ಕೊರೋನಾ ಯುದ್ಧಕ್ಕೆ ಅಕ್ಷಯ್ 25 ಕೋಟಿ ರೂ, ಮನ ಗೆದ್ದಿತು ಪತ್ನಿಗೆ ನೀಡಿದ ಉತ್ತರ
ಇಡೀ ವಿಶ್ವಕ್ಕೇ ಸಿಂಹಸ್ವಪ್ನವಾಗಿದೆ ಕೊರೋನಾ ವೈರಸ್. ಭಾರತದಲ್ಲಿಯೂ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಸಿನಿ ತಾರೆಯರು ತಮ್ಮ ಕೈಲಾದ ಧನ ಸಹಾಯ ಮಾಡುತ್ತಿದ್ದಾರೆ. ಇಂಥ ಕಾರ್ಯಗಳಲ್ಲಿ ಮೊದಲ ಕೈ ಜೊಡಿಸುವ ಬಾಲಿವುಡ್ ನಟ 25 ಕೋಟಿ ರೂ. ನೆರವು ನೀಡಿದ್ದಾರೆ. ಇಷ್ಟು ಮೊತ್ತದ ಹಣ ಏಕೆ ನೀಡುತ್ತೀರಿ ಎಂದು ಪತ್ನಿ ಟ್ವಿಂಕಲ್ ಖನ್ನಾ ಕೇಳಿದ ಪ್ರಶ್ನೆಗೆ ಅಕ್ಷಯ್ ನೀಡಿರುವ ಉತ್ತರ ಮತ್ತೊಮ್ಮೆ ಭಾರತೀಯರ ಹೃದಯ ಗೆದ್ದಿದೆ.
ನಾವೆಲ್ಲರೂ ನಮ್ಮ ಜನರ ಪ್ರಾಣವನ್ನು ಉಳಿಸಬೇಕಾದ ಸಮಯ ಇದು. ಈ ಕಷ್ಟದ ಸಮಯದಲ್ಲಿ ನಾವು ಅವರಿಗಾಗಿ ಎಲ್ಲವನ್ನೂ ಮಾಡಬೇಕಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನನ್ನ ಉಳಿತಾಯದಿಂದ 25 ಕೋಟಿ ನೀಡುತ್ತಿದ್ದೇನೆ ಎಂದು ಟ್ವೀಟ್ ಮೂಲಕ ಈ ಮಾಹಿತಿಯನ್ನು ನೀಡಿದ ಅಕ್ಷಯ್ ಕುಮಾರ್ .
ಇಷ್ಟು ಮೊತ್ತದ ಬಗ್ಗೆ ಪತ್ನಿ ಟ್ವಿಂಕಲ್ ಕೇಳಿದ ಪ್ರಶ್ನೆಗೆ, 'ನನ್ನ ಕೈಯಲ್ಲಿ ಮೊದಲು ಏನೂ ಇರಲಿಲ್ಲ. ಜನರು ನನ್ನನ್ನು ಈ ಮಟ್ಟಕ್ಕೆ ಬೆಳೆಯಿಸಿದ್ದಾರೆ. ಇದೀಗ ಏನೂ ಇಲ್ಲದ ಜನರಿಗೆ ನನ್ನಿಂದ ಸಣ್ಣ ಸಹಾಯ ಮಾಡುತ್ತಿದ್ದೇನೆ,' ಎಂದಿರುವುದು ಎಲ್ಲರ ಹೃದಯ ಗೆದ್ದಿದೆ.
ಸೌತ್ ಸೂಪರ್‌ಸ್ಟಾರ್ ಚಿರಂಜೀವಿ 1 ಕೋಟಿ ರೂ. ನೀಡಿದ್ದಾರೆ.
ಕಪಿಲ್ ಶರ್ಮಾ 50 ಲಕ್ಷ ರೂ.
1 ಕೋಟಿ ರೂಪಾಯಿ ನೆರವು ನೀಡಿದ ತೆಲಗು ನಟ ಮಹೇಶ್ ಬಾಬು ಘೋಷಣೆ.
ಬಾಹುಬಲಿ ಖ್ಯಾತಿಯ ಪ್ರಭಾಸ್ 1 ಕೋಟಿ ರೂ. ನೆರವು.
50 ಲಕ್ಷ ರೂಪಾಯಿ ದೇನಿಗೆ ನೀಡಿದ ರಜನಿಕಾಂತ್.
ನಟ ಚಿರಂಜೀವಿ ಅವರ ಮಗ ರಾಮ್ ಚರಣ್ 70 ಲಕ್ಷ ರೂ.
52 ಲಕ್ಷ ರೂಪಾಯಿ ಡೋನೆಟ್ ಮಾಡಿರುವ ಕ್ರಿಕೆಟ್ ಸ್ಟಾರ್ ಸುರೇಶ್ ರೈನಾ.
50 ಲಕ್ಷ ನೆರವು ನೀಡಿರುವ ಕ್ರಿಕೆಟ್ ದೇವರು ಸಚ್ಚಿನ್ ತೆಂಡುಲ್ಕರ್.