Romantic Zodiac Signs: ಈ ರಾಶಿಯವರು ಸಿಕ್ಕಾಪಟ್ಟೆ ರೋಮ್ಯಾಂಟಿಕ್!
ಕೆಲವೊಂದು ರಾಶಿಯ ಜನರು ಸಿಕ್ಕಾಪಟ್ಟೆ ಕೋಪ ಮಾಡಿಕೊಳ್ಳುತ್ತಾರೆ, ಕೆಲವೊಂದು ರಾಶಿಯ ಜನ ಸಖತ್ ಕೂಲ್ ಆಗಿರುತ್ತಾರೆ. ಆದರೆ ಯಾವ ರಾಶಿಯ ಜನರು ತುಂಬಾನೆ ರೊಮ್ಯಾಂಟಿಕ್ ಆಗಿರುತ್ತಾರೆ ಅನ್ನೋದು ಗೊತ್ತಾ ನಿಮಗೆ?
ಸ್ವಭಾವತಃ ಕೂಲ್ ಆಗಿರುವ ಅಥವಾ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಎಕ್ಸ್ ಪರ್ಟ್ ಆಗಿರುವ ಜನರನ್ನ ನಾವು ನೋಡಿದ್ದೇವೆ. ಆದರೆ ಷೇಕ್ಸ್ಪಿಯರ್ನಂತೆ ನಿಮ್ಮ ಬಗ್ಗೆ ಬರೆಯಬಲ್ಲ, ನಿಮಗಾಗಿ ಹಾಡು ಹೇಳಬಲ್ಲ, ತುಂಬಾನೆ ರೊಮ್ಯಾಂಟಿಕ್ ವ್ಯಕ್ತಿ ಯಾರಾಗಿರ್ತಾರೆ ಗೊತ್ತಾ? ನಾವು ರಾಶಿಚಕ್ರ ಚಿಹ್ನೆ ಪ್ರಕಾರ ಹೋದರೆ, ಅಂತಹ 5 ರಾಶಿಚಕ್ರಗಳು ಇಲ್ಲಿವೆ, ಅವು ತುಂಬಾನೆ ರೊಮ್ಯಾಂಟಿಕ್ (romantic zodiac signs) ಆಗಿರುವ ರಾಶಿಗಳು.
ಮೀನ ರಾಶಿ (Pisces): ಮೀನ ರಾಶಿಯವರು ಸೂಕ್ಷ್ಮ, ಅರ್ಥಗರ್ಭಿತ ಮತ್ತು ಸಹಾನುಭೂತಿಗೆ ಹೆಸರುವಾಸಿಯಾಗಿದ್ದಾರೆ. ಅವರು ತಮ್ಮದೇ ಆದ ಕನಸಿನ ಜಗತ್ತಿನಲ್ಲಿ ವಾಸಿಸುತ್ತಾರೆ ಮತ್ತು ಸೌಂದರ್ಯದ ಬಗ್ಗೆ ಮೆಚ್ಚುಗೆ ಹೊಂದಿದ್ದಾರೆ, ಇದು ಅವರನ್ನು ತುಂಬಾ ರೊಮ್ಯಾಂಟಿಕ್ ಆಗಿಸುತ್ತೆ. ಭ್ರಮೆ ಮತ್ತು ಕಾಲ್ಪನಿಕತೆಯ ಗ್ರಹವಾದ ನೆಪ್ಚೂನ್ ನಿಂದ ಆಳಲ್ಪಡುವ ಮೀನ ರಾಶಿಯವರು ಸ್ಪಷ್ಟವಾದ ಕಲ್ಪನೆ ಮತ್ತು ತಮ್ಮ ಸಂಗಾತಿಯನ್ನು ಆಕರ್ಷಿಸುವ ಗುಣ ಹೊಂದಿರುತ್ತಾರೆ. ಆದಾಗ್ಯೂ, ಇದು ಅವರ ನಿರೀಕ್ಷೆಗಳನ್ನು ಪೂರೈಸದಿದ್ದರೆ ನಿರಾಶೆಗೆ ಒಳಗಾಗಬಹುದು.
ಕರ್ಕಾಟಕ ರಾಶಿ (Cancer): ಕರ್ಕಾಟಕ ರಾಶಿಯವರು ಹೆಚ್ಚು ಇಮೋಷನಲ್ ಆಗಿರುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಪ್ರೀತಿಪಾತ್ರರಿಗೆ ಆದ್ಯತೆ ನೀಡುವ ಪಾರ್ಟ್ನರ್ ಆಗಿ ಅವರು ಹೆಸರುವಾಸಿಯಾಗಿದ್ದಾರೆ. ಚಂದ್ರನಿಂದ ಆಳಲ್ಪಡುವ ಕರ್ಕಾಟಕ ರಾಶಿಯವರು ತಮ್ಮ ಆಂತರಿಕ ಜೀವನದೊಂದಿಗೆ ಬಲವಾದ ಸಂಪರ್ಕವನ್ನು ಬೆಳೆಸಿಕೊಳ್ಳುತ್ತಾರೆ. ಅವರು ರೊಮ್ಯಾನ್ಸ್ ಮತ್ತು ರಿಲೇಶನ್ ಶಿಪ್ ಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ.
ವೃಷಭ ರಾಶಿ (Taurus): ಈ ಭೂಮಿಯ ಚಿಹ್ನೆಯು ಆರಾಮ, ಐಷಾರಾಮಿಯನ್ನು ಇಷ್ಟ ಪಡುತ್ತೆ. ವೃಷಭ ರಾಶಿಯವರು ತಮ್ಮ ಸ್ಥಿರ ನಿಷ್ಠೆ ಮತ್ತು ಬಲವಾದ, ಲಾಂಗ್ ಟೈಮ್ ರಿಮೇಶನ್ ಶಿಪ್ ಉಳಿಸುವ ವ್ಯಕ್ತಿಯಾಗಿರುತ್ತಾರೆ. ಅವರು ಪ್ರೀತಿ ಮತ್ತು ಸೌಂದರ್ಯದ ಗ್ರಹವಾದ ಶುಕ್ರನಿಂದ ಆಳಲ್ಪಡುತ್ತಾರೆ, ಇದು ಅವರನ್ನು ಹೆಚ್ಚು ರೋಮ್ಯಾಂಟಿಕ್ ಆಗಿಸುತ್ತೆ. ಅವರು ಸಾಮಾನ್ಯವಾಗಿ ಅದ್ದೂರಿ ಉಡುಗೊರೆಗಳು ಅಥವಾ ರೊಮ್ಯಾಂಟಿಕ್ ಸ್ಥಳಗಳನ್ನು ಇಷ್ಟಪಡುತ್ತಾರೆ.
ತುಲಾ ರಾಶಿ (Libra): ತುಲಾ ರಾಶಿಯವರು ತಮ್ಮ ಎಲ್ಲಾ ರಿಲೇಶನ್ ಶಿಪ್ ಗಳಲ್ಲಿ ನ್ಯಾಯಸಮ್ಮತತೆ ಮತ್ತು ಸಹಕಾರಕ್ಕೆ ಆದ್ಯತೆ ನೀಡುತ್ತಾರೆ. ಶುಕ್ರನಿಂದ ಆಳಲ್ಪಡುವ ತುಲಾ ರಾಶಿಯವರು ಸೌಂದರ್ಯವನ್ನು ಇಷ್ಟ ಪಡುವ ಹೆಚ್ಚು ರೋಮ್ಯಾಂಟಿಕ್ ಮತ್ತು ಕಲಾತ್ಮಕ ವ್ಯಕ್ತಿಗಳು. ಸಂಸ್ಕೃತಿ ಮತ್ತು ಕಲೆಗಳ ಮೇಲಿನ ತಮ್ಮ ಪ್ರೀತಿಯನ್ನು ಹಂಚಿಕೊಳ್ಳುವ ಸಂಗಾತಿಗಳ ಕಡೆಗೆ ಅವರು ಆಕರ್ಷಿತರಾಗಬಹುದು.
ವೃಶ್ಚಿಕ (Scorpio): ವೃಶ್ಚಿಕ ರಾಶಿಯು ತೀವ್ರ, ಭಾವೋದ್ರಿಕ್ತ ಮತ್ತು ಆಳವಾದ ಭಾವನಾತ್ಮಕತೆಗೆ ಹೆಸರುವಾಸಿಯಾದ ಚಿಹ್ನೆಯಾಗಿದೆ. ಈ ರಾಶಿಯವರು ಸಾಮಾನ್ಯವಾಗಿ ಬೌದ್ಧಿಕವಾಗಿ ಮತ್ತು ಭಾವನಾತ್ಮಕವಾಗಿ ಸವಾಲು ಹಾಕುವ ಸಂಗಾತಿ ಕಡೆಗೆ ಆಕರ್ಷಿತರಾಗುತ್ತಾರೆ,ಇವರು ರೊಮ್ಯಾನ್ಸ್ ಮತ್ತು ಸೆಕ್ಸ್ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ.