳ್ಳುವುದರಿಂದ ಚರ್ಮದ ದದ್ದು ಮತ್ತು ತುರಿಕೆ ಸಮಸ್ಯೆ ಸಾಮಾನ್ಯ. ಮಳೆಗಾಲದಲ್ಲಿ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿರುತ್ತೆ ಮತ್ತು ಜೊತೆಗೆ ಈ ಸಮಯದಲ್ಲಿ ಉಂಟಾಗುವ ಶಾಖ ಬೆವರಲು ಕಾರಣವಾಗುತ್ತದೆ, ಇಂತಹ ಪರಿಸ್ಥಿತಿಯಲ್ಲಿ ಚರ್ಮದ ಮೇಲೆ ಬ್ಯಾಕ್ಟೀರಿಯಾ ಬೆಳೆದು, ಇವುಗಳಿಂದಾಗಿ ಚರ್ಮದ ತುರಿಕೆಯಂಥ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ತುರಿಕೆಯನ್ನು ತಪ್ಪಿಸಲು, ಕೆಲವರು ಮಾರುಕಟ್ಟೆಯಲ್ಲಿ ಲಭ್ಯವಿರುವ ಪುಡಿಯನ್ನು ಬಳಸುತ್ತಾರೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಪುಡಿ ಖಂಡಿತವಾಗಿಯೂ ತುರಿಕೆಗೆ ಪರಿಹಾರ ನೀಡುತ್ತದೆ, ಆದರೆ ಮತ್ತೆ ಮತ್ತೆ ಸಮಸ್ಯೆ ಉಂಟಾಗೋದರಲ್ಲಿ ಸಂಶಯವೇ ಇಲ್ಲ.
ತುರಿಕೆ ಒಂದು ಸಾರಿ ಔಷಧಿ ಬಳಕೆ ಮಾಡಿದ ಮೇಲೆ ಕಡಿಮೆಯಾಗಬಹುದು. ಆದರೆ ಮತ್ತೆ ಸಮಸ್ಯೆ ಕಾಡುತ್ತದೆ. ಇದನ್ನು ನೀವು ಅನುಭವಿಸರಬಹುದು. ಇಂತಹ ಪರಿಸ್ಥಿತಿಯಲ್ಲಿ, ಕೆಲವು ನೈಸರ್ಗಿಕ ಮತ್ತು ಮನೆಮದ್ದುಗಳ ಸಹಾಯದಿಂದ ತುರಿಕೆಯನ್ನು ಗುಣಪಡಿಸಬಹುದು.
ಮನೆ ಮದ್ದುಗಳಿಂದ ತುರಿಕೆಗೆ ಚಿಕಿತ್ಸೆ ನೀಡಿ
ನಿಂಬೆಯೊಂದಿಗೆ ಬೇಕಿಂಗ್ ಸೋಡಾ ಬಳಸುವುದು. ಆಯುರ್ವೇದ ವೈದ್ಯರ ಪ್ರಕಾರ, ಮಳೆಗಾಲದಲ್ಲಿ ತುರಿಕೆಯಾಗುತ್ತಿದ್ದರೆ, ಸ್ನಾನ ಮಾಡುವಾಗ ಎರಡು ಚಮಚ ಅಡಿಗೆ ಸೋಡಾ ಮತ್ತು ಒಂದು ಚಮಚ ನಿಂಬೆರಸವನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಚರ್ಮಕ್ಕೆ ಚೆನ್ನಾಗಿ ಹಚ್ಚಿ. ನಂತರ ಅದನ್ನು 5 ರಿಂದ 10 ನಿಮಿಷಗಳ ಕಾಲ ಬಿಟ್ಟು ಚರ್ಮವನ್ನು ತೊಳೆಯಿರಿ.
