ಮದುವೆಯಾದ ಬಳಿಕ ಈ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯುತ್ತಂತೆ
ಮದುವೆಯಾದ ನಂತರ, ತಮ್ಮ ಕರಿಯರ್ ನಲ್ಲಿ ಬೆಳವಣಿಗೆ (career development) ಹೊಂದಲು ಸಾಧ್ಯವಿಲ್ಲ ಅಥವಾ ಭವಿಷ್ಯದಲ್ಲಿ ಬೆಳವಣಿಗೆಗೆ ಅಡ್ಡಿಪಡಿಸುತ್ತದೆ ಎಂದು ಜನರು ಹೆಚ್ಚಾಗಿ ಭಾವಿಸುತ್ತಾರೆ. ಆದರೆ ಮದುವೆಯ ನಂತರವೂ ಕೆಲವು ಜನರಿಗೆ ಅದೃಷ್ಟ (luck) ಖುಲಾಯಿಸುತ್ತದೆ. ಹೌದು, ಅದು ನಿಜ. ಕೆಲವರು ಮದುವೆಯ ನಂತರ ಪ್ರತಿಯೊಂದರಲ್ಲೂ ವಿಜಯ ಸಾಧಿಸಬಹುದು.

ಹೌದು ನಾವು ಹೇಳ್ತಾ ಇರೋದು ಹೆಸರಿನಲ್ಲಿರೋ ಭವಿಷ್ಯದ ಬಗ್ಗೆ. ಕೆಲವು ಅಕ್ಷರಗಳಿಂದ ಹೆಸರು ಆರಂಭವಾಗೋ (first letter) ಜನರು ಅದೃಷ್ಟವನ್ನು ಹೊತ್ತು ತರುತ್ತಾರೆ. ಈ ಅಕ್ಷರಗಳಿಂದ ಪ್ರಾರಂಭವಾಗುವ ಹೆಸರುಗಳ ಜನರೊಂದಿಗೆ ಮದುವೆಯಾದರೆ ಅದೃಷ್ಟವೇ ಬದಲಾಗುತ್ತದೆ. ಆ ಅಕ್ಷರಗಳು ಯಾವುವು ಎಂದು ನೋಡೋಣ…
ಯಾರ ಹೆಸರು F ಅಕ್ಷರದಿಂದ ಪ್ರಾರಂಭವಾಗುತ್ತದೆಯೋ ಅವರ ಹಣೆಬರಹವು ಮದುವೆಯ ನಂತರ ಬದಲಾಗುತ್ತದೆ. ಈ ಜನರು ತುಂಬಾ ಕಠಿಣ ಪರಿಶ್ರಮಿಗಳು ಮತ್ತು ಸಕಾರಾತ್ಮಕ ಚಿಂತನೆಯನ್ನು (positive thoughts) ಹೊಂದಿರುತ್ತಾರೆ. ಆದರೆ ಅದರ ಹೊರತಾಗಿಯೂ, ಅವರಿಗೆ ಲಕ್ ಇರುವುದಿಲ್ಲ, ಆದರೆ ಅವರ ಹಣೆಬರಹ ಮತ್ತು ಅದೃಷ್ಟ ಎರಡೂ ಮದುವೆಯ ನಂತರ ಬದಲಾಗಬಹುದು.
ಯಾರ ಹೆಸರು H ನಿಂದ ಪ್ರಾರಂಭವಾಗುತ್ತದೆಯೋ ಆ ಜನರು ತಮ್ಮ ಸಂಗಾತಿಯೊಂದಿಗೆ ಅದೃಷ್ಟ ಪಡೆಯುತ್ತಾರೆ. ಎಚ್ ಎಂಬ ಹೆಸರಿನಿಂದ ಪ್ರಾರಂಭವಾಗುವ ಜನರು ತುಂಬಾ ಸ್ವೀಟ್ ಆಗಿರುತ್ತಾರೆ ಮತ್ತು ಎಲ್ಲರ ಹೃದಯವನ್ನು ಗೆಲ್ಲುತ್ತಾರೆ. ಅವರು ತಮ್ಮ ಸ್ವಂತ ಗುರುತನ್ನು ರಚಿಸುವಲ್ಲಿ ಯಶಸ್ವಿಯಾಗುತ್ತಾರೆ.
ಯಾರ ಹೆಸರು M ಅಕ್ಷರದಿಂದ ಪ್ರಾರಂಭವಾಗುತ್ತದೆಯೋ ಅವರು ಕಠಿಣ ಪರಿಶ್ರಮಿಗಳಾಗುವುದರ (hard worker)ಜೊತೆಗೆ ಎಲ್ಲವನ್ನೂ ಸಾಧಿಸಲು ಸಾಧ್ಯವಾಗುತ್ತದೆ. ಇವರು ಹೆಸರು ಮತ್ತು ಗುರುತು ಎರಡನ್ನೂ ಪಡೆಯಬಹುದು. ಅವರು ಮದುವೆಯ ನಂತರ ಅದೃಷ್ಟಶಾಲಿಗಳಾಗುತ್ತಾರೆ .
P ಅಕ್ಷರದಿಂದ ಪ್ರಾರಂಭವಾಗುವ ಜನರು ಶುದ್ಧ ಮನಸ್ಸು, ಕಠಿಣ ಪರಿಶ್ರಮಿ ಮತ್ತು ಹೃದಯವಂತರಾಗಿರುತ್ತಾರೆ. ಅವರು ತಮ್ಮದೇ ಆದ ಗುರುತನ್ನು ಸೃಷ್ಟಿಸುತ್ತಾರೆ ಮತ್ತು ಯಶಸ್ಸನ್ನು ಸಾಧಿಸುತ್ತಾರೆ (success life). ಮದುವೆಯ ನಂತರ, ಅವರು ಸಾಕಷ್ಟು ಹೆಸರನ್ನು ಗಳಿಸುತ್ತಾರೆ ಮತ್ತು ಒಳ್ಳೆ ಸ್ಥಾನವನ್ನು ಕಂಡುಕೊಳ್ಳಬಹುದು.