ಒಣದ್ರಾಕ್ಷಿ ಜೊತೆ ಮೊಸರು ಸೇವಿಸಿ.... ಅದು ಮಾಡುವ ಮ್ಯಾಜಿಕ್ ನೋಡಿ
ಇತ್ತಿಚಿಗೆ ಜನರನ್ನು ಹೊಸ ಹೊಸ ಖಾಯಿಲೆಗಳು ತೊಂದರೆಗೀಡು ಮಾಡಿದೆ. ಇದಕ್ಕೆ ಕಾರಣ ನಾವು ಮಾಡುವ ತಪ್ಪುಗಳು. ಚಟುವಟಿಕೆಯ ಕೊರತೆ, ಸಾಮಾಜಿಕ ಸಂವಹನ ಮತ್ತು ಜೀವನದ ಅನಿರೀಕ್ಷಿತತೆಯು ಕರುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕಳೆದ ಒಂದು ವರ್ಷದಿಂದ ಸಾಂಕ್ರಾಮಿಕ ರೋಗದಿಂದಾಗಿ ಜನರಿಗೆ ಒತ್ತಡ ಹೆಚ್ಚಿದೆ. ಈ ತಿಂಗಳುಗಳಲ್ಲಿ ಕೂದಲು, ನಿದ್ರೆ ಸಮಸ್ಯೆ ಜನರನ್ನು ಹೆಚ್ಚಾಗಿ ಕಾಡುತ್ತದೆ. ಆದರೆ ಅಡುಗೆಮನೆಯಲ್ಲಿ ಸಿಗುವ ಕೆಲವೊಂದು ವಸ್ತುಗಳು ಆರೋಗ್ಯ ಕಾಪಾಡುವಲ್ಲಿ ಸಹಾಯ ಮಾಡುತ್ತದೆ.
ಹಿಂದಿನ ಕಾಲದಲ್ಲಿ ಅಜ್ಜಿಯರ ಸಂಪ್ರದಾಯದ ಸೌಂದರ್ಯವೆಂದರೆ ಅದು ಅಡುಗೆ ಮನೆಯಲ್ಲಿ ಕಂಡುಬರುವ ಸರಳವಾದ ಪದಾರ್ಥಗಳು. ಅವುಗಳನ್ನು ಬಳಸಿಕೊಂಡೆ ಹಿಂದೆ ಜನರು ಪರಿಣಾಮಕಾರಿ ಪರಿಹಾರಗಳನ್ನು ಪಡೆಯುತ್ತಿದ್ದರು. ಕರುಳಿನ ಆರೋಗ್ಯದ ಸಮಸ್ಯೆ ಬಂದರೂ ಸಹ ಸುಲಭವಾಗಿ ಮನೆಯಲ್ಲಿಯೇ ಮದ್ದು ಮಾಡುತ್ತಿದ್ದರು. ಅಂತಹ ಒಂದು ಆಹಾರ ಕ್ರಮ ಒಣದ್ರಾಕ್ಷಿಗಳೊಂದಿಗೆ ಮೊಸರು ಸೇವಿಸುವುದು.
ಇದನ್ನು ಮಾಡುವ ಪ್ರಕ್ರಿಯೆ ಇಲ್ಲಿದೆ -
ಬೆಚ್ಚಗಿನ ಹಾಲಿನ ಬಟ್ಟಲನ್ನು ತೆಗೆದುಕೊಳ್ಳಿ (ತಾಜಾ ಮತ್ತು ಪೂರ್ಣ ಕೊಬ್ಬು ಹೊಂದಿರುವ ಹಾಲಾದರೆ ಒಳ್ಳೆಯದು). ಇದಕ್ಕೆ 4-5 ಒಣದ್ರಾಕ್ಷಿ ಸೇರಿಸಿ (ಕಪ್ಪು ಒಣದ್ರಾಕ್ಷಿ ಉತ್ತಮ). ನಂತರ ಒಂದು ಸಣ್ಣ ಹನಿ ಮೊಸರು (ಮಜ್ಜಿಗೆಯಾದರೆ ಉತ್ತಮ) ತೆಗೆದುಕೊಂಡು ಅದನ್ನು ಹಾಲಿಗೆ ಸೇರಿಸಿ. ಇದನ್ನು ಮಿಕ್ಸ್ ಮಾಡಿ. ಅಂದರೆ ಅರಡು ಪಾತ್ರೆಗಳಲ್ಲಿ ಹಾಕಿ ಬೆರೆಸಿ. (ಅಜ್ಜಿಯರು 32 ಬಾರಿ ಎಂದು ಹೇಳುತ್ತಾರೆ).