ನಿಂಬೆಯೊಂದಿಗೆ ಅಡುಗೆ ಸೋಡಾವನ್ನು ಬೆರೆಸಿ ತುರಿಕೆಯಾಗುತ್ತಿರುವ ಜಾಗಕ್ಕೆ ದಿನಕ್ಕೆ ಒಮ್ಮೆ ಹಚ್ಚಬೇಕು. ಇದರಿಂದ ತುರಿಕೆಯಿಂದ ಪರಿಹಾರ ಸಿಗುತ್ತದೆ. ಆದರೆ ಇವೆರಡನ್ನೂ ಬಳಕೆ ಮಾಡುವ ಮುನ್ನ ಪ್ಯಾಚ್ ಟೆಸ್ಟ್ ಮಾಡೋದನ್ನು ಮರೆಯಬೇಡಿ. ಯಾಕೆಂದ್ರೆ ಕೆಲವೊಮ್ಮೆ ಇದು ಚರ್ಮಕ್ಕೆ ಅಲರ್ಜಿ ಉಂಟು ಮಾಡಬಹುದು. ಆದುದರಿಂದ ಮೊದಲಿಗೆ ಅದರ ಬಗ್ಗೆ ತಿಳಿದು ನಂತರ ಹಚ್ಚಿ.
ಶ್ರೀಗಂಧವನ್ನು ಈ ರೀತಿ ಬಳಸಿ
ಚರ್ಮದ ತಜ್ಞರ ಪ್ರಕಾರ, ಶ್ರೀಗಂಧದ ಬಳಕೆ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಮಾರುಕಟ್ಟೆಯಲ್ಲಿ ಲಭ್ಯವಿರುವ ಶ್ರೀಗಂಧದ ಪುಡಿಯನ್ನು ತೆಗೆದುಕೊಂಡು ಅದನ್ನು ತುರಿಕೆ ಇರುವ ಜಾಗಕ್ಕೆ ಹಚ್ಚಿ.
ಶ್ರೀಗಂಧವನ್ನು ರೋಸ್ ವಾಟರ್ ನೊಂದಿಗೆ ಪೇಸ್ಟ್ ಮಾಡುವ ಮೂಲಕ ಕೂಡ ಹಚ್ಚಬಹುದು. ಇದನ್ನು ನಿಯಮಿತವಾಗಿ ಮಾಡುವುದರಿಂದ ತುರಿಕೆಯ ಸಮಸ್ಯೆ ಶಾಂತವಾಗುತ್ತದೆ.
ಬೇವನ್ನು ಈ ರೀತಿ ಬಳಸಿ
ವೈದ್ಯರು ಹೇಳುವಂತೆ ಬೇವು ಕೂಡ ತುರಿಕೆಯ ಸಮಸ್ಯೆಯಿಂದ ಪರಿಹಾರ ನೀಡುತ್ತದೆ. ಬೇವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ, ಇದು ಚರ್ಮದ ಸಮಸ್ಯೆಗಳನ್ನು ಗುಣಪಡಿಸಲು ತುಂಬಾ ಉಪಯುಕ್ತವಾಗಿದೆ. ತುರಿಕೆಯಿಂದ ಉಪಶಮನ ಪಡೆಯಲು ಬೇವಿನ ಎಲೆಗಳನ್ನು ರುಬ್ಬಿ ಮತ್ತು ಬಾಧಿತ ಜಾಗಕ್ಕೆ ಹಚ್ಚಿ.
ತೆಂಗಿನ ಎಣ್ಣೆಯನ್ನು
ತೆಂಗಿನ ಎಣ್ಣೆಯನ್ನು ಚರ್ಮಕ್ಕೆ ಪ್ರಯೋಜನಕಾರಿ. ಇದು ಉರಿಯೂತದ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ, ಇದು ಚರ್ಮವನ್ನು ಹಲವು ವಿಧಗಳಲ್ಲಿ ಆರೋಗ್ಯವಾಗಿರಿಸುತ್ತದೆ.
ತುರಿಕೆ ಇರುವ ಜಾಗಕ್ಕೆ ತೆಂಗಿನ ಎಣ್ಣೆ ಹಚ್ಚಿದರೆ ಚರ್ಮದ ಸೋಂಕು ಇತ್ಯಾದಿಗಳನ್ನು ಗುಣಪಡಿಸಲು ಇದು ತುಂಬಾ ಉಪಯುಕ್ತ. ಇಂತಹ ಪರಿಸ್ಥಿತಿಯಲ್ಲಿ, ಮಳೆಗಾಲದಲ್ಲಿ ತುರಿಕೆಯಾಗುತ್ತಿದ್ದರೆ, ತೆಂಗಿನ ಎಣ್ಣೆ ಪೀಡಿತ ಪ್ರದೇಶದಲ್ಲಿ ಹಚ್ಚಿ.