ಸ್ನಾನ ಮಾಡಿದ ನಂತರವೇ ನಾವು ಏಕೆ ಪೂಜೆ ಮಾಡಬೇಕು ಗೊತ್ತಾ?
ಹಿಂದೂ ಧರ್ಮದಲ್ಲಿ, ಪೂಜೆಯನ್ನು ಸ್ನಾನದ ನಂತರ ಮಾತ್ರ ಮಾಡಬೇಕು ಎಂದು ಹೇಳಲಾಗುತ್ತೆ. ಪೂಜೆಗೆ ಸಂಬಂಧಿಸಿದ ಯಾವುದೇ ವಿಧಾನವನ್ನು ಸ್ನಾನದ ನಂತರ ಮಾತ್ರ ಮಾಡಬೇಕೆಂಬ ನಿಯಮವಿದೆ. ಆದ್ದರಿಂದ, ಪೂಜೆಗೆ ಮೊದಲು ಸ್ನಾನ ಏಕೆ ಅವಶ್ಯಕ ಎಂದು ತಿಳಿಯೋಣ.
ಹಿಂದೂ ಧರ್ಮದಲ್ಲಿ ಪೂಜೆಗೆ(Pooja) ಸಂಬಂಧಿಸಿದ ಅನೇಕ ನಿಯಮಗಳಿವೆ. ಪೂಜೆಗೆ ಮೊದಲು ಸ್ನಾನ ಮಾಡುವ ನಿಯಮವು ಈ ನಿಯಮಗಳಲ್ಲಿ ಒಂದಾಗಿದೆ. ಸನಾತನ ಸಂಪ್ರದಾಯದ ಪ್ರಕಾರ, ಪೂಜೆಗೆ ಮೊದಲು ಸ್ನಾನ ಮಾಡುವುದು ಅವಶ್ಯಕ ಎಂದು ಹೇಳಲಾಗುತ್ತೆ.
ಸ್ನಾನ(Bath) ಮಾಡದೆ ಪೂಜಿಸೋದನ್ನು ನಿಷೇಧಿಸಲಾಗಿದೆ. ಆದ್ದರಿಂದ, ಜ್ಯೋತಿಷ್ಯರು ನೀಡಿದ ಮಾಹಿತಿಯ ಪ್ರಕಾರ, ಪೂಜೆಗೆ ಮೊದಲು ಸ್ನಾನ ಮಾಡುವುದು ಏಕೆ ಮುಖ್ಯ ಮತ್ತು ಅದರ ಪ್ರಯೋಜನವೇನು ಎಂದು ತಿಳಿಯೋಣ.
ಪೂಜೆಗೆ ಮೊದಲು ಸ್ನಾನ ಮಾಡುವ ಸಂಪ್ರದಾಯವೆಂದರೆ ಅದು ನಮ್ಮ ದೇಹಕ್ಕೆ(Body) ಸಂಬಂಧಿಸಿದೆ. ಬೆಳಿಗ್ಗೆ, ದೇಹವು ಸೋಮಾರಿತನ ಮತ್ತು ಅಶುದ್ಧತೆಯಿಂದ ತುಂಬಿರುತ್ತೆ. ದೇಹದಲ್ಲಿ ಯಾವುದೇ ಶಕ್ತಿ ಇರೋದಿಲ್ಲ.ಆದ್ದರಿಂದ, ಈ ಸೋಮಾರಿತನ ಮತ್ತು ಅಶುದ್ಧತೆಯನ್ನು ತೆಗೆದುಹಾಕಲು ಸ್ನಾನವು ಏಕೈಕ ಮಾರ್ಗವಾಗಿದೆ.
ಸೋಮಾರಿತನದಿಂದಾಗಿ ನಮ್ಮ ಗಮನವು ಪೂಜೆಯಿಂದ ಬೇರೆಡೆಗೆ ತಿರುಗದಂತೆ ಪೂಜೆಗೆ ಮುಂಚಿತವಾಗಿ ಸ್ನಾನ ಮಾಡಲಾಗುತ್ತೆ. ಸ್ನಾನ ಮಾಡಿದರೆ ಮಂತ್ರ ಪಠಿಸುವಾಗ(Chanting mantra) ಅಥವಾ ಹಾರ ಹಾಕುವಾಗ, ನಾವು ಮಲಗೋದಿಲ್ಲ ಮತ್ತು ಪೂಜೆಯ ನಿಯಮಗಳನ್ನು ಮಧ್ಯದಲ್ಲಿ ಮುರಿಯದೇ ಸರಿಯಾದ ಮಾರ್ಗದಲ್ಲಿ ಮಾಡಲಾಗುತ್ತೆ..
ಇದು ಕೇವಲ ಸ್ವಚ್ಚತೆಯ ಬಗ್ಗೆ ಮಾತ್ರವಲ್ಲ, ಪೂಜೆಗೆ ಮೊದಲು ಸ್ನಾನ ಮಾಡುವ ಇತರ ಅಂಶಗಳಿವೆ ಎಂದು ನಂಬಲಾಗಿದೆ. ನಾವು ರಾತ್ರಿಯಲ್ಲಿ ನಿದ್ರೆಗೆ ಜಾರಿದಾಗ, ನಮ್ಮ ಸುತ್ತಲಿನ ನಕಾರಾತ್ಮಕತೆ(Negativity) ನಮ್ಮನ್ನು ಸುತ್ತುವರೆದಿರುತ್ತೆ.ಪೂಜೆಯ ಸಮಯದಲ್ಲಿ ಈ ನಕಾರಾತ್ಮಕ ಪರಿಣಾಮವನ್ನು ನಿವಾರಿಸಲು, ನಾವು ಬೆಳಿಗ್ಗೆ ಸ್ನಾನ ಮಾಡುತ್ತೇವೆ.
ಇದಲ್ಲದೆ, ಪೂಜೆಯ ಮೊದಲು ಸ್ನಾನ ಮಾಡೋದರಿಂದ ಆಂತರಿಕ ಪ್ರಜ್ಞೆಯನ್ನು ಜಾಗೃತಗೊಳಿಸಬಹುದು. ಪೂಜೆಗೆ ಮೊದಲು ಸ್ನಾನ ಮಾಡುವುದು ಮೆದುಳಿನ(Brain) ಕಾರ್ಯವಿಧಾನಗಳನ್ನು ತೆರೆಯುತ್ತದೆ. ಮನಸ್ಸು ಪ್ರಜ್ಞೆಗೆ ಬರುತ್ತೆ.
ಸ್ನಾನದ ನಂತರ ಪೂಜಿಸುವಾಗ ಈ ಪ್ರಜ್ಞೆ ನಮ್ಮನ್ನು ಆಧ್ಯಾತ್ಮಿಕತೆಯ ಕಡೆಗೆ ಪ್ರೇರೇಪಿಸುತ್ತೆ. ಜಾಗೃತ ಪ್ರಜ್ಞೆಯೊಂದಿಗೆ ಮಂತ್ರಗಳನ್ನು ಪಠಿಸುವುದು ಮಂತ್ರದ ಪರಿಣಾಮವನ್ನು ಆಳಗೊಳಿಸುತ್ತೆ. ಮಂತ್ರದ ಪರಿಣಾಮವು ಮನಸ್ಸು, ಮೆದುಳು ಮತ್ತು ಸುತ್ತಮುತ್ತಲಿನ ಶಕ್ತಿಯ ಮೇಲೆ ಇರುತ್ತೆ.
ಪೂಜೆಗೆ ಮೊದಲು ಸ್ನಾನ ಮಾಡೋದರಿಂದ ಮನಸ್ಸು ಶಾಂತವಾಗುತ್ತೆ(Peace), ಗಮನ ಹೆಚ್ಚಾಗುತ್ತೆ ಮತ್ತು ಸಕಾರಾತ್ಮಕತೆಯನ್ನು ಅನುಭವಿಸಲು ಪ್ರಾರಂಭಿಸುತ್ತೆ. ಈ ಕಾರಣಕ್ಕಾಗಿಯೇ ಪೂಜಿಸುವ ಮೊದಲು ಆಹಾರವನ್ನು ಸೇವಿಸೋದನ್ನು ನಿಷೇಧಿಸಲಾಗಿದೆ. ಈ ಎಲ್ಲಾ ಕಾರಣಗಳಿಂದಾಗಿ ಪೂಜೆಗೆ ಮೊದಲು ಸ್ನಾನ ಮಾಡಲಾಗುತ್ತೆ .