ಗಂಟಲು ನೋವು ತರುವ ಈ ಆಹಾರ ತಿನ್ನಬೇಕಾ?

First Published Mar 10, 2021, 3:59 PM IST

ಹವಾಮಾನ ವೇಗವಾಗಿ ಬದಲಾಗುತ್ತಿದೆ, ಬದಲಾಗುತ್ತಿರುವ ಹವಾಮಾನದಿಂದ ಗಂಟಲಿನ ಮೇಲೆ ಅತ್ಯಂತ ಹೆಚ್ಚಿನ ಪ್ರಭಾವ ಬೀರುತ್ತದೆ. ಈ ಋತುವಿನಲ್ಲಿ ಗಂಟಲು ಕೆರೆತದಿಂದ  ತುಂಬಾ ತೊಂದರೆಗೊಳಗಾಗುತ್ತೇವೆ. ಗಂಟಲು ಕೆರೆತ 2-3 ದಿನಗಳವರೆಗೆ ಇರುತ್ತದೆ. ಇದು ಬ್ಯಾಕ್ಟೀರಿಯಾದಿಂದ ಉಂಟಾಗುವ ಸಮಸ್ಯೆ. ಗಂಟಲು ಕೆರೆತದಿಂದ  ಆಹಾರ ಮತ್ತು ಪಾನೀಯಗಳು ಕೂಡ ಸೇವಿಸಲು ಕಷ್ಟ. ಗಂಟಲಿನ ನೋವು ಮತ್ತು ಕಿರಿಕಿರಿ ಉಂಟು ಮಾಡುತ್ತದೆ, ಏನನ್ನೂ ತಿನ್ನಲು ಮತ್ತು ಕುಡಿಯಲು ಕೂಡ ಕಷ್ಟ. ಅದಕ್ಕೆ ಕೆಲವು ಆಹಾರಗಳನ್ನು ಅವೈಯ್ಡ್ ಮಾಡಿದರೊಳಿತು.