42ರಲ್ಲೂ ಫಿಟ್ ಅಲ್ಲು ಅರ್ಜುನ್… ಇವರ ಬಲಿಷ್ಠ ದೇಹದ, ಫಿಟ್ನೆಸ್ ಗುಟ್ಟಿದ್ದು, ಜೊತೆಗೆ ಆಹಾರ ಅಲರ್ಜಿಯೂ ಇದೆಯಂತೆ!
ಭಾರತೀಯ ಚಿತ್ರರಂಗದ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ 42 ವರ್ಷದ ನಂತರವೂ ಫಿಟ್ ಆಗಿದ್ದಾರೆ. ಶುದ್ಧ ಆಹಾರ ಸೇವಿಸುವ ಮೂಲಕ ಅವರು ರೋಗಗಳಿಂದ ದೂರ ಇದ್ದಾರೆ. ಹಾಗಿದ್ರೆ ಫಿಟ್ ಆಂಡ್ ಫೈನ್ ಆಗಿರೋದಕ್ಕೆ ಪುಷ್ಪ ಸ್ಟಾರ್ ಏನೇನು ಸೇವಿಸ್ತಾರೆ ಗೊತ್ತಾ?
ದಕ್ಷಿಣ ಭಾರತದ ಸಿನಿಮಾರಂಗವನ್ನು ನೋಡಿದ್ರೆ, ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಅವರ ಜನಪ್ರಿಯತೆ ತುಂಬಾ ಹೆಚ್ಚಿದೆ. ಇವರಿಗೆ ಅಭಿಮಾನಿಗಳ ಸಂಖ್ಯೆಯೂ ಸಿಕ್ಕಾಪಟ್ಟೆ ಇದೆ. ಇದೀಗ 'ಪುಷ್ಪ' ಚಿತ್ರದ ನಂತರ ಭಾರತದಾದ್ಯಂತ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ನಟನೆ ಹೊರತಾಗಿ, ಈ ಸೂಪರ್ಸ್ಟಾರ್ ತನ್ನ ಫಿಟ್ನೆಸ್ ಗೆ ಹೆಸರುವಾಸಿ. ಇದಕ್ಕಾಗಿ, ಅವರು ವ್ಯಾಯಾಮ ಮತ್ತು ಆಹಾರದ ಬಗ್ಗೆ ಸಿಕ್ಕಾಪಟ್ಟೆ ಗಮನ ಹರಿಸ್ತಾರೆ.
ಅಲ್ಲು ಅರ್ಜುನ್ ಇದೀಗ 42 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ ಆದರೆ ಫಿಟ್ನೆಸ್ ನೋಡಿದ್ರೆ ಇನ್ನೂ 25 ವರ್ಷದ ಹುಡುಗನಂತೆ ಇದೆ. ಅವರ ವ್ಯಾಯಾಮ ಮತ್ತು ಆಹಾರ ಸಂಪೂರ್ಣವಾಗಿ ವಿಭಿನ್ನವಾಗಿದೆ. ಇವರು ಇಷ್ಟೊಂದು ಫಿಟ್ (fitness secret of Allu Arjun) ಆಗಿರೋದಕ್ಕೆ ಅಲ್ಲು ಅರ್ಜುನ್ ತಮ್ಮ ಆಹಾರದಲ್ಲಿ ಬೆಳಿಗ್ಗೆಯಿಂದ ರಾತ್ರಿಯವರೆಗೆ ಏನೆಲ್ಲಾ ಸೇವಿಸುತ್ತಾರೆ, ಅನ್ನೋದನ್ನು ತಿಳಿಯೋಣ,
ಇದು ಅಲ್ಲು ಅರ್ಜುನ್ ಅವರ ನೆಚ್ಚಿನ ಪ್ರೋಟೀನ್ ಆಹಾರ
ವರದಿಯ ಪ್ರಕಾರ, ಅಲ್ಲು ಅರ್ಜುನ್ ಅವರ ಆಹಾರಕ್ರಮವು ಸ್ಥಿರವಾಗಿಲ್ಲ. ಆದರೆ ಅದರಲ್ಲಿ ಜಂಕ್ ಫುಡ್ (junk food)ಮತ್ತು ಸಂಸ್ಕರಿಸಿದ ಆಹಾರ ಮಾತ್ರ ಇರೋದೇ ಇಲ್ಲ. ಮೊಟ್ಟೆ ತಿಂತಾರೆ ಅಲ್ಲು ಅರ್ಜುನ್. ಇದನ್ನು ಉಪಾಹಾರದಿಂದ ರಾತ್ರಿಯ ಊಟದವರೆಗೆ ಯಾವಾಗ ಬೇಕಾದರೂ ತಿನ್ನಬಹುದು. ಮೊಟ್ಟೆಗಳು ಪ್ರೋಟೀನ್ ಜೊತೆಗೆ ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ರಂಜಕ, ಕೋಲೀನ್ ಇತ್ಯಾದಿಗಳನ್ನು ಸಹ ತಮ್ಮ ಆಹಾರದಲ್ಲಿ ಸೇರಿಸುತ್ತಾರೆ.
ಅಲ್ಲು ಅರ್ಜುನ್ ಪ್ರತಿದಿನದ ವ್ಯಾಯಾಮ, ಆಹಾರ ಹೀಗಿದೆ…
ಬೆಳಗಿನ ಓಟ
ಅಲ್ಲು ಅರ್ಜುನ್ ಅವರ ದಿನವು ಓಡುವುದರೊಂದಿಗೆ ಪ್ರಾರಂಭವಾಗುತ್ತದೆ. ಅವರು ಟ್ರೆಡ್ ಮಿಲ್ ನಲ್ಲಿ (trademill)ಸುಮಾರು 45 ನಿಮಿಷಗಳ ಕಾಲ ಓಡುತ್ತಾರೆ. ಕೊಬ್ಬನ್ನು ಕರಗಿಸಲು ಇದು ಉತ್ತಮ ವ್ಯಾಯಾಮ. ಇದು ಭಂಗಿಯನ್ನು ಸುಧಾರಿಸುತ್ತದೆ, ಹೃದಯರಕ್ತನಾಳದ ಕಾರ್ಯವನ್ನು ಸುಧಾರಿಸುತ್ತದೆ ಮತ್ತು ಪಾದಗಳಿಗೆ ಜೀವವನ್ನು ತರುತ್ತದೆ. ಶಕ್ತಿ ಕಡಿಮೆ ಇದ್ದರೆ, ಓಡೋದನ್ನು ಆರಂಭಿಸಿ.
ಕ್ಯಾಲಿಸ್ಟೆನಿಕ್ ವ್ಯಾಯಾಮ
ಮಾಧ್ಯಮ ವರದಿಗಳ ಪ್ರಕಾರ ಅರ್ಜುನ್ ಕ್ಯಾಲಿಸ್ಟೆನಿಕ್ ವ್ಯಾಯಾಮಗಳನ್ನು ಮಾಡಲು ಇಷ್ಟಪಡುತ್ತಾರೆ . ವ್ಯಕ್ತಿಯು ದೇಹದ ತೂಕವನ್ನು ಬಳಸಿಕೊಂಡು ಈ ವ್ಯಾಯಾಮ ಮಾಡಲಾಗುತ್ತದೆ. ಇದು ದೇಹವನ್ನು ಹೆಚ್ಚು ಸದೃಢವಾಗಿಸುತ್ತದೆ. ಇದರಲ್ಲಿ ಚಲನೆ, ಚಲನೆ ಮತ್ತು ನಮ್ಯತೆಯ ವ್ಯಾಪ್ತಿಯು ಸುಧಾರಿಸುತ್ತದೆ.
ವಾರಕ್ಕೆ 7ಬಾರಿ ವ್ಯಾಯಾಮ
ವರದಿಗಳ ಪ್ರಕಾರ ಅಲ್ಲು ವಾರಕ್ಕೆ 7 ರಿಂದ 8 ಬಾರಿ ವ್ಯಾಯಾಮ (workout) ಮಾಡಲು ಇಷ್ಟಪಡುತ್ತಾರೆ. ಆದರೆ ಕೆಲವೊಮ್ಮೆ ಸೋಮಾರಿತನ ಅಥವಾ ಹೆಚ್ಚು ಓಡೋದರಿಂದ ವ್ಯಾಯಮ ಕಡಿಮೆಯಾಗುತ್ತವಂತೆ. ಆದರೆ ಖಂಡಿತವಾಗಿಯೂ ವಾರದಲ್ಲಿ ಕನಿಷ್ಠ 3 ದಿನ ವ್ಯಾಯಾಮ ಮಾಡಿಯೇ ಮಾಡ್ತಾರೆ.
ಡಾರ್ಕ್ ಚಾಕಲೇಟ್ ಸೇವನೆ
ಯಾರಿಗೆ ತಾನೆ ಸಿಹಿ ಇಷ್ಟವಿಲ್ಲ, ಎಲ್ಲರಿಗೂ ಸಿಹಿ ಇಷ್ಟ. ಅಲ್ಲು ಅರ್ಜುನ್ ಗೂ ಸಿಹಿ ಇಷ್ಟ. ಇದಕ್ಕಾಗಿ, ನಟ ಚಾಕೊಲೇಟ್ ತಿನ್ನುತ್ತಾರೆ. ಅವರ ದಿನವು ಹೆಚ್ಚಾಗಿ ಒಂದು ತುಂಡು ಚಾಕೊಲೇಟ್ ತಿನ್ನುವುದರೊಂದಿಗೆ ಕೊನೆಗೊಳ್ಳುತ್ತದೆ. ಡಾರ್ಕ್ ಚಾಕೊಲೇಟ್ (dark chocolate) ಕಬ್ಬಿಣ ಅಂಶವನ್ನು ಒಳಗೊಂಡಿದ್ದು, ಇದು ಮೆದುಳಿಗೆ ಒಳ್ಳೆಯದು.
ಡೈರಿ ಉತ್ಪನ್ನಗಳಿಗೆ ಅಲರ್ಜಿ
ಅಲ್ಲು ಅರ್ಜುನ್ ಗೆ ಡೈರಿ ಉತ್ಪನ್ನಗಳ ಅಲರ್ಜಿ ಇದೆ. ಅದಕ್ಕಾಗಿಯೇ ಅವರು ಹಸು-ಎಮ್ಮೆ ಹಾಲು, ಚೀಸ್, ಮಜ್ಜಿಗೆ, ಮೊಸರು ತಿನ್ನೋದಿಲ್ಲ. ತಜ್ಞರ ಪ್ರಕಾರ, ಅವುಗಳೊಳಗೆ ಲ್ಯಾಕ್ಟೋಸ್ ಅನ್ನು ಹೊಂದಿರುತ್ತವೆ, ಇದು ಕೆಲವು ಜನರಿಗೆ ಅಲರ್ಜಿಯ ಪ್ರತಿಕ್ರಿಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಡೈರಿ ಉತ್ಪನ್ನಗಳಿಂದ (dairy products) ಅಲ್ಲು ಅರ್ಜುನ್ ದೂರ ಇದ್ದಾರೆ.