ಈ ಮೂರು ದೇವರನ್ನು ಪೂಜಿಸೋರಿಗೆ ಯಾವ ಶನಿ ಕಾಟವೂ ಕಾಡೋದಿಲ್ಲ!
ಶನಿಯ ಹೆಸರು ಹೇಳಿದರೆ ಜನ ಹೆದರುತ್ತಾರೆ. ಸಾಡೇಸಾತಿ, ಅರ್ಧಾರ್ಧ ಅಥವಾ ಧೈಯ್ಯಾ ಎಂದರೆ ಬೆಚ್ಚುತ್ತಾರೆ. ಆದರೆ, ಈ ಮೂರು ದೇವರನ್ನು ನಂಬಿ ನಡೆಯೋರಿಗೆ ಶನಿ ಕಾಡೋದಿಲ್ಲ. ಅವರಿಗೆ ಸಾಡೇಸಾತಿ ನಡೆವಾಗಲೂ ಶುಭ ಫಲಿತಾಂಶ ಸಾಧ್ಯ.
ಶನಿಯು ಕರ್ಮ ಫಲದಾತ. ಪೌರಾಣಿಕ ಮತ್ತು ಧಾರ್ಮಿಕ ಕಥೆಗಳಲ್ಲಿ ಶನಿ ದೇವನನ್ನು ಕರ್ಮವನ್ನು ಕೊಡುವವ ಎಂದು ವಿವರಿಸಲಾಗಿದೆ. ಆತ ನ್ಯಾಯದ ದೇವರೂ ಆಗಿದ್ದಾನೆ. ಮನುಷ್ಯರ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಲೆಕ್ಕವನ್ನು ಇಡುವವನಾತ. ಶನಿದೇವನ ಹೆಸರು ಕೇಳಿದರೆ ಸಾಕು, ಜನ ಹೆದರುತ್ತಾರೆ. ಶನಿ ಕಾಟ ಎಂದರೆ ಬೆಚ್ಚುತ್ತಾರೆ.
ಶನಿಯ ಎರಡು ಹಂತಗಳಾದ ಸಾಡೇಸಾತಿ, ಧೈಯ್ಯಾ ಹೆಸರು ಕೇಳಿದರೆ ಜೀವನದ ಧೈರ್ಯವೇ ಉಡುಗುವಂತಾಗುತ್ತದೆ. ಏಕೆಂದರೆ ಶನಿಯು ಈ ಸಮಯದಲ್ಲಿ ಸಾಕಷ್ಟು ಕಷ್ಟ ಕೊಟ್ಟು ನೋಡುತ್ತಾನೆ. ವ್ಯಕ್ತಿಯ ಜೀವನದ ಅತಿ ಕಷ್ಟಕರ ಘಟ್ಟ ಇದಾಗಿದೆ ಎನ್ನಲಾಗುತ್ತದೆ. ನಿಮ್ಮ ಜಾತಕದಲ್ಲಿ ಕೂಡಾ ಸಾಡೇಸಾತಿಯೋ, ಶನಿ ಧೈಯ್ಯಾವೋ ನಡೆಯುತ್ತಿದ್ದರೆ ಧೈರ್ಯ ಕಳೆದುಕೊಳ್ಳಬೇಕಾಗಿಲ್ಲ.
ನೀವೇನಾದರೂ ಈ ಮೂರು ದೇವರನ್ನು ನಂಬಿ ನಡೆಯುವವರಾದರೆ, ಈ ಮೂರು ದೇವರನ್ನು ಪೂಜಿಸುವವರಾದರೆ ಶನಿ ನಿಮಗೆ ಸಾಡೇಸಾತಿಯಲ್ಲೂ ಯಾವ ಬಾಧೆ ಕೊಡುವವನಲ್ಲ. ಶನಿ(Lord Shani)ಯ ಭಕ್ತಿಭಾವಕ್ಕೆ ಗುರಿಯಾಗಿರುವ ಈ ಮೂವರು ದೇವರು ಯಾರು ಎಂದು ತಿಳಿಸುತ್ತೇವೆ.
ಪ್ರಸ್ತುತ, ಶನಿಯ ಧೈಯ್ಯಾ ಮತ್ತು ಸಾಡೇಸಾತಿ(Sade Sati)ಯು ಮಿಥುನ, ತುಲಾ, ಧನು ರಾಶಿ, ಮಕರ ಮತ್ತು ಕುಂಭ ರಾಶಿಯ ಮೇಲೆ ಉಳಿದಿದೆ. ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ಪ್ರಸ್ತುತ, ಶನಿ ಧೈಯಾ ಮಿಥುನ ಮತ್ತು ತುಲಾದಲ್ಲಿ ನಡೆಯುತ್ತಿದೆ. ಇದೇ ವೇಳೆ ಧನು, ಮಕರ, ಕುಂಭ ರಾಶಿಗಳಲ್ಲಿ ಸಾಡೇ ಸಾತಿ ನಡೆಯುತ್ತಿದೆ.
ಶನಿಯು ಯಾರಿಗೆ ತೊಂದರೆ ಕೊಡುವುದಿಲ್ಲ?
ನಂಬಿಕೆಯ ಪ್ರಕಾರ, ಭಗವಾನ್ ಶಿವ, ಆಂಜನೇಯ ಮತ್ತು ಶ್ರೀ ಕೃಷ್ಣನನ್ನು ಪೂಜಿಸುವವರಿಗೆ ಶನಿದೇವನು ತೊಂದರೆ ಕೊಡುವುದಿಲ್ಲ. ಬದಲಿಗೆ ಸಾಡೇಸಾತಿ, ಧೈಯ್ಯಾ ಸಂದರ್ಭದಲ್ಲೂ ಶುಭ ಫಲಿತಾಂಶಗಳನ್ನು ನೀಡುತ್ತಾನೆ.
ಶಿವನನ್ನು ತಪಸ್ಸಿನಿಂದ ಸಂತೋಷಪಡಿಸಿದ!
ದಂತಕಥೆಯ ಪ್ರಕಾರ, ಶನಿಯ ತಂದೆ ಸೂರ್ಯ ದೇವ(Sun God)ರು ಒಮ್ಮೆ ತನ್ನ ಪತ್ನಿ ಛಾಯಾಳನ್ನು ಅವಮಾನಿಸಿದನು. ತಾಯಿಗಾದ ಅವಮಾನಕ್ಕೆ ಮನನೊಂದ ಶನಿದೇವನು ಕಠಿಣ ತಪಸ್ಸು ಮಾಡಿದನು. ಅದರ ನಂತರ ಶಿವನು ಪ್ರಸನ್ನನಾದನು. ಆಗ ಶಿವನು ಶನಿದೇವನನ್ನು ಎಲ್ಲಾ ಗ್ರಹಗಳ ನ್ಯಾಯಾಧೀಶನನ್ನಾಗಿ ಮಾಡಿದನು ಮತ್ತು ದೇವರುಗಳು ಸಹ ಅವನ ನೆರಳಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವರವನ್ನು ನೀಡಿದನು.
ಆಂಜನೇಯನಿಂದ ಶನಿಯ ಗರ್ವಭಂಗ
ಶನಿದೇವನು ಹನುಮಂತ ಭಕ್ತರಿಗೂ ತೊಂದರೆ ಕೊಡುವುದಿಲ್ಲ. ಶನಿದೇವನು ತನ್ನ ಶಕ್ತಿಯ ಮೇಲೆ ದುರಹಂಕಾರಿಯಾದಾಗ ಅದನ್ನು ಆಂಜನೇಯ(Hanumanji)ನು ಛಿದ್ರಗೊಳಿಸಿದನು. ಅದರ ನಂತರ ಶನಿದೇವನು ಆಂಜನೇಯನ ಭಕ್ತರಿಗೆ ತಾನು ತೊಂದರೆ ಕೊಡುವುದಿಲ್ಲ ಎಂದು ಹನುಮಂತನಿಗೆ ಭರವಸೆ ನೀಡಿದನು.
ಶನಿಯು ಒಬ್ಬ ಕೃಷ್ಣ ಭಕ್ತ
ಶನಿ ದೇವನು ಕೃಷ್ಣ(Lord Krishna) ಭಕ್ತ. ದಂತಕಥೆಯ ಪ್ರಕಾರ, ಶ್ರೀಕೃಷ್ಣನನ್ನು ಮೆಚ್ಚಿಸಲು ಶನಿದೇವನು ಮಥುರಾದ ಕೋಸಿಕಲನ ಕೋಕಿಲವನದಲ್ಲಿ ಕಠಿಣ ತಪಸ್ಸು ಮಾಡಿದನು. ಅವನ ತಪಸ್ಸಿಗೆ ಪ್ರಸನ್ನನಾದ ಶ್ರೀಕೃಷ್ಣನು ಶನಿದೇವನಿಗೆ ಕೋಗಿಲೆಯ ರೂಪದಲ್ಲಿ ಕಾಣಿಸಿಕೊಂಡನು. ಈ ದೇವಾಲಯವು ಇಂದಿಗೂ ಈ ಕಾರಣಕ್ಕಾಗಿ ಗುರುತಿಸಲ್ಪಟ್ಟಿದೆ.