ಈ ಮಿಶ್ರಣವನ್ನು ಒಂದು ಮುಚ್ಚಳದಿಂದ ಮುಚ್ಚಿ ಮತ್ತು 8-12 ಗಂಟೆಗಳವರೆಗೆ ಪಕ್ಕಕ್ಕೆ ಇರಿಸಿ. ಮೇಲಿನ ಪದರವು ದಪ್ಪವಾಗಿ ಕಾಣಿಸಿಕೊಂಡಾಗ, ಮೊಸರು ತಿನ್ನಲು ಸಿದ್ಧವಾಗಿದೆ. ಇದನ್ನು ಊಟದ ಜೊತೆ ಅಥವಾ ಮಧ್ಯಾಹ್ನ 3-4 ಗಂಟೆಯ ನಂತರದ ಸೇವಿಸಿ.
ಮೊಸರು ಪ್ರೋಬಯಾಟಿಕ್ ಆಗಿ ಮತ್ತು ಒಣದ್ರಾಕ್ಷಿಗಳಲ್ಲಿ ಕರಗಬಲ್ಲ ಹೆಚ್ಚಿನ ನಾರಿನ ಅಂಶ ಪ್ರಿಬಯಾಟಿಕ್ ಆಗಿ ಕಾರ್ಯ ನಿರ್ವಹಿಸುತ್ತದೆ. ಒಟ್ಟಿಗೆ ಇದು - ಕೆಟ್ಟ ಬ್ಯಾಕ್ಟೀರಿಯಾವನ್ನು ತಟಸ್ಥಗೊಳಿಸಿ, ಉತ್ತಮ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸಿ, ಕರುಳಿನಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ.
ಈ ರೀತಿಯ ಮೊಸರು ಸೇವನೆ ಮಾಡುವ ಮೂಲಕ ಹಲ್ಲು ಮತ್ತು ಒಸಡುಗಳನ್ನು ಆರೋಗ್ಯವಾಗಿಡಬಹುದು. ಅಷ್ಟೇ ಅಲ್ಲ ಇದು ಮೂಳೆಗಳು ಮತ್ತು ಕೀಲುಗಳಿಗೆ ಸಹ ಒಳ್ಳೆಯದು.
ಮೊಸರು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು, ಬಿಪಿಯನ್ನು ಕಡಿಮೆ ಮಾಡಲು ಮತ್ತು ತೂಕ ನಷ್ಟವನ್ನು ಉತ್ತೇಜಿಸಲು ಉತ್ತಮವಾದ ಪರಿಹಾರವಾಗಿದೆ. ವಯಸ್ಸಾದವರು ಮತ್ತು ಯುವಕರಲ್ಲಿ ಇದು ಮಲಬದ್ಧತೆಯನ್ನು ತಡೆಯುತ್ತದೆ ಮತ್ತು ಒಣದ್ರಾಕ್ಷಿಗಳನ್ನು ಅಗಿಯಲು ಸುಲಭವಾಗುತ್ತದೆ.
ಇತರ ಸೇರ್ಪಡೆಗಳು - ಮೊಸರಿಗೆ ಡೇಟ್ಸ್ ಸೇರಿಸಿ ಸೇವಿಸುವುದು ಉತ್ತಮ. ವಿಶೇಷವಾಗಿ ಗರ್ಭಿಣಿಯಾಗಲು ಪ್ರಯತ್ನಿಸುತ್ತಿದ್ದರೆ, ಅತ್ಯುತ್ತಮ ಆಹಾರ ಇದಾಗಿದೆ ಎಂದು ತಿಳಿದು ಬಂದಿದೆ.