MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ಸೌಂದರ್ಯ ಹೆಚ್ಚಿಸೋದ್ರಿಂದ ಆರೋಗ್ಯ ವೃದ್ಧಿವರೆಗೂ ಕಿತ್ತಳೆ ಹೂವಿಂದ ಎಷ್ಟೆಲ್ಲಾ ಪ್ರಯೋಜವಿದೆ ಗೊತ್ತಾ?

ಸೌಂದರ್ಯ ಹೆಚ್ಚಿಸೋದ್ರಿಂದ ಆರೋಗ್ಯ ವೃದ್ಧಿವರೆಗೂ ಕಿತ್ತಳೆ ಹೂವಿಂದ ಎಷ್ಟೆಲ್ಲಾ ಪ್ರಯೋಜವಿದೆ ಗೊತ್ತಾ?

ಕಿತ್ತಳೆ ಹಣ್ಣನ್ನು ತಿಂದು ಗೊತ್ತಿದೆ, ಅದ್ರ ಸಿಪ್ಪೆಯಿಂದಲೂ ಫೇಸ್ ಪ್ಯಾಕ್, ಟೀ ಮಾಡೋ ಬಗ್ಗೆನೂ ಕೇಳಿರುತ್ತೀರಿ. ಆದರೆ ಯಾವತ್ತಾದರೂ ಕಿತ್ತಳೆ ಹಣ್ಣಿನ ಹೂವಿನ ಪ್ರಯೋಜನಗಳ ಬಗ್ಗೆ ಕೇಳಿದ್ದೂರಾ? ಕಿತ್ತಳೆ ಹೂವು ಅನೇಕ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ. ಇದರ ಆರೋಗ್ಯ ಮತ್ತು ಸೌಂದರ್ಯದ ಪ್ರಯೋಜನಗಳನ್ನು ತಿಳಿದುಕೊಳ್ಳಿ.

2 Min read
Suvarna News
Published : Nov 28 2022, 03:25 PM IST
Share this Photo Gallery
  • FB
  • TW
  • Linkdin
  • Whatsapp
18

ಕಿತ್ತಳೆ ಹಣ್ಣನ್ನು ತಿನ್ನುವ ಅಥವಾ ಕಿತ್ತಳೆ ಸಿಪ್ಪೆಯ ಪ್ಯಾಕ್ ಮಾಡಿ ಮುಖಕ್ಕೆ ಹಚ್ಚುವ ಎರಡೂ ವಿಧಾನಗಳು ಆರೋಗ್ಯ ಮತ್ತು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ ಅನ್ನೋದು ಗೊತ್ತು. ಕಿತ್ತಳೆ ಸಿಪ್ಪೆ ಮತ್ತು ರಸವು ಅನೇಕ ಪೋಷಕಾಂಶಗಳನ್ನು ಹೊಂದಿರುತ್ತದೆ, ಇದು ಆರೋಗ್ಯಕ್ಕೆ ತುಂಬಾನೆ ಪ್ರಯೋಜನಕಾರಿಯಾಗಿದೆ. ಆದರೆ ನೀವು ಎಂದಾದರೂ ಕಿತ್ತಳೆ ಹೂವುಗಳ ಬಗ್ಗೆ ಕೇಳಿದ್ದೀರಾ? ಕಿತ್ತಳೆ ಹೂವಿನ ರಸವು (Orange Blossom Water) ರೋಸ್ ವಾಟರ್ ನಂತೆ ಆರೋಗ್ಯಕರವಾಗಿದೆ. ಇತ್ತೀಚಿನ ದಿನಗಳಲ್ಲಿ ಕಿತ್ತಳೆ ಹೂವುಗಳ ಬಳಕೆಯು ಸಾಕಷ್ಟು ಜನಪ್ರಿಯವಾಗುತ್ತಿದೆ. ಇದನ್ನು ಚಹಾ, ಕೇಕ್, ಕುಕೀಗಳು ಮತ್ತು ಐಸ್ ಕ್ರೀಮ್ ಪರಿಮಳಯುಕ್ತವಾಗಿಸಲು ಬಳಸಲಾಗುತ್ತಿದೆ. ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ. ಇದು ಚರ್ಮದಿಂದ ಹೃದಯದ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದಲ್ಲದೇ ಈ ಹೂವಿನಿಂದ ಇನ್ನು ಏನೆಲ್ಲಾ ಪ್ರಯೋಜನಗಳಿವೆ ತಿಳಿಯೋಣ.

28

ಚರ್ಮಕ್ಕೆ ಬೆಸ್ಟ್ ಟೋನರ್ (Best Skin Toner): ಕಿತ್ತಳೆ ಹೂವಿನ ನೀರು ಚರ್ಮದ ಮೇಲೆ ಅದ್ಭುತ ಪರಿಣಾಮ ಬೀರುತ್ತೆ. ಇದು ಎಣ್ಣೆಯುಕ್ತ ಚರ್ಮಕ್ಕೆ ಉತ್ತಮ ಟೋನರ್ ಆಗಿ ಕೆಲಸ ಮಾಡುತ್ತದೆ. ಕಿತ್ತಳೆ ಹೂವಿನ ರಸವು ತ್ವಚೆಯನ್ನು ಮೃದುವಾಗಿಸುತ್ತೆ. ಆದ್ದರಿಂದ ಇದನ್ನು ಅನೇಕ ಶಿಶು ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಇದು ನೈಸರ್ಗಿಕ ಟೋನರ್ ಆಗಿದ್ದು, ಚರ್ಮವನ್ನು ಮೃದು ಮತ್ತು ನಯವಾಗಿಸಲು ಸಹಾಯ ಮಾಡುತ್ತದೆ.

38
ड्राय कपिंग थेरेपी

ड्राय कपिंग थेरेपी

ಸ್ನಾಯುಗಳಿಗೆ ಆರಾಮ ನೀಡುತ್ತೆ:ಆರೋಮಾ ಥೆರಪಿಯಲ್ಲಿ (Aroma Therapy) ಕಿತ್ತಳೆ ಹೂವಿನ ರಸವನ್ನು ಬಹಳಷ್ಟು ಬಳಸಲಾಗುತ್ತದೆ. ಅದರ ಬಲವಾದ ಪರಿಮಳ ನರಗಳನ್ನು ವಿಶ್ರಾಂತಿಗೊಳಿಸುತ್ತದೆ. ಇದನ್ನು ಸ್ನಾನದ ನೀರಿನಲ್ಲಿ ಹಾಕುವುದರಿಂದ ಒತ್ತಡವನ್ನು ಕಡಿಮೆ ಮಾಡಬಹುದು. ಹೂವಿನ ನೀರು ಸ್ನಾಯುಗಳಿಗೆ ವಿಶ್ರಾಂತಿ ನೀಡುತ್ತದೆ ಮತ್ತು ತಲೆನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

48

ಹೊಟ್ಟೆ ನೋವು, ಅಜೀರ್ಣ ಗುಣಪಡಿಸುತ್ತೆ: ಕಿತ್ತಳೆ ಹೂವಿನ ನೀರನ್ನು ಅನೇಕ ರೀತಿಯಲ್ಲಿ ಬಳಸಬಹುದು. ಇದು ಮಕ್ಕಳಲ್ಲಿ ಅಜೀರ್ಣ ಸಮಸ್ಯೆಯನ್ನು (digestion problem) ತೊಡೆದುಹಾಕಲು ಸಹಾಯ ಮಾಡುತ್ತದೆ, ಅಷ್ಟೇ ಅಲ್ಲ ಇದು ಹೊಟ್ಟೆ ನೋವನ್ನು ಸಹ ಕಡಿಮೆ ಮಾಡುತ್ತದೆ. 

58

ಸ್ಕಿನ್ ಇರಿಟೇಶನ್ (Skin Irritation) ನಿವಾರಣೆ: ಕಿತ್ತಳೆ ಹೂವಿನ ನೀರು ಚರ್ಮದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಸೂಕ್ಷ್ಮ ಮತ್ತು ಎಣ್ಣೆಯುಕ್ತ ಚರ್ಮಕ್ಕೆ ಇದು ಅತ್ಯುತ್ತಮ ಪರಿಹಾರ. ಅನೇಕ ಬಾರಿ ಚರ್ಮದಲ್ಲಿ ಕೆಂಪು ಮಚ್ಚೆಗಳು ಮತ್ತು ಕಿರಿಕಿರಿ ಉಂಟಾಗುತ್ತೆ. ಕಿತ್ತಳೆ ಹೂವನ್ನು ನಿಯಮಿತವಾಗಿ ಬಳಸುವ ಮೂಲಕ ಕಿರಿಕಿರಿಯನ್ನು ಶಾಂತಗೊಳಿಸಬಹುದು. 

68

ಪ್ರಾಣಿಗಳ ಗಾಯ ನಿವಾರಣೆ: ಕಿತ್ತಳೆ ಹೂವಿನ ನೀರು (orange flower water) ಎಷ್ಟು ಹಗುರವಾಗಿದೆಯೆಂದರೆ ಅದನ್ನು ಮಗುವಿನ ಚರ್ಮದ ಆರೈಕೆಗೆ ಮತ್ತು ಪ್ರಾಣಿಗಳ ಗಾಯಗಳನ್ನು ಗುಣಪಡಿಸಲು ಸಹ ಬಳಸಬಹುದು. ಸಾಕುಪ್ರಾಣಿಗೆ ಗಾಯ ಅಥವಾ ಚರ್ಮದ ಸಮಸ್ಯೆ ಉಂಟಾದಾಗ, ಕಿತ್ತಳೆ ಹೂವಿನ ನೀರನ್ನು ಹಚ್ಚುವುದರಿಂದ ಅವುಗಳನ್ನು ಬೇಗನೆ ಗುಣಪಡಿಸಬಹುದು. 

78

ಸನ್ ಟ್ಯಾನ್ (Sun Tan) ನಿವಾರಣೆ: ಕಿತ್ತಳೆ ಹೂವು ಹೈಡ್ರೋಸಾಲನ್ನು ಹೊಂದಿರುತ್ತದೆ, ಇದು ಚರ್ಮದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದು ಚರ್ಮವನ್ನು ಮೃದುವಾಗಿಸುತ್ತದೆ. ಇಷ್ಟೇ ಅಲ್ಲ, ಅದರ ಲೋಷನ್ ಅನ್ನು ಸನ್ ಬರ್ನ್ ಚರ್ಮದ ಮೇಲೆ ಹಚ್ಚುವುದರಿಂದ ಪ್ರಯೋಜನ ಪಡೆಯಬಹುದು. ಇದು ಚರ್ಮದಲ್ಲಿನ ಕಿರಿಕಿರಿಯನ್ನು ಸಹ ಶಾಂತಗೊಳಿಸುತ್ತ

88

ಕೂದಲಿಗೆ ಅತ್ಯುತ್ತಮ ಕಂಡೀಷನರ್ (Best Hair Conditioner): ಕಿತ್ತಳೆ ಹೂವಿನ ನೀರನ್ನು ಅನೇಕ ಕೂದಲಿನ ಆರೈಕೆಯ ಉತ್ಪನ್ನಗಳಲ್ಲಿ ಸಹ ಬಳಸಲಾಗುತ್ತದೆ. ಈ ನೀರು ಕೂದಲನ್ನು ಕಂಡೀಷನಿಂಗ್ ಮಾಡಲು ಸಹಾಯ ಮಾಡುತ್ತದೆ. ಇದರ ನಿಯಮಿತ ಬಳಕೆಯು ಕೂದಲನ್ನು ಹೊಳೆಯುವಂತೆ ಮಾಡುತ್ತದೆ, ಜೊತೆಗೆ ಸ್ಟ್ರಾಂಗ್ ಆಗಿಸಲು ನೆರವಾಗುತ್ತೆ..

About the Author

SN
Suvarna News
ಜೀವನಶೈಲಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved