ಎಷ್ಟೋ ಜನಕ್ಕೆ ಹಲ್ಲು ಹೇಗೆ ಉಜ್ಜಬೇಕೆಂಬುವುದೇ ಗೊತ್ತಿರೋಲ್ಲ, ಇಲ್ ಕೇಳಿ
ಬಾಯಿಯು ಹಲವು ರೋಗಗಳಿಗೆ ಹಾದು ಹೋಗುವ ದಾರಿ, ಅದಕ್ಕಾಗಿ ಬ್ರಷ್ ಮಾಡುವುದು ಹೇಗೆ ಎಂಬುದನ್ನು ತಿಳಿಯುವುದು ಮುಖ್ಯ. ಸಾಮಾನ್ಯವಾಗಿ ಜನರು ದೈಹಿಕ ಮತ್ತು ಚರ್ಮದ ಆರೋಗ್ಯದ ಬಗ್ಗೆ ತುಂಬಾ ಜಾಗೃತರಾಗಿರುತ್ತಾರೆ, ಆದರೆ ಓರಲ್ ಆರೋಗ್ಯವನ್ನು ಕಡೆಗಣಿಸುತ್ತಾರೆ. ಹಲ್ಲುಗಳನ್ನು ಸರಿಯಾಗಿ ಸ್ವಚ್ಛಗೊಳಿಸದೇ ಇರುವುದು ಅನೇಕ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ.
ಹಲ್ಲುಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಉಳುಕುಗಳ ಅಪಾಯ ಹೆಚ್ಚಾಗುತ್ತದೆ. ಬ್ಯಾಕ್ಟೀರಿಯಾಗಳು ಹಲ್ಲುಗಳಲ್ಲಿ ಶೇಖರವಾಗಲಾರಂಭಿಸುತ್ತವೆ. ಇದು ಹಲ್ಲುಗಳ ಎನಾಮಲ್ ಅನ್ನು ಕೆಡಿಸಲು ಪ್ರಾರಂಭಿಸುತ್ತದೆ. ಅವು ಕೊಳೆಯಲು ಪ್ರಾರಂಭಿಸುತ್ತವೆ.
ಓರಲ್ ಆರೋಗ್ಯದ ಕಡೆ ಗಮನ ಹರಿಸದಿರುವುದು ವಸಡುಗಳ ಸಮಸ್ಯೆಗೆ ಕಾರಣವಾಗುತ್ತದೆ. ಜಿಂಕೈಟಿಸ್ ಊದಿಕೊಳ್ಳಲು ಪ್ರಾರಂಭಿಸುತ್ತದೆ. ವಸಡಿನ ರೋಗಗಳು ಹೃದಯ ಸಂಬಂಧಿ ಕಾಯಿಲೆಗಳನ್ನು ಉತ್ತೇಜಿಸುತ್ತವೆ. ಆದ್ದರಿಂದ ಹಲ್ಲುಗಳನ್ನು ಚೆನ್ನಾಗಿ ಸ್ವಚ್ಛಗೊಳಿಸುವುದು ಅಗತ್ಯ.
ಇದಕ್ಕಾಗಿ ನಿಂಬೆ ರಸಕ್ಕೆ ಉಪ್ಪು ಮತ್ತು ಸ್ವಲ್ಪ ಸಾಸಿವೆ ಎಣ್ಣೆಯನ್ನು ಸೇರಿಸಿ ಬ್ರಷ್ ನಿಂದ ಹಲ್ಲುಗಳನ್ನು ಕಾಂತಿಗೊಳಿಸಬಹುದು. ಬಾಳೆಹಣ್ಣಿನ ಸಿಪ್ಪೆಯ ಒಳಭಾಗವನ್ನು ಹಲ್ಲುಗಳ ಮೇಲೆ ಉಜ್ಜಿ, ಇದರಿಂದ ಬಾಯಿಯ ಕೊಳೆ ದೂರವಾಗುತ್ತದೆ.
ಹಲ್ಲುಗಳ ಹಳದಿ ಬಣ್ಣವನ್ನು ಕಡಿಮೆ ಮಾಡಲು ಕಿತ್ತಳೆ ಸಿಪ್ಪೆಯನ್ನು ಹಲ್ಲಿನ ಮೇಲೆ ಉಜ್ಜಿ. ಇದು ಹಲ್ಲುಗಳಿಗೆ ಹೊಳಪನ್ನು ನೀಡಲು ಸಹಾಯ ಮಾಡುತ್ತದೆ.
ಬ್ರಶ್ ಮಾಡುವ ಮುನ್ನ ಬ್ರಶ್ ಅನ್ನು ಚೆನ್ನಾಗಿ ತೊಳೆಯಿರಿ. ನಿಮಗೆ ಎಷ್ಟು ಅಗತ್ಯವೋ ಅಷ್ಟು ಟೂತ್ ಪೇಸ್ಟ್ ಅನ್ನು ಹಚ್ಚಿ. ಹೆಚ್ಚು ಪೇಸ್ಟಿನಿಂದ ನೊರೆಯು ಹೆಚ್ಚು. ಇದರಿಂದ ಸುಲಭವಾಗಿ ಬ್ರಷ್ ಆಗುವುದಿಲ್ಲ.
ಒಂದು ಕಪ್ ನೀರನ್ನು ಬಾಯಿಯಲ್ಲಿ ತೆಗೆದುಕೊಂಡು ಚೆನ್ನಾಗಿ ತಿರುಗಿಸಿ. ನೀರನ್ನು 2-3 ಬಾರಿ ಬದಲಾಯಿಸಿ.
ಹಲ್ಲುಗಳನ್ನು ಮುಂಭಾಗದಿಂದ ಮಾತ್ರವಲ್ಲ, ಹಿಂಬದಿಯಿಂದ ಕ್ಲೀನ್ ಮಾಡಿ. ಅವಾಗ ಹಲ್ಲುಗಳು ಆರೋಗ್ಯಯುತವಾಗಿರುತ್ತದೆ.
ನಾಲಿಗೆಯನ್ನು ಸ್ವಚ್ಛಗೊಳಿಸಲು ಬ್ರಶ್ ನ ಹಿಂಭಾಗವನ್ನು ಬಳಸಿ. ನಾಲಗೆ ಕ್ಲೀನ್ ಆಗಿರುವುದು ತುಂಬಾನೇ ಮುಖ್ಯ.
ಹಲ್ಲುಗಳನ್ನು ಒಂದೇ ಬದಿಯಲ್ಲಿ ಬಹಳ ಕಾಲ ಉಜ್ಜಬೇಡಿ. ಇದರಿಂದ ಹಲ್ಲುಗಳ ಎನಾಮಲ್ ಹೋಗಬಹುದು.
ಉಪ್ಪು, ಬಿಸಿ ನೀರು ಬಳಸಿ ಅವಾಗವಾಗ ಬಾಯಿ ತೊಳೆಯುವುದು ಉತ್ತಮ. ಇದರಿಂದ ಬಾಯಿಯ ಅರೋಗ್ಯ ಚೆನ್ನಾಗಿರುತ್ತದೆ.