ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಿಸಲು ಈ ಆಯುರ್ವೇದ ಕ್ರಮಗಳನ್ನು ಅಳವಡಿಸಿಕೊಳ್ಳಿ!

First Published May 29, 2021, 2:54 PM IST

ದೇಶಾದ್ಯಂತ ಕೋವಿಡ್-19 ರೋಗ ಕಾಣಿಸಿಕೊಂಡಿದೆ. ಕೊರೊನಾದ ಮೂರನೇ ಅಲೆಯು ಮಕ್ಕಳಿಗೆ ಹೆಚ್ಚು ಅಪಾಯಕಾರಿ ಎಂದು ಸಾಬೀತುಪಡಿಸಬಹುದು ಎಂದು ಭಯಪಡಲಾಗಿದೆ. ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರು ಕೊರೊನಾ ವೈರಸ್ ನಿಂದಾಗಿ ಹೆಚ್ಚಿನ ತೊಂದರೆಗಳನ್ನು ಎದುರಿಸಬಹುದು. ಕೆಲವು ಆಯುರ್ವೇದ ಕ್ರಮಗಳ ಸಹಾಯದಿಂದ ಮಕ್ಕಳ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಇದರಿಂದ ಅವರು ಯಾವುದೇ ಒಳಬರುವ ಸೋಂಕು ಅಥವಾ ರೋಗದ ವಿರುದ್ಧ ಮುಂಚಿತವಾಗಿ ಹೋರಾಡಲು ಸಿದ್ಧರಾಗಿರುತ್ತಾರೆ. ಮಕ್ಕಳ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದ ಕ್ರಮಗಳ ಬಗ್ಗೆ ತಿಳಿಯಿರಿ..