Navaratri Tips: ನವರಾತ್ರಿ ಸಮಯದಲ್ಲಿ ಈ ಕೆಲಸಗಳನ್ನು ಮಾಡಲೇಬೇಡಿ
ನವರಾತ್ರಿ ಸೆಪ್ಟೆಂಬರ್ 26, 2022 ರಂದು ಪ್ರಾರಂಭ ಆಗಿದೆ. ಈ ಸಮಯದಲ್ಲಿ ಹತ್ತು ದಿನಗಳ ಕಾಲ ದುರ್ಗೆಯನ್ನು ವಿವಿಧ ರೀತಿಯಲ್ಲಿ ಪೂಜಿಸಲಾಗುತ್ತೆ. ಆದರೆ ನವರಾತ್ರಿಯಲ್ಲಿ ದೇವಿಯನ್ನು ಪೂಜಿಸುವ ಮುನ್ನ ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿದಿರಬೇಕಾದುದು ಮುಖ್ಯ. ಯಾಕೆಂದರೆ ನಾವು ಮಾಡುವ ಕೆಲವೊಂದು ಕ್ರಮಗಳು ದೇವಿಗೆ ಕೋಪ ತರಿಸಬಹುದು. ಆದುದರಿಂದ ನವರಾತ್ರಿಯಲ್ಲಿ ಯಾವ ಕೆಲಸವನ್ನು ಮಾಡುವುದು ಸೂಕ್ತ ಮತ್ತು ಯಾವ ಕೆಲಸಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಅನ್ನೋದನ್ನು ನೋಡೋಣ.
ತಾಯಿಯನ್ನು ಮೆಚ್ಚಿಸಲು ಘಟಸ್ಥಾಪನ, ಅಖಂಡ ಜ್ಯೋತಿ, ಆರತಿ, ಭಜನೆಯನ್ನು 9 ದಿನಗಳ ಕಾಲ ನಡೆಸಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ, ದುರ್ಗಾ ಮಾತೆಯ ಆರಾಧನೆಯಲ್ಲಿ ನಿಯಮಗಳ (Navratri 2022 rituals) ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತದೆ. ಯಾಕೆಂದರೆ ನೀವು ಮಾಡುವ ತಪ್ಪಿನಿಂದಾಗಿ, ಉಪವಾಸ ಮತ್ತು ಆರಾಧನೆಯು ವ್ಯರ್ಥವಾಗುತ್ತದೆ, ಭವಿಷ್ಯದಲ್ಲಿ, ಅದರ ಪರಿಣಾಮಗಳನ್ನು ಸಹ ಎದುರಿಸಬೇಕಾಗುತ್ತದೆ. ನವರಾತ್ರಿಯಲ್ಲಿ ದೇವಿಯನ್ನು ಪೂಜಿಸುವಾಗ ಯಾವ ಮುನ್ನೆಚ್ಚರಿಕೆಗಳನ್ನು ಇಡಬೇಕು ಎಂದು ತಿಳಿಯೋಣ. ನವರಾತ್ರಿಯಲ್ಲಿ ಯಾವ ಕೆಲಸಗಳನ್ನು ಮಾಡಲು ಸೂಕ್ತ ಮತ್ತು ಯಾವ ಕೆಲಸಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ನವರಾತ್ರಿಯ ಸಮಯದಲ್ಲಿ ಏನು ಮಾಡಬೇಕು
ನವರಾತ್ರಿಯನ್ನು ಮನೆಯನ್ನು ಶುಚಿಗೊಳಿಸಿದ ನಂತರ, ಮನೆಯ ಬಾಗಿಲಿಗೆ ಅರಿಶಿನ, ಕುಂಕುಮದಿಂದ ತಾಯಿಯ ಹೆಜ್ಜೆಗುರುತುಗಳನ್ನು ಮಾಡಿ. ಬಾಗಿಲಿನ ಎರಡೂ ಬದಿಗಳಲ್ಲಿ ಸ್ವಸ್ತಿಕವನ್ನು ಚಿತ್ರಿಸಬೇಕು. ಇದರಿಂದ ತಾಯಿ ಸಂತೋಷಗೊಳ್ಳುತ್ತಾಳೆ ಎಂದು ನಂಬಲಾಗಿದೆ.
ನೀವು ದುರ್ಗಾ ಮಾತೆಯನ್ನು ಪೂಜಿಸುವಾಗಲೆಲ್ಲಾ, ಎಲ್ಲಾ ವಸ್ತುಗಳನ್ನು ನಿಮ್ಮೊಂದಿಗೆ ಇರಿಸಿಕೊಳ್ಳಿ, ಇದರಿಂದ ನೀವು ಮತ್ತೆ ಮತ್ತೆ ಪೂಜೆಯಲ್ಲಿ ಎದ್ದೇಳಬೇಕಾಗಿಲ್ಲ. ಆರಾಧನೆಯಿಂದ ಮಧ್ಯದಲ್ಲಿ ಎದ್ದೇಳುವುದು ಒಳ್ಳೆಯದು ಎಂದು ಪರಿಗಣಿಸಲಾಗುವುದಿಲ್ಲ. ಇದರಿಂದ ದೇವಿಯೂ ಕೋಪಗೊಳ್ಳುತ್ತಾಳೆ.
ಬೆಳಿಗ್ಗೆ ಮತ್ತು ಸಂಜೆ ದೇವಿಯ ಆರತಿಯನ್ನು ಮಾಡಿ. ನವರಾತ್ರಿಯಲ್ಲಿ ಪ್ರತಿದಿನದ ವಿವಿಧ ಬಣ್ಣಗಳು ವಿಶೇಷ ಮಹತ್ವವನ್ನು ಹೊಂದಿವೆ. ಅಲ್ಲದೆ, ಪ್ರತಿದಿನ ತಾಯಿಗೆ ತನ್ನ ನೆಚ್ಚಿನ ವಸ್ತುಗಳನ್ನು ನೀಡಿ.
ಈಶಾನ್ಯ ಮೂಲೆ(north east) ಯಲ್ಲಿ ದೇವಿಯನ್ನು ಪೂಜಿಸಿ. ಆರಾಧನಾ ಸ್ಥಳದಲ್ಲಿ ಆಗ್ನೇಯ ದಿಕ್ಕಿನಲ್ಲಿ ಅಖಂಡ ಜ್ಯೋತಿಯನ್ನು ಇರಿಸಿ. ಕಲಶ ಪ್ರತಿಷ್ಠಾಪನೆಯನ್ನು ಶುಭ ಸಮಯದಲ್ಲಿ ಮಾತ್ರ ಮಾಡಬೇಕು.
ನೀವು ಉಪವಾಸ (fasting) ಮಾಡೋದಾದರೆ ಹಣ್ಣುಗಳು, ಜ್ಯೂಸ್, ಹಾಲು ಕುಡಿಯಬಹುದು. ಉಪ್ಪಿನಂಶವಿರುವ ವಸ್ತುಗಳನ್ನು ಸೇವಿಸಬಾರದು.
ಅಖಂಡ ಜ್ಯೋತಿಗೆ ನಿಯಮಿತವಾಗಿ ತುಪ್ಪ ಅಥವಾ ಎಣ್ಣೆಯನ್ನು ಹಾಕುತ್ತಲೇ ಇರಿ. ದೇವಿಯನ್ನು ಪೂಜಿಸಿದ ನಂತರ, ದುರ್ಗಾ ಸಪ್ತಶತಿ ಮತ್ತು ದುರ್ಗಾ ಚಾಲೀಸಾ ಮತ್ತು ಭಜನೆಗಳನ್ನು ಪಠಿಸಿ. ಆಗ ಮಾತ್ರ ನೀವು ಉಪವಾಸದ ಫಲಗಳನ್ನು ಪಡೆಯುತ್ತೀರಿ.
ನವರಾತ್ರಿಯಲ್ಲಿ ಕನ್ಯಾ ಪೂಜೆಯನ್ನು ವಿಶೇಷವಾಗಿ ಫಲಪ್ರದವೆಂದು ಪರಿಗಣಿಸಲಾಗುತ್ತದೆ. ಅಷ್ಟಮಿ ಅಥವಾ ನವಮಿಯ ದಿನದಂದು, ಒಂಬತ್ತು ಹುಡುಗಿಯರನ್ನು ಪೂಜಿಸಿ ಮತ್ತು ಅವರಿಗೆ ಆಹಾರ ನೀಡಿ.
ಬಾರ್ಲಿಯನ್ನು ಬಿತ್ತಲು ಸ್ವಚ್ಛವಾದ ಮಣ್ಣು ಮತ್ತು ಮಣ್ಣಿನ ಮಡಕೆಯನ್ನು ಮಾತ್ರ ಬಳಸಿ. ನವರಾತ್ರಿ ಪೂಜೆಯ ಕೊನೆಯಲ್ಲಿ, ನದಿಯಲ್ಲಿ ಇವುಗಳನ್ನು ಹರಿಯಬಿಡುವುದು ಉತ್ತಮವೆಂದು ಪರಿಗಣಿಸಲಾಗಿದೆ.
ನವರಾತ್ರಿಯ ಸಮಯದಲ್ಲಿ ಏನು ಮಾಡಬಾರದು
ನವರಾತ್ರಿಯಲ್ಲಿ ಪರಿಶುದ್ಧತೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ. ದೇಹ ಮತ್ತು ಮನಸ್ಸು ಎರಡರ ಪರಿಶುದ್ಧತೆ ಬಹಳ ಮುಖ್ಯ. ಒಂಬತ್ತು ದಿನಗಳವರೆಗೆ ಮನೆ ತುಂಬಾ ಸ್ವಚ್ಚವಾಗಿರುವಂತೆ ನೋಡಿ.
ಪ್ರತಿದಿನ ಸ್ನಾನದ ನಂತರ ಸ್ವಚ್ಛವಾಗಿ ತೊಳೆದ ಬಟ್ಟೆಗಳನ್ನು ಧರಿಸಿ. ಯಾರ ಮನಸ್ಸಿನಲ್ಲಿಯೂ ಕೆಟ್ಟ ಆಲೋಚನೆಗಳನ್ನು ತರಬೇಡಿ.
meditation
ಮಂತ್ರ ಪಠಣವು ದೇವಿಯನ್ನು ಮೆಚ್ಚಿಸಲು ಬಹಳ ಸರಳವಾದ ಪೂಜೆಯಾಗಿದೆ, ಆದರೆ ನಿಮ್ಮ ಸ್ವಂತ ಹಾರದಿಂದ ಮಾತ್ರ ಪಠಿಸಿ. ಮಂತ್ರ ಪಠಣಕ್ಕಾಗಿ (chanting) ಮಂತ್ರಗಳನ್ನು ಜೋರಾಗಿ ಪಠಿಸಬೇಡಿ. ನಿಮ್ಮ ಮನಸ್ಸಿನಲ್ಲಿ ಮಂತ್ರ ಪಠಿಸಿ.
ಪೂಜೆಯಲ್ಲಿ ದೇವಿಗೆ ಗರಿಕೆ ಹುಲ್ಲನ್ನು ಅರ್ಪಿಸಬೇಡಿ. ದುರ್ಗಾ ಮಾತೆಯ ಆರಾಧನೆಯಲ್ಲಿ ಗರಿಕೆಯನ್ನು ನಿಷೇಧಿಸಲಾಗಿದೆ.
ಘಟಸ್ಥಪನ ಮತ್ತು ಅಖಂಡ ಜ್ಯೋತಿ ಇರಿಸುವ ಮನೆಗಳಲ್ಲಿ ಅಥವಾ ಉಪವಾಸ ಮಾಡುವವರು 9 ದಿನಗಳ ಕಾಲ ಶಾರೀರಿಕ ಸಂಬಂಧ (physical relationship) ಬೆಳೆಸಬಾರದು. ಬ್ರಹ್ಮಚರ್ಯವನ್ನು ಅನುಸರಿಸಿ, ಇಲ್ಲದಿದ್ದರೆ ನೀವು ದೇವಿಯ ಅನುಗ್ರಹ ಪಡೆಯೋದಿಲ್ಲ, ಆದುದರಿಂದ ಈ ಬಗ್ಗೆ ನೀವು ಸರಿಯಾದ ನಿಯಮ ಪಾನೆ ಮಾಡೋದು ಉತ್ತಮ..
9 ದಿನಗಳ ಕಾಲ ಮನೆಯಲ್ಲಿ ಸಾತ್ವಿಕ ಆಹಾರ ತಯಾರಿಸಿ. ಒಂದು ಸಮಯದಲ್ಲಿ ಹಣ್ಣುಗಳನ್ನು ತಿನ್ನಿ. ಮಾಂಸ, ಮದ್ಯ ಸೇವನೆಯನ್ನು ನಿಷೇಧಿಸಲಾಗಿದೆ. ಇದನ್ನು ಮಾಡೋದ್ರಿಂದ ನೀವು ದೇವಿಯ ಕೋಪವನ್ನು ಎದುರಿಸಬೇಕಾಗಬಹುದು.
ಮಹಿಳೆಯರನ್ನು ಎಂದಿಗೂ ಅವಮಾನಿಸಬಾರದು, ಅದರಲ್ಲೂ ವಿಶೇಷವಾಗಿ ನವರಾತ್ರಿಯಲ್ಲಿ ಮಹಿಳೆಯರು ಮತ್ತು ಹುಡುಗಿಯರನ್ನು ನಿಂದಿಸಬೇಡಿ. ಅವರೊಂದಿಗೆ ಅನುಚಿತವಾಗಿ ವರ್ತಿಸುವುದೂ ಸರಿಯಲ್ಲ. ಹೀಗೆ ಮಾಡಿದಾಗ ದೇವಿ ಕೋಪಗೊಳ್ಳುತ್ತಾಳೆ.