ಗಂಡ ಹೆಂಡ್ತಿ ಒಂದೇ ತಟ್ಟೆಯಲ್ಲಿ ಊಟ ಮಾಡಬಾರದಂತೆ ಯಾಕೆ ಗೊತ್ತಾ?
ಮಹಾಭಾರತದಲ್ಲಿಯೂ ಭೀಷ್ಮ ಪಿತಾಮಹ ಊಟದ ಬಗ್ಗೆ ಹೇಳುತ್ತಾ ಗಂಡ ಹೆಂಡತಿ ಒಂದೇ ತಟ್ಟೆಯಲ್ಲಿ ತಿನ್ನಬಾರದು ಎನ್ನುತ್ತಾರೆ. ಯಾಕೆ ಅನ್ನೋದನ್ನು ತಿಳಿಯಬೇಕು ಅನ್ನೋದಾದ್ರೆ ಈ ಲೇಖನ ಸಂಪೂರ್ಣವಾಗಿ ಓದಿ…
ಹಿಂದೂ ಧರ್ಮಗ್ರಂಥಗಳಲ್ಲಿ (Hindu Holy Books), ಆಹಾರದ ಬಗ್ಗೆ ಅನೇಕ ವಿಷಯಗಳನ್ನು ಹೇಳಲಾಗಿದೆ, ಉದಾಹರಣೆಗೆ ಏನು ತಿನ್ನಬಾರದು ಮತ್ತು ತಿನ್ನುವಾಗ ಯಾವ ವಿಷ್ಯಗಳನ್ನು ನೋಡಿಕೊಳ್ಳಬೇಕು ಇತ್ಯಾದಿ. ಮಹಾಭಾರತದಲ್ಲಿಯೂ ಭೀಷ್ಮ ಪಿತಾಮಹನು ಈ ವಿಷಯದಲ್ಲಿ ಪಾಂಡವರಿಗೆ ಹೇಳಿದ್ದಾನೆ. ಅವುಗಳ ಬಗ್ಗೆ ತಿಳಿಯೋಣ.
ಊಟ ಮಾಡುವಾಗ ಈ ವಿಷಯ ನೆನಪಿರಲಿ: ಮಹಾಭಾರತದಲ್ಲಿ ಭೀಷ್ಮ ಪಿತಾಮಹ (Bheeshma) ಊಟದ ಕುರಿತು ಹಲವಾರು ವಿಶೇಷ ವಿಷಯಗಳ ಬಗ್ಗೆ ಮಾಹಿತಿಗಳನ್ನು ನೀಡಿದ್ದಾರೆ. ಅಷ್ಟೇ ಅಲ್ಲ ಇವರು ಯಾವ ವಿಷ್ಯಗಳನ್ನು ಊಟ ಮಾಡುವಾಗ ನೆನಪಿಟ್ಟುಕೊಳ್ಳಬೇಕು ಎನ್ನುವ ಬಗ್ಗೆ ಸಹ ಮಾಹಿತಿ ನೀಡಿದ್ದಾರೆ.
ಭೀಷ್ಮ ಪಿತಾಮಹ ಹೇಳುವಂತೆ ಊಟ ಮಾಡುವಾಗ ಯಾವುದೇ ವ್ಯಕ್ತಿ ಗೊತ್ತಿದ್ದೋ, ಗೊತ್ತಿಲ್ಲದೆಯೋ ಊಟದ ತಟ್ಟೆಯನ್ನು ದಾಟಿದರೆ, ಆ ತಟ್ಟೆಯಲ್ಲಿ (cross the plate) ಯಾರೂ ಸಹ ಊಟ ಮಾಡಬಾರದು. ಆ ಊಟವನ್ನು ತಿನ್ನೋದಕ್ಕೆ ಯೋಗ್ಯವಲ್ಲ ಎಂದು ಪರಿಗಣಿಸಲಾಗುತ್ತದೆ.
ಊಟ ಮಾಡುವ ಸಮಯದಲ್ಲಿ ಆಹಾರದಲ್ಲಿ ಒಂದು ವೇಳೆ ಕೂದಲು ಸಿಕ್ಕಿಬಿದ್ದರೆ ಆ ಊಟವನ್ನು ಕೂಡಲೇ ಬಿಡಬೇಕು. ಯಾಕೆಂದರೆ ಅಂತಹ ಊಟ ಮಾಡೊದರಿಂದ ಮನೆಯಲ್ಲಿ ದಾರಿದ್ರ್ಯ ಉಂಟಾಗುತ್ತೆ ಎನ್ನಲಾಗುತ್ತದೆ.
ಒಂದು ವೇಳೆ ಅಪ್ಪಿ ತಪ್ಪಿ ಯಾರದಾದರೂ ಕಾಲು ಅನ್ನದ ತಟ್ಟೆಗೆ ತಾಗಿದರೆ, ಅದನ್ನು ಕೂಡಲೇ ಬಿಟ್ಟು ಎದ್ದು ನಿಲ್ಲಬೇಕು. ಧರ್ಮ ಗ್ರಂಥಗಳ ಅನುಸಾರ ಅಂತಹ ತಟ್ಟೆಯಲ್ಲಿ ಮಾಡಿದ ಊಟ ಮಲಕ್ಕೆ ಸಮಾನ ಎನ್ನಲಾಗುತ್ತಂತೆ.
ಇಷ್ಟೇ ಅಲ್ಲ ಪತಿ ಪತ್ನಿಯರು ಸಹ ಒಂದೇ ತಟ್ಟೆಯಲ್ಲಿ ಯಾವತ್ತೂ ಊಟ ಮಾಡಬಾರದು. ಇಂತಹ ಭೋಜನವನ್ನು ಮದಿರ ಅಥವಾ ಮದ್ಯಕ್ಕೆ ಸಮಾನ ಎನ್ನಲಾಗುತ್ತದೆ. ಇದರಿಂದಾಗಿ ಮನೆ, ಸಂಸಾರದಲ್ಲಿ ಕಲಹ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತೆ.