ಈ ಆಯುರ್ವೇದ ಪದ್ಧತಿಯಿಂದ ದೂರವಾಗುತ್ತೆ ಒತ್ತಡ!
First Published Dec 17, 2020, 5:04 PM IST
ಒತ್ತಡವನ್ನು ತೊಡೆದುಹಾಕಲು ನೀವು ಮಾರ್ಗಗಳನ್ನು ಹುಡುಕುತ್ತಿದ್ದೀರಾ? ಒತ್ತಡವನ್ನು ನಿವಾರಿಸಲು ನಿಮಗೆ ಸಹಾಯ ಮಾಡುವ ಆಯುರ್ವೇದ ಪದ್ಧತಿಗಳು ಇಲ್ಲಿವೆ. ಇವು ನಿಮ್ಮ ಮನಸ್ಸನ್ನು ಹಗುರವನ್ನಾಗಿಸಿ ಒತ್ತಡ ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಅದಕ್ಕಾಗಿ ನೀವು ಯಾವ ಮಾರ್ಗವನ್ನು ಅನುಸರಿಸಬೇಕು ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ...

ಸ್ವಲ್ಪ ಒತ್ತಡವು ದೈನಂದಿನ ಜೀವನದ ಒಂದು ಭಾಗವಾಗಿದ್ದರೂ, ದೀರ್ಘಕಾಲದ ಒತ್ತಡವು ಮಾರಣಾಂತಿಕ ಪರಿಣಾಮಗಳನ್ನು ಉಂಟುಮಾಡುತ್ತದೆ. ಇದು ವಯಸ್ಸಾಗುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಮತ್ತು ಹೃದ್ರೋಗಗಳು, ಮಧುಮೇಹ ಮತ್ತು ಖಿನ್ನತೆಯಂತಹ ಮಾನಸಿಕ ಕಾಯಿಲೆಗಳಿಗೆ ಕಾರಣವಾಗಬಹುದು. ಒತ್ತಡವನ್ನು ನಿಯಂತ್ರಿಸುವುದು ಮುಖ್ಯ, ಮತ್ತು ಅದನ್ನು ನಿರ್ವಹಿಸಲು ಆಯುರ್ವೇದವು ನಿಮಗೆ ಸಹಾಯ ಮಾಡುತ್ತದೆ.

ಶತಮಾನದಷ್ಟು ಹಳೆಯದಾದ ಈ ಅಭ್ಯಾಸವು ಒತ್ತಡ ನಿವಾರಣೆ ಮಾಡಲು ಸಹಾಯಕವಾಗಿದೆ. ಇದು ಮನಸ್ಸು, ದೇಹ ಮತ್ತು ಚೈತನ್ಯವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?