Navratri 2023: ಒಂಬತ್ತು ದಿನಗಳಲ್ಲಿ ಯಾವ ದೇವಿಯನ್ನು ಪೂಜಿಸಬೇಕು, ವಿಶೇಷತೆ ಏನು?
ನವರಾತ್ರಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಇನ್ನೇನು ನವರಾತ್ರಿ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಇಂದು ನಾವು ಈ ಹಬ್ಬದ ಬಗ್ಗೆ ಕೆಲವು ಆಸಕ್ತಿದಾಯಕ ವಿಷಯಗಳನ್ನು ನಿಮಗೆ ಹೇಳಲಿದ್ದೇವೆ.
ನವರಾತ್ರಿ ಹಬ್ಬವು ಬಹಳ ವಿಶೇಷ. ಈ ಹಬ್ಬದಲ್ಲಿ, ಶಕ್ತಿ, ದೇವಿ, ದುರ್ಗಾ ದೇವಿಯ (Durga Devi) ಒಂಬತ್ತು ರೂಪಗಳನ್ನು 9 ದಿನಗಳ ಕಾಲ ಪೂಜಿಸಲಾಗುತ್ತದೆ. ಅದೇ ಸಮಯದಲ್ಲಿ, ಹತ್ತನೇ ದಿನವನ್ನು ದಸರಾ ಎಂದು ಪೂಜಿಸಲಾಗುತ್ತದೆ. ನವರಾತ್ರಿಯ ಸಂದರ್ಭದಲ್ಲಿ ನಾವೆಲ್ಲರೂ ದುರ್ಗಾ ಮಾತೆಯ ವಿಗ್ರಹಗಳನ್ನು ಸ್ಥಾಪಿಸಲಾಗುತ್ತೆ. ಈ ಹಬ್ಬಕ್ಕೆ ಸಂಬಂಧಿಸಿದ ಅನೇಕ ವಿಷಯಗಳು ಅನೇಕ ಜನರಿಗೆ ತಿಳಿದಿಲ್ಲ. ಇಂದು ನಾವು ಇದರ ಬಗ್ಗೆ ವಿವರವಾಗಿ ಹೇಳಲಿದ್ದೇವೆ.
ನವರಾತ್ರಿಯ (Navratri) ಒಂಬತ್ತು ದಿನಗಳ ಉತ್ಸವವು ಅಕ್ಟೋಬರ್ 15 ರ ಭಾನುವಾರದಿಂದ ಪ್ರಾರಂಭವಾಗುತ್ತದೆ. ಈ ಉತ್ಸವ ಅಕ್ಟೋಬರ್ 23 ರವರೆಗೆ ನಡೆಯಲಿದೆ. ಈ ಹಬ್ಬದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ. ಇಲ್ಲಿದೆ ಸಂಪೂರ್ಣ ಮಾಹಿತಿ.
ನವರಾತ್ರಿ ಪದದ ಅರ್ಥ
ನವರಾತ್ರಿ ಎಂಬ ಪದವು ಎರಡು ಪದಗಳ ಸಂಯೋಜನೆ. ನವರಾತ್ರಿ ಅಂದರೆ ಒಂಬತ್ತು ರಾತ್ರಿಗಳು (nine nights) ಮತ್ತು ಒಂಬತ್ತು ಹಗಲುಗಳನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ಆಚರಿಸಲಾಗುವ ಮೂರು ಪ್ರಮುಖ ನವರಾತ್ರಿಗಳೆಂದರೆ ಶರದ್ ನವರಾತ್ರಿ, ಬಸಂತ್ ನವರಾತ್ರಿ, ಆಷಾಡ ನವರಾತ್ರಿ. ಆಷಾಢ ನವರಾತ್ರಿ ಅತ್ಯಂತ ಪ್ರಮುಖ ಎಂದು ನಂಬಲಾಗಿದೆ.
ನವರಾತ್ರಿ ಮಂಗಳಕರ ಹಬ್ಬ
ನವರಾತ್ರಿಯ ಸಮಯದಲ್ಲಿ ನೀವು ಪ್ರತಿದಿನ ರಾತ್ರಿ ಪೂಜೆ ಮಾಡಿದರೆ, ಅದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲ, ನವರಾತ್ರಿಯ ಸಮಯದಲ್ಲಿ ಕನ್ಯೆ ನಿಮಗೆ ನಾಣ್ಯವನ್ನು ನೀಡಿದರೆ ಅದನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಪಶ್ಚಿಮ ಬಂಗಾಲ, ಗುಜರಾತ್ ಮತ್ತು ಕರ್ನಾಟಕದಲ್ಲಿ ನವರಾತ್ರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತೆ.
ನವರಾತ್ರಿಯ ಮಹತ್ವ
ಶರದ್ ನವರಾತ್ರಿಯು ಆಧ್ಯಾತ್ಮಿಕ ಮಹತ್ವ ಹೊಂದಿದೆ, ಏಕೆಂದರೆ ಈ ಮೊದಲ ಒಂಬತ್ತು ದಿನಗಳಲ್ಲಿ, ದುರ್ಗಾ ದೇವಿಯು ತನ್ನ ಭಕ್ತರೊಂದಿಗೆ ಇರಲು ಭೂಮಿಗೆ ಬರುತ್ತಾಳೆ ಎಂದು ನಂಬಲಾಗಿದೆ. ಅನೇಕ ಭಕ್ತರು ಈ ಸಮಯದಲ್ಲಿ ಮಾಂಸಾಹಾರ ಮತ್ತು ಮದ್ಯ ಸೇವಿಸುವುದನ್ನು ತಪ್ಪಿಸುತ್ತಾರೆ. ಸಾತ್ವಿಕ ಆಹಾರವನ್ನು ಸೇವಿಸುವ ಈ ಒಂಬತ್ತು ದಿನಗಳಲ್ಲಿ ಕೆಲವು ಭಕ್ತರು ಉಪವಾಸವನ್ನು ಆಚರಿಸುತ್ತಾರೆ.
ಈ ಸಮಯವನ್ನು ಶಕ್ತಿಯ 9 ರೂಪಗಳ ಪೂಜೆಗೆ ಪ್ರಮುಖ ಸಂದರ್ಭವೆಂದು ಪರಿಗಣಿಸಲಾಗಿದೆ. ಒಂಬತ್ತು ರೀತಿಯ ಶಕ್ತಿಯ ಹೆಸರುಗಳನ್ನು ತಿಳಿದುಕೊಳ್ಳೋಣ.
ಶೈಲಪುತ್ರಿ
ಬ್ರಹ್ಮಚಾರಿಣಿ
ಚಂದ್ರಘಂಟಾ
ಕೂಷ್ಮಾಂಡಾ
ಸ್ಕಂದಮಾತಾ
ಕಾತ್ಯಾಯಿನಿ
ಕಾಲರಾತ್ರಿ
ಮಹಾಗೌರಿ
ಸಿದ್ಧಿಧಾತ್ರಿ