ಬ್ಲಾಕ್ ಕರಂಟ್ ಸೇವಿಸಿ ಮಧುಮೇಹ ಸಮಸ್ಯೆಯನ್ನು ದೂರ ಓಡಿಸಿ...
ಜೀವಸತ್ವಗಳು, ಖನಿಜಗಳು, ಆಹಾರದ ಫೈಬರ್ ಮತ್ತು ಪಾಲಿಫಿನಾಲ್ಗಳು ಸಮೃದ್ಧವಾಗಿರುವ ಹಣ್ಣುಗಳನ್ನು ಮಧುಮೇಹ ರೋಗಿಗಳು ಸೇವಿಸಬೇಕು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಇವು ಸಹಾಯ ಮಾಡುತ್ತವೆ. ಆದರೆ ಎಲ್ಲಾ ಹಣ್ಣುಗಳಲ್ಲಿ, ಬ್ಲ್ಯಾಕ್ ಕರಂಟ್ ಅತ್ಯುತ್ತಮವಾದವು. ಇವುಗಳು ದೇಹದಲ್ಲಿ ಸಕ್ಕರೆ ಹೆಚ್ಚಳವನ್ನು ತಡೆಯಬಹುದು. ಸೇವಿಸಿದ ಸಕ್ಕರೆಯ ಗ್ಲೂಕೋಸ್ ಪ್ರತಿಕ್ರಿಯೆಯನ್ನು ಅವು ಸಮತೋಲನಗೊಳಿಸುತ್ತವೆ ಮತ್ತು ಅದರ ಕುಸಿತವನ್ನು ವಿಳಂಬಗೊಳಿಸುತ್ತದೆ. ಬ್ಲ್ಯಾಕ್ ಕರಂಟ್ ಗಳಲ್ಲಿ ಸಮೃದ್ಧವಾಗಿರುವ ಪಾಲಿಫೆನಾಲಿಕ್ ಸಂಯುಕ್ತಗಳಾದ ಆಂಥೋಸಯಾನಿನ್ಗಳು ಇದಕ್ಕೆ ಕಾರಣ.
ಬ್ಲ್ಯಾಕ್ ಕರಂಟ್ ಗಳನ್ನು ಸಾಮಾನ್ಯವಾಗಿ ಸಿಹಿಯನ್ನು ಬೆರೆಸಿ ತಿನ್ನುತ್ತಾರೆ ಏಕೆಂದರೆ ಅವುಗಳ ನೈಸರ್ಗಿಕ ಹುಳಿ ಅಂಶ ಹೊಂದಿದೆ. ಇದರಿಂದ ಕೆಲವು ಮಧುಮೇಹಿಗಳು ಆತಂಕಕ್ಕೊಳಗಾಗಬಹುದು. ಆದರೆ ಅಧ್ಯಯನದ ಪ್ರಕಾರ, ಬ್ಲ್ಯಾಕ್ ಕರಂಟ್ ಗಳೊಂದಿಗೆ ಸೇವಿಸುವ ಸಕ್ಕರೆ , ಹಾಗೆ ಸೇವಿಸುವ ಸಕ್ಕರೆಯಂತೆ ಅನಾರೋಗ್ಯಕರವಲ್ಲ ಎಂದು ತಿಳಿಸಿದೆ. .
ಇತ್ತೀಚಿನ ವರ್ಷಗಳಲ್ಲಿ, ಅನೇಕ ಅಧ್ಯಯನಗಳು ಗ್ಲೂಕೋಸ್ ಚಯಾಪಚಯ ಕ್ರಿಯೆಯ ಮೇಲೆ ಹಣ್ಣುಗಳ ಪರಿಣಾಮಗಳನ್ನು ಗಮನಿಸಿವೆ, ಬ್ಲ್ಯಾಕ್ ಕರಂಟ್ ಮತ್ತು ಬಿಲ್ಬೆರಿಯದಂತಹ ಡಾರ್ಕ್ ಬೆರ್ರಿಗಳು ಹೆಚ್ಚು ಪರಿಣಾಮಕಾರಿ ಫಲಿತಾಂಶಗಳನ್ನು ಹೊಂದಿವೆ.
ಕಪ್ಪು-ಬಣ್ಣದ ಹಣ್ಣುಗಳು ಆಂಥೋಸಯಾನಿನ್ಗಳ ಸಮೃದ್ಧ ಮೂಲವಾಗಿದೆ, ಇದು ಅಧಿಕ ಸಕ್ಕರೆಗೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಬ್ಲ್ಯಾಕ್ ಕರಂಟ್ ಹೊರತೆಗೆಯಲಾದ ಆಂಥೋಸಯಾನಿನ್ಗಳಿಂದ ಅದೇ ಪರಿಣಾಮವನ್ನು ಪ್ರದರ್ಶಿಸಲಾಗುತ್ತದೆ.
ಪಾಲಿಫಿನೋಲಿಕ್ ಸಂಯುಕ್ತಗಳು ಕಾರ್ಬೋಹೈಡ್ರೇಟ್-ಜೀರ್ಣಿಸುವ ಕಿಣ್ವಗಳು ಮತ್ತು ಗ್ಲೂಕೋಸ್ ಸಾರಿಗೆ ಪ್ರೋಟೀನ್ಗಳೊಂದಿಗೆ ಸಂವಹನ ನಡೆಸುವ ಮೂಲಕ ಸಣ್ಣ ಕರುಳಿನಿಂದ ಗ್ಲೂಕೋಸ್ ಹೀರಿಕೊಳ್ಳುವುದನ್ನು ನಿಧಾನಗೊಳಿಸಬಹುದು. ಇದಲ್ಲದೆ, ಪಾಲಿಫಿನೋಲಿಕ್ ಸಂಯುಕ್ತಗಳು ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ಸಹ ಕಡಿಮೆ ಮಾಡಬಹುದು.
ಬ್ಲ್ಯಾಕ್ ಕರಂಟ್ ನೈಸರ್ಗಿಕವಾಗಿ ಹುಳಿಯಾಗಿರುತ್ತವೆ ಮತ್ತು ಅದನ್ನು ಸೇವಿಸುವ ಮೊದಲು ಇದಕ್ಕೆ ಸಕ್ಕರೆಯನ್ನು ಸೇರಿಸಬೇಕಾಗಬಹುದು. ಆಹಾರಕ್ರಮದಲ್ಲಿ ಇದನ್ನು ಸೇರಿಸುವ ಕೆಲವು ವಿಧಾನಗಳು ಇಲ್ಲಿವೆ.
ಬ್ಲ್ಯಾಕ್ ಕರಂಟ್ ಮತ್ತು ಮೊಸರು : ಸ್ವಲ್ಪ ಮೊಸರು ಬೀಟ್ ಮಾಡಿ ನಯವಾಗಿಸಿ, ನಂತರ ಬ್ಲ್ಯಾಕ್ ಕರಂಟ್ ಹಣ್ಣುಗಳನ್ನು ಸೇರಿಸಿ ಮತ್ತು ರುಚಿಗೆ ತಕ್ಕಂತೆ ಸಕ್ಕರೆ ಸೇರಿಸಿ. ಅಥವಾ ಎಲ್ಲಾ ಪದಾರ್ಥಗಳನ್ನು ಬ್ಲೆಂಡರ್ನಲ್ಲಿ ಹಾಕಿ ಮಿಶ್ರಣ ಮಾಡಬಹುದು. ಬೆಳಗ್ಗೆ ಇದನ್ನು ಬ್ರೆಡ್ಗೆ ಸ್ಪ್ರೆಡ್ ಮಾಡಿ ಸೇವಿಸಬಹುದು. ಕ್ಷಣಾರ್ಧದಲ್ಲಿ ಸಿದ್ಧವಾಗಬಹುದಾದ ರುಚಿಯಾದ ಮತ್ತು ಆರೋಗ್ಯಕರವಾದ ಆಹಾರ ಇದಾಗಿದೆ.
ಇದನ್ನು ಕೆಂಪು ಎಲೆಕೋಸಿಗೆ ಸೇರಿಸಿ: ಕೆಂಪು ಎಲೆಕೋಸು ಫೈಬರ್ ಮತ್ತು ಜೀವಸತ್ವಗಳಿಂದ ಸಮೃದ್ಧವಾಗಿದೆ ಮತ್ತು ಇದು ಅಧಿಕ ರಕ್ತದ ಸಕ್ಕರೆ ಹೊಂದಿರುವ ರೋಗಿಗಳಿಗೆ ಒಳ್ಳೆಯದು. ಈ ತರಕಾರಿ ಬಳಸುವಾಗ, ಕೆಲವು ಬ್ಲ್ಯಾಕ್ ಕರಂಟ್ ಸೇರಿಸಿ ಮಸಾಲೆ ಸೇರಿಸಿ. ಇದು ಸೇವನೆ ಮಾಡಲು ಚೆನ್ನಾಗಿರುತ್ತದೆ ಮತ್ತು ಹಣ್ಣಿನ ಪರಿಮಳವನ್ನು ನೀಡುತ್ತದೆ. ಶೀತ ಚಳಿಗಾಲದ ದಿನಗಳಿಗೆ ಸೂಕ್ತವಾಗಿದೆ.
ಬೇಯಿಸಿದ ಆಹಾರಗಳಿಗೆ ಸೇರಿಸಿ: ನಿಮಗಾಗಿ ಏನನ್ನಾದರೂ ಮಾಡಲು ಬಯಸಿದ್ದರೆ, ಇದನ್ನು ಟ್ರೈ ಮಾಡಬಹುದು. ಬ್ರೆಡ್ ತಯಾರಿಸಲು ಬಯಸಿದರೆ ಬ್ರೆಡ್ ಗೆ ಆರೋಗ್ಯಕರ ಟ್ವಿಸ್ಟ್ ನೀಡಿ. ಹಿಟ್ಟಿನೊಂದಿಗೆ ಕೆಲವು ಬ್ಲ್ಯಾಕ್ಕರಂಟ್ ಸೇರಿಸಿ. ಬ್ರೆಡ್ ಹಣ್ಣಿನಂತಹ ರುಚಿಯನ್ನು ಪಡೆಯುತ್ತದೆ. ಸೇವಿಸಲು ತುಂಬಾನೇ ಟೇಸ್ಟಿ ಆಗಿರುತ್ತದೆ.
ಮನೆಯಲ್ಲಿ ತಾಜಾ ಬ್ಲ್ಯಾಕ್ ಕರಂಟ್ ಗಳು ಇದ್ದರೆ, ಅದನ್ನು ಆಪಲ್ ಕ್ರಮ್ಬೆಲ್ ಜೊತೆ ಸೇರಿಸಿ ಸೇವಿಸಬಹುದು. ಇದರ ಸುವಾಸನೆ ಚೆನ್ನಾಗಿರುತ್ತದೆ. ಜೊತೆಗೆ ಆರೋಗ್ಯಕ್ಕೆ ಉತ್ತಮ ಫಲಿತಾಂಶ ನೀಡುತ್ತದೆ.