ಭಾರತದಲ್ಲಿ ಕೈಗೆಟುಕುವ ದರದ xiaomi ಪ್ಯಾಡ್ 7 ಜ.10ಕ್ಕೆ ಬಿಡುಗಡೆ!
ಶಓಮಿ ಬ್ರ್ಯಾಂಡ್ ಭಾರತದಲ್ಲಿ ಸ್ಮಾರ್ಟ್‌ಫೋನ್ ಸೇರಿದಂತೆ ಹಲವು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಇದೀಗ ಭಾರತದಲ್ಲಿ ಕೈಗೆಟುಕುವ ದರದ xiaomi ಪ್ಯಾಡ್ 7 ಬಿಡುಗಡೆ ಮಾಡುತ್ತಿದೆ.

ಚೀನಾದ ಶಓಮಿ ಬ್ರ್ಯಾಂಡ್ ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿದೆ. ಕಡಿಮೆ ಬೆಲೆಯಲ್ಲಿ ಹಲವು ಫೀಚರ್ಸ್, ಉತ್ತಮ ಸ್ಟೋರೇಜ್ ನೀಡುತ್ತಿರುವ xiaomi ಇದೀಗ ಭಾರತದಲ್ಲಿ ಪ್ಯಾಡ್ 7 ಬಿಡುಗಡೆ ಮಾಡುತ್ತಿದೆ. ವಿಶೇಷ ಅಂದರೆ xiaomi ಪ್ಯಾಡ್ 7 ಕೂಡ ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ.
ಜನವರಿ 10ಕ್ಕೆ ಲಾಂಚ್
ಜನವರಿ 10 ರಂದು ಭಾರತದಲ್ಲಿ xiaomi ಪ್ಯಾಡ್ 7 ಬಿಡುಗಡೆಯಾಗುತ್ತಿದೆ. ಅಕ್ಟೋಬರ್ ತಿಂಗಳಲ್ಲಿ ಮೊದಲು ಚೀನಾದಲ್ಲಿ ಬಿಡುಗಡೆಯಾಗಿತ್ತು. ಇದೀಗ ಭಾರತದಲ್ಲಿ ಈ ಟ್ಯಾಬ್ಲೆಟ್ ಬಿಡುಗಡೆಯಾಗುತ್ತಿದೆ. ಹೊಸ xiaomi ಪ್ಯಾಡ್ 7 ಟ್ಯಾಬ್ ಭಾರತದಲ್ಲಿ ಬಿಡುಗಡೆಯಾಗಲು ಇನ್ನು ಕೆಲವು ದಿನ ಮಾತ್ರ. ಇದರೊಂದಿಗೆ ಕುತೂಹಲ ಹೆಚ್ಚಾಗಿದೆ.
ಇ ಕಾಮರ್ಸ್ ಮೂಲಕ ಲಭ್ಯ
xiaomi ಎಲ್ಲಾ ಉತ್ಪನ್ನಗಳು ಇ ಕಾಮರ್ಸ್ ಶಾಪಿಂಗ್ ಮೂಲಕ ಭಾರತದಲ್ಲಿ ಲಭ್ಯವಿದೆ. ಇದು xiaomi ಪ್ಯಾಡ್ 7ಗೂ ಅನ್ವಯಸಲಿದೆ. ಈಗಾಗಲೇ ಅಮೇಜಾನ್ ಭಾರತದಲ್ಲಿ xiaomi ಪ್ಯಾಡ್ 7 ಬಿಡುಗಡೆ ಖಚಿತಪಡಿಸಿದೆ. ಹೀಗಾಗಿ ಬಿಡುಗಡೆಯ ಕ್ಷಣದಿಂದಲೇ ಬುಕಿಂಗ್ ಆರಂಭಗೊಳ್ಳಲಿದೆ.
xiaomi ಪ್ಯಾಡ್ 7 11.2 ಇಂಚಿನ LCD ಸ್ಕ್ರೀನ್ ಹೊಂದಿದೆ. ಇದರಿಂದ 3.2 ರೆಸಲ್ಯೂಶನ್(2,136×3,200 ಪಿಕ್ಸೆಲ್ಸ್) ಕ್ಲಾರಿಟಿ ಸಿಗಲಿದೆ. 144Hz ರಿಫ್ರೆಶ್ ರೇಟ್ ಹಾಗೂ 900 ನಿಟ್ಸ್ ಬ್ರೈಟ್‌ನೆಸ್ ಹೊಂದಿದೆ. ಸ್ನಾಪ್‌ಡ್ರಾಗನ್ 7+ ಜೆನ್ ಪ್ರೊಸೆಸರ್ ಹೊಂದಿದೆ. ಫೋಟೋಗ್ರಫಿಗಾಗಿ 13MP ಕ್ಯಾಮೆರಾ ಹೊಂದಿದೆ.8MP ಫ್ರಂಟ್ ಫೇಸ್ ಕ್ಯಾಮೆರಾ ಆಯ್ಕೆ ಹೊಂದಿದೆ.
xiaomi ಪ್ಯಾಡ್ 7 ಬೆಲೆ
ಬೇಸ್ ಮಾಡೆಲ್ ಅಂದರೆ 8GB + 128GB ವೇರಿಯೆಂಟ್ ಬೆಲೆ 23,500 ರೂಪಾಯಿಯಿಂದ ಆರಂಭಗೊಳ್ಳಲಿದೆ. ಇನ್ನು 8GB + 256GB ಮಾಡೆಲ್ ಬೆಲೆ 26,800 ರೂಪಾಯಿ ಇರಲಿದೆ ಎಂದು ನಿರೀಕ್ಷಿಸಲಾಗಿದೆ. 12GB + 256GB ವರ್ಶನ್ ಬೆಲೆ 30,000 ಎಂದು ಅಂದಾಜಿಸಲಾಗಿದೆ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.