MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Astrology
  • Festivals
  • ಶ್ರೀಕೃಷ್ಣನ ಪ್ರಕಾರ ಬಡತನಕ್ಕೆ ಕಾರಣ ಆಗುತ್ತೆ ಈ ಗಿಡ, ನಿಮ್ಮ ಮನೆ ಬಳಿ ಇದ್ಯಾ ನೋಡಿ

ಶ್ರೀಕೃಷ್ಣನ ಪ್ರಕಾರ ಬಡತನಕ್ಕೆ ಕಾರಣ ಆಗುತ್ತೆ ಈ ಗಿಡ, ನಿಮ್ಮ ಮನೆ ಬಳಿ ಇದ್ಯಾ ನೋಡಿ

ವಾಸ್ತು ಶಾಸ್ತ್ರ ಮತ್ತು ಪುರಾಣಗಳ ಪ್ರಕಾರ, ಸಸ್ಯಗಳು ನಮ್ಮ ಹಣೆಬರಹದ ಮೇಲೆ ಆಳವಾದ ಪರಿಣಾಮ ಬೀರುತ್ತವೆ. ಕೆಲ ಸಸ್ಯಗಳಿಂದ ನಕಾರಾತ್ಮಕ ಶಕ್ತಿ ನಮ್ಮ ಮನೆ ಮನಸ್ಸನ್ನು ಪ್ರವೇಶ ಮಾಡುತ್ತದೆ.  ಧಾರ್ಮಿಕ ನಂಬಿಕೆಗಳ ಪ್ರಕಾರ, ಶ್ರೀಕೃಷ್ಣ ಸ್ವತಃ ಮನೆಯ ಶಾಂತಿಯನ್ನು ಕದಡುವ ಕೆಲವು ಮರಗಳ ಬಗ್ಗೆ ಮಾತನಾಡಿದ್ದಾನೆ. 

2 Min read
Author : Roopa Hegde
Published : Feb 16 2026, 09:12 PM IST
Share this Photo Gallery
  • FB
  • TW
  • Linkdin
  • Whatsapp
17
ಕಳ್ಳಿ ಮತ್ತು ಮುಳ್ಳಿನ ಸಸ್ಯಗಳು
Image Credit : Asianet News

ಕಳ್ಳಿ ಮತ್ತು ಮುಳ್ಳಿನ ಸಸ್ಯಗಳು

ವಾಸ್ತು ಪ್ರಕಾರ, ಕಳ್ಳಿ ಸೇರಿದಂತೆ ಮುಳ್ಳಿನ ಸಸ್ಯಗಳನ್ನು ಮನೆಯೊಳಗೆ ಎಂದಿಗೂ ನೆಡಬಾರದು. ಶ್ರೀಕೃಷ್ಣನ ಪ್ರಕಾರ, ಈ ಸಸ್ಯಗಳು ನೋವು ಮತ್ತು ಒತ್ತಡವನ್ನು ಉಂಟುಮಾಡುತ್ತವೆ. ಮನೆಯಲ್ಲಿ ಬೆಳೆಯುವ ಈ ಸಸ್ಯಗಳು ಮನೆಯಲ್ಲಿ ಆಗಾಗ ಜಗಳಕ್ಕೆ ಕಾರಣವಾಗುತ್ತದೆ. ಮಾನಸಿಕ ಅಶಾಂತಿಗೆ ಕಾರಣವಾಗುತ್ತದೆ. ಗುಲಾಬಿಗಳನ್ನು ಹೊರತುಪಡಿಸಿ, ಇತರ ಎಲ್ಲ ಮುಳ್ಳಿನ ಸಸ್ಯಗಳು ಮನೆಯ ಸಂತೋಷ ಮತ್ತು ಸಮೃದ್ಧಿಗೆ ಅಡ್ಡಿಯಾಗುತ್ತವೆ. ಅನಗತ್ಯ ಖರ್ಚು ಹೆಚ್ಚಾಗುತ್ತದೆ.

27
ಬೋನ್ಸಾಯ್ ಸಸ್ಯಗಳು
Image Credit : Asianet News

ಬೋನ್ಸಾಯ್ ಸಸ್ಯಗಳು

ಇತ್ತೀಚಿನ ದಿನಗಳಲ್ಲಿ ಬೋನ್ಸಾಯ್ ಸಸ್ಯಗಳು ಇಂಟಿರಿಯರ್ ಅಲಂಕಾರಕ್ಕಾಗಿ ಸಾಕಷ್ಟು ಜನಪ್ರಿಯವಾಗಿವೆ. ವಾಸ್ತು ಪ್ರಕಾರ, ಇವುಗಳನ್ನು ಬಹಳ ಅಶುಭವೆಂದು ಪರಿಗಣಿಸಲಾಗುತ್ತದೆ. ಬೋನ್ಸಾಯ್ ಒಂದು ಸಸ್ಯವಾಗಿದ್ದು, ಅದರ ನೈಸರ್ಗಿಕ ಬೆಳವಣಿಗೆ ಕುಂಠಿತವಾಗಿದೆ. ಇದನ್ನು ಮನೆಯಲ್ಲಿ ಇಡುವುದರಿಂದ ಕುಟುಂಬದ ವೃತ್ತಿ ಪ್ರಗತಿ ಮತ್ತು ಆರ್ಥಿಕ ಪ್ರಗತಿಗೆ ಅಡ್ಡಿಯಾಗುತ್ತದೆ.

Related Articles

Related image1
ಫೆಬ್ರವರಿ 23 ರಿಂದ ಕುಂಭ ರಾಶಿಯಲ್ಲಿ ಮಂಗಳ, ಈ ರಾಶಿಗೆ ಬ್ಯಾಂಕ್ ಬ್ಯಾಲೆನ್ಸ್ ಡಬಲ್, ಸಂಪತ್ತಿನ ಮಳೆ
Related image2
ಈ 5 ರಾಶಿ ಜನರಿಗೆ ಮಾತ್ರ ಇದೆ ಸಂಪತ್ತನ್ನು ಆಕರ್ಷಿಸುವ ಶಕ್ತಿ, ಹಣವೋ ಹಣ
37
ಹುಣಸೆ ಮರ
Image Credit : Asianet News

ಹುಣಸೆ ಮರ

ಪ್ರಾಚೀನ ನಂಬಿಕೆಗಳ ಪ್ರಕಾರ, ಹುಣಸೆ ಮರವು ನಕಾರಾತ್ಮಕ ಶಕ್ತಿಗಳನ್ನು ಹೊಂದಿದೆ. ಮನೆ ಹತ್ತಿರ ಹುಣಸೆ ಗಿಡಗಳನ್ನು ಬೆಳೆಸಬಾರದು. ಇವು ಭಯದ ವಾತಾವರಣ ಉಂಟುಮಾಡುತ್ವೆ. ಕುಟುಂಬ ಸದಸ್ಯರು ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗಲು ಇದು ಕಾರಣವಾಗುತ್ತೆ. ಈ ಮರವು ಮನೆಗೆ ಬಡತನಕ್ಕೆ ದಾರಿಮಾಡಿಕೊಡುತ್ತೆ. ಮನೆಯಲ್ಲಿರುವ ಸಂಪತ್ತು ಅನಗತ್ಯವಾಗಿ ಖಾಲಿಯಾಗುತ್ತೆ.

47
ಹಾಲಿನಂತ ರಸದ ಸಸ್ಯ
Image Credit : Asianet News

ಹಾಲಿನಂತ ರಸದ ಸಸ್ಯ

ನೀವು ಕೊಂಬೆ ಅಥವಾ ಎಲೆಗಳು ಮುರಿದಾಗ ಬಿಳಿ, ಕ್ಷೀರ ದ್ರವ ಹೊರ ಬರುವ ಸಸ್ಯಗಳನ್ನು ಮನೆಯಲ್ಲಿ ಎಂದಿಗೂ ಇಡಬಾರದು. ವಾಸ್ತು ಶಾಸ್ತ್ರದ ಪ್ರಕಾರ, ಈ ಸಸ್ಯಗಳು ಮನೆಯ ಸಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತವೆ. ಇವು ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತವೆ. ಇವು ಆರೋಗ್ಯವನ್ನು ಹಾಳು ಮಾಡುತ್ತವೆ.

57
ಮೆಹೆಂದಿ
Image Credit : Asianet News

ಮೆಹೆಂದಿ

ಮೆಹೆಂದಿ ಸಸ್ಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇದನ್ನು ಸೌಂದರ್ಯವರ್ದಕವಾಗಿ ಬಳಸಲಾಗುತ್ತದೆ. ಆದ್ರೆ ಇದನ್ನು ಮನೆಯಲ್ಲಿ ಬೆಳೆಸುವುದು ಒಳ್ಳೆಯದಲ್ಲ.ಇದು ಕೆಟ್ಟ ಶಕ್ತಿಯನ್ನು ಆಕರ್ಷಿಸುತ್ತದೆ.

67
ಒಣಗಿದ ಸಸ್ಯ
Image Credit : Asianet News

ಒಣಗಿದ ಸಸ್ಯ

ಮನೆಯಲ್ಲಿ ಯಾವುದೇ ಗಿಡ ಒಣಗ್ತಿದ್ದರೆ ತಕ್ಷಣ ಅದನ್ನು ಕಿತ್ತೆಸೆಯಿರಿ. ಒಣಗಿದ ಗಿಡಗಳು ದುರದೃಷ್ಟಕ್ಕೆ ಕಾರಣವಾಗುತ್ವೆ. ಇದು ನಕಾರಾತ್ಮಕತೆಯನ್ನು ಹರಡುತ್ತದೆ. ಸಂಪತ್ತಿನ ಹರಿವನ್ನು ತಡೆಯುತ್ತದೆ. ಇದ್ರಿಂದ ಮನೆಯಲ್ಲಿ ಅಭಿವೃದ್ಧಿ ಶೂನ್ಯವಾಗುತ್ತದೆ. ಬಡತನ ನಿಮ್ಮನ್ನು ಆವರಿಸುತ್ತದೆ.

77
ಇಂಥ ಗಿಡಗಳನ್ನು ಕಿತ್ತುಹಾಕೋದು ಏಕೆ ಮುಖ್ಯ?
Image Credit : Asianet News

ಇಂಥ ಗಿಡಗಳನ್ನು ಕಿತ್ತುಹಾಕೋದು ಏಕೆ ಮುಖ್ಯ?

ಸಸ್ಯಗಳಿಂದ ಹೊರಸೂಸುವ ಶಕ್ತಿ ವಾಸ್ತು ಮೇಲೆ ನೇರ ಪರಿಣಾಮ ಬೀರುತ್ತದೆ. ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಶ್ರೀ ಕೃಷ್ಣನ ಬೋಧನೆಗಳನ್ನು ಮತ್ತು ವಾಸ್ತು ನಿಯಮಗಳನ್ನು ಅನುಸರಿಸಿ, ಗಿಡಗಳನ್ನು ಬೆಳೆಸುವುದ್ರಿಂದ ಲಕ್ಷ್ಮಿ ದೇವಿ ಮನೆಗೆ ಬರ್ತಾಳೆ. ಈ ಅಶುಭ ಸಸ್ಯಗಳನ್ನು ತೆಗೆದುಹಾಕಿದಾಗ, ಮನೆಯ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಸಕಾರಾತ್ಮಕ ಆಲೋಚನೆಗಳು ಹರಡುತ್ತವೆ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಜ್ಯೋತಿಷ್ಯ
ವಾಸ್ತು ಸಲಹೆಗಳು
ಕೃಷ್ಣ

Latest Videos
Recommended Stories
Recommended image1
ಈ 5 ರಾಶಿ ಜನರಿಗೆ ಮಾತ್ರ ಇದೆ ಸಂಪತ್ತನ್ನು ಆಕರ್ಷಿಸುವ ಶಕ್ತಿ, ಹಣವೋ ಹಣ
Recommended image2
ಅದೃಷ್ಟ ರಾಶಿ ಚಿಹ್ನೆಗಳು: ಗ್ರಹಗತಿಯಿಂದ ಆ ರಾಶಿಗೆ ಶುಭ, ಹಠಾತ್ ಆರ್ಥಿಕ ಲಾಭ, ಉದ್ಯೋಗಾವಕಾಶ
Recommended image3
ಫೆಬ್ರವರಿ 23 ರಿಂದ ಕುಂಭ ರಾಶಿಯಲ್ಲಿ ಮಂಗಳ, ಈ ರಾಶಿಗೆ ಬ್ಯಾಂಕ್ ಬ್ಯಾಲೆನ್ಸ್ ಡಬಲ್, ಸಂಪತ್ತಿನ ಮಳೆ
Related Stories
Recommended image1
ಫೆಬ್ರವರಿ 23 ರಿಂದ ಕುಂಭ ರಾಶಿಯಲ್ಲಿ ಮಂಗಳ, ಈ ರಾಶಿಗೆ ಬ್ಯಾಂಕ್ ಬ್ಯಾಲೆನ್ಸ್ ಡಬಲ್, ಸಂಪತ್ತಿನ ಮಳೆ
Recommended image2
ಈ 5 ರಾಶಿ ಜನರಿಗೆ ಮಾತ್ರ ಇದೆ ಸಂಪತ್ತನ್ನು ಆಕರ್ಷಿಸುವ ಶಕ್ತಿ, ಹಣವೋ ಹಣ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